ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಎಚ್ಡಿಕೆ ಬಗ್ಗೆ ಸಿಎಂ ಹೀಗಾ ಟೀಕೆ ಮಾಡೋದು!

Posted By:
Subscribe to Oneindia Kannada
   ಎಚ್ ಡಿ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯದ ಬಗ್ಗೆ ಟೀಕಿಸಿದ ಸಿದ್ದರಾಮಯ್ಯ | Oneindia Kannada

   ಹೃದಯ ಶಸ್ತ್ರಚಿಕಿತ್ಸೆಗೊಳಗಾದ ನಂತರ ಸ್ವಲ್ಪದಿನ ವಿಶ್ರಾಂತಿ ತೆಗೆದುಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಯವರ 'ವಿಕಾಸ ಯಾತ್ರೆ'ಯ ಮೊದಲ ಹಂತದ ಯಾತ್ರೆ, ಚಾಮುಂಡಿಯಿಂದ ಹರಿಹರದವರೆಗೆ ಕ್ರಮಿಸಿ ಮುಕ್ತಾಯಗೊಂಡಿದೆ.

   ಮೂರು ದಿನಗಳ ಯಾತ್ರೆಯಲ್ಲಿ ಎರಡು ದಿನ ಗ್ರಾಮವಾಸ್ತವ್ಯ ನಡೆಸಿದ ಕುಮಾರಸ್ವಾಮಿಯವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಸಿಎಂ ಲೇವಡಿಗೆ ಜೆಡಿಎಸ್ ವರಿಷ್ಠ ದೇವೇಗೌಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

   ಮೈ ಮರೆಯೋ ಚಾಳಿಯ ಕಾಂಗ್ರೆಸ್, 2 ತಿಂಗಳಲ್ಲಿ ಆಟ ಬದಲಿಸಬಹುದಾದ ಬಿಜೆಪಿ

   ಜೆಡಿಎಸ್ ವಿಕಾಸಯಾತ್ರೆಯನ್ನು ಲೇವಡಿ ಮಾಡುತ್ತಾ ಸಿದ್ದರಾಮಯ್ಯ, ಗ್ರಾಮವಾಸ್ತವ್ಯ ಮಾಡಲು ಕುಮಾರಸ್ವಾಮಿ ಬೆಂಗಳೂರಿನಿಂದ ದಿಂಬು, ಚಾಪೆ, ಕಮೋಡ್ ಹೊತ್ತುಕೊಂಡು ಹೋಗುತ್ತಾರೆಂದು ಸಿಎಂ ವ್ಯಂಗ್ಯವಾಡಿದ್ದಾರೆ.

   ಕುಮಾರಸ್ವಾಮಿಯವರಿಗೆ ಅನಾರೋಗ್ಯ ಇರುವುದನ್ನೂ ಅರಿತು, ಸಿಎಂ ನೀಡಿರುವ ಹೇಳಿಕೆಗೆ ದೇವೇಗೌಡರು ನೋವು ವ್ಯಕ್ತಪಡಿಸಿದರೆ, ಕುಮಾರಸ್ವಾಮಿ ರಾಜ್ಯದ ಜನತೆ ಇದನ್ನೆಲ್ಲಾ ನೋಡುತ್ತಿದ್ದಾರೆಂದು ಹೇಳಿ ಸುಮ್ಮನಾಗಿದ್ದಾರೆ.

   ಡಿಕೆಶಿ ಮನೆ ಮೇಲೆ ಐಟಿ ದಾಳಿ: ಸಿಎಂ ಸಿದ್ದರಾಮಯ್ಯ ಗಂಭೀರ ಹೇಳಿಕೆ

   ಹುಬ್ಬಳ್ಳಿ ಮತ್ತು ಬಾಗಲಕೋಟೆಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಆದಾಯ ತೆರಿಗೆ ಇಲಾಖೆಯ ದಾಳಿಗೆ ಡಿ ಕೆ ಶಿವಕುಮಾರ್ ಆಗಲಿ ಕಾಂಗ್ರೆಸ್ ಬೆದರುವುದಿಲ್ಲ. ಡಿಕೆಶಿ ಹುಟ್ಟು ಕಾಂಗ್ರೆಸ್ಸಿಗ, ಬಿಜೆಪಿಯವರಿಗೆ ಜಾತಿಯ ನಡುವೆ ವಿಷಬೀಜ ಬಿತ್ತುವುದಷ್ಟೇ ಗೊತ್ತಿರುವುದು ಎಂದು ಸಿಎಂ ಹೇಳಿದರು. ಮುಂದೆ ಓದಿ..

   ಸಿಎಂ ಲೇವಡಿ ಮಾಡಿದ್ದು ಹೀಗೆ

   ಸಿಎಂ ಲೇವಡಿ ಮಾಡಿದ್ದು ಹೀಗೆ

   ಜೆಡಿಎಸ್ ವಿಕಾಸಯಾತ್ರೆಯನ್ನು ಲೇವಡಿ ಮಾಡುತ್ತಾ, ಚುನಾವಣೆಯ ವೇಳೆ ಇದೆಲ್ಲಾ ಒಂದು ಸ್ಟಂಟ್, ಜನರಿಗೆ ಇದೆಲ್ಲಾ ಅರ್ಥವಾಗುತ್ತದೆ. ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಬೆಂಗಳೂರಿನಿಂದ ಕಮೋಡ್, ದಿಂಬು, ಚಾಪೆ ಹೊತ್ಕೊಂಡು ಹೋಗ್ತಾರೆ, ಇದೆಂತಾ ಗ್ರಾಮವಾಸ್ತವ್ಯ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

   ಕುಮಾರಸ್ವಾಮಿಗೆ ಹೃದಯ ಶಸ್ತಚಿಕಿತ್ಸೆಯಾಗಿರುವ ವಿಚಾರ

   ಕುಮಾರಸ್ವಾಮಿಗೆ ಹೃದಯ ಶಸ್ತಚಿಕಿತ್ಸೆಯಾಗಿರುವ ವಿಚಾರ

   ಕುಮಾರಸ್ವಾಮಿಗೆ ಹೃದಯ ಶಸ್ತಚಿಕಿತ್ಸೆಯಾಗಿರುವ ವಿಚಾರ ಗೊತ್ತಿದ್ದೂ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿರುವುದು ಬೇಸರದ ಸಂಗತಿ. ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಮೇಲೆ ಸಿದ್ದರಾಮಯ್ಯ, ಕುಮಾರಸ್ವಾಮಿಯ ಆರೋಗ್ಯ ವಿಚಾರಿಸಲು ಹೋಗಿದ್ದರು, ಈಗ ಈ ರೀತಿ ಮಾತನಾಡುವುದು ಸರಿಯೇ ಎಂದು ಗೌಡ್ರು ಪ್ರಶ್ನಿಸಿದ್ದಾರೆ.

   ಕುಮಾರಸ್ವಾಮಿಗೆ ನೆಲದ ಮೇಲೆ ಕೂರಲು ಆಗುವುದಿಲ್ಲ

   ಕುಮಾರಸ್ವಾಮಿಗೆ ನೆಲದ ಮೇಲೆ ಕೂರಲು ಆಗುವುದಿಲ್ಲ

   ಶಸ್ತ್ರಚಿಕಿತ್ಸೆಯಾದ ನಂತರ ಕುಮಾರಸ್ವಾಮಿಗೆ ನೆಲದ ಮೇಲೆ ಕೂರಲು ಆಗುವುದಿಲ್ಲ, ಹಾಗಿರುವಾಗ ಕಮೋಡ್ ತೆಗೆದುಕೊಂಡು ಹೋದರೆ ತಪ್ಪೇನಿದೆ. ರಾಜಕಾರಣದಲ್ಲಿ ವ್ಯಂಗ್ಯವಾಡುವುದಕ್ಕೂ ಒಂದು ಇತಿಮಿತಿ ಬೇಕು. ಈ ರೀತಿ ವ್ಯಂಗ್ಯವಾಡಲು ಅವರಿಗೆ ನಾಚಿಕೆಯಾಗುವುದಿಲ್ಲವೇ - ದೇವೇಗೌಡ.

   ಜನರ ಸೇವೆ ಮಾಡಬೇಕು ಎನ್ನುವುದು ಉದ್ದೇಶ

   ಜನರ ಸೇವೆ ಮಾಡಬೇಕು ಎನ್ನುವುದು ಉದ್ದೇಶ

   ಈಗ ತಾನೇ ಸುಧಾರಿಸಿಕೊಂಡು ವಿಕಾಸಯಾತ್ರೆ ಮತ್ತು ಗ್ರಾಮವಾಸ್ತವ್ಯ ಶುರುಮಾಡಿದ್ದೇನೆ. ನಮ್ಮ ವಿರೋಧಿಗಳು ನಮ್ಮನ್ನು ಟೀಕಿಸುವುದು ಸಹಜ. ಇನ್ನು ನನ್ನ ಗ್ರಾಮವಾಸ್ತವ್ಯದ ಬಗ್ಗೆ ವ್ಯಂಗ್ಯವಾಡುತ್ತಿರುವ ಮುಖ್ಯಮಂತ್ರಿಗಳ ಹೇಳಿಕೆಯ ಬಗ್ಗೆ ಪ್ರತಿಕ್ರಿಯ ನೀಡುವುದಿಲ್ಲ. ಜನರ ಸೇವೆ ಮಾಡಬೇಕು ಎನ್ನುವುದು ಉದ್ದೇಶ, ಇದನ್ನು ಜನರು ಅರಿತುಕೊಂಡರೆ ಸಾಕು, ಮುಖ್ಯಮಂತ್ರಿಗಳ ಸರ್ಟಿಫಿಕೇಟ್ ನನಗೆ ಬೇಕಿಲ್ಲ ಎಂದು ಕುಮಾರಸ್ವಾಮಿ, ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

   ಕಾಂಗ್ರೆಸ್ಸಿನಲ್ಲೇ ಬಹಳಷ್ಟು ಜನ ಅವರಿಗೆ ವಿರೋಧಿಗಳಿದ್ದಾರೆ

   ಕಾಂಗ್ರೆಸ್ಸಿನಲ್ಲೇ ಬಹಳಷ್ಟು ಜನ ಅವರಿಗೆ ವಿರೋಧಿಗಳಿದ್ದಾರೆ

   ಸಿದ್ದರಾಮಯ್ಯನವರು ಹಿಂದಿನದೆಲ್ಲಾ ಮರೆತಿದ್ದಾರೆ, ಕಾಂಗ್ರೆಸ್ಸಿನಲ್ಲೇ ಬಹಳಷ್ಟು ಜನ ಅವರಿಗೆ ವಿರೋಧಿಗಳಿದ್ದಾರೆ. ಮುಂದಿನ ಚುನಾವಣೆಯ ನಂತರ ಒಂದು ವೇಳೆ ನಮ್ಮ ಪಕ್ಷದ ಅವಶ್ಯಕತೆ ಕಾಂಗ್ರೆಸ್ಸಿಗೆ ಬಂದರೂ, ಸಿದ್ದರಾಮಯ್ಯ ಸಿಎಂ ಆಗುವಂತಿದ್ದರೆ, ಜೆಡಿಎಸ್ ಸಪೋರ್ಟ್ ಮಾಡಬಾರದು ಎಂದು ಕಾಂಗ್ರೆಸ್ಸಿಗರೇ ನನ್ನಲ್ಲಿ ಮನವಿ ಮಾಡಿದ್ದಾರೆ - ಕುಮಾರಸ್ವಾಮಿ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka Chief Minister Siddaramaiah mocks JDS State President HD Kumaraswamy 'Grama Vastavya' (Village stay). CM says, HDK will go with Pillow, mat, commode for his Grama Vastavya.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ