ಮಾಜಿ, ಹಾಲಿಗಳ ಮುಗಿಯದ 'ವ್ಯಾಕ್' ಸಮರ: ಆಗ ವಾಚ್, ಈಗ ಕಾರ್

Posted By:
Subscribe to Oneindia Kannada

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಅಂತ್ಯ ಕಾಣದೇ, ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದೆ.

ವಾಚ್, ಗ್ಲಾಸ್ ನೊಂದಿಗೆ ಆರಂಭವಾದ ಮಾತಿನ ಚಕಮಕಿ, ಈಗ ಎಚ್ಡಿಕೆ ಮಗನ ಕಾರು ಮತ್ತು ಸಿನಿಮಾ ನಿರ್ಮಾಣದತ್ತ ಸುತ್ತಲಾರಂಭಿಸಿದೆ. ನನ್ನ ಕೈಗಡಿಯಾರವನ್ನು ಕುಮಾರಸ್ವಾಮಿಗೆ ಮಾತ್ರ ಮಾರುತ್ತೇನೆ ಎಂದಿದ್ದ ಸಿದ್ದರಾಮಯ್ಯಗೆ, ಎಚ್ಡಿಕೆ ತನ್ನದೇ ಶೈಲಿಯಲ್ಲಿ ಚಾಟಿ ಬೀಸಿದ್ದಾರೆ. (ಸಿದ್ದು ಧರಿಸುವ ವಾಚ್ ಬೆಲೆ ಇಷ್ಟೊಂದಾ)

ಸಿಎಂ ಹೇಳಿಕೆಗೆ ಉತ್ತರಿಸುತ್ತಿದ್ದ ಕುಮಾರಸ್ವಾಮಿ, ಸೆಕೆಂಡ್ ಹ್ಯಾಂಡ್ ವಸ್ತು ತೆಗೆದುಕೊಳ್ಳಲು ನಾನೇನು ಗುಜುರಿ ಅಂಗಡಿ ಇಟ್ಟುಕೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿಗಳು ಧರಿಸುವ ವಾಚ್ ತನಗೆ ಯಾರೋ ಉಡುಗೊರೆ ನೀಡಿದ್ದು ಎಂದು ಹೇಳಿದ್ದಾರೆ. ಹಾಗಾದರೆ, ಆ ದುಬಾರಿ ಗಿಫ್ಟ್ ನೀಡಿದವರು ಯಾರು ಎಂತು ತಿಳಿದುಕೊಳ್ಳುವ ಹಕ್ಕು ಜನರಿಗಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. (ಹೆಬ್ಬಾಳ ಚುನಾವಣೆಯ ಮುನ್ನ ಡಿಕೆಶಿ ಸಿಡಿಸಿದ ಬಾಂಬ್)

ನನ್ನ ವೈಯಕ್ತಿಕ ವಿಚಾರದ ಬಗ್ಗೆ ಕುಮಾರಸ್ವಾಮಿ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ, ಅದನ್ನು ನಾನು ನೋಡಿಕೊಳ್ಳುತ್ತೇನೆ. ಅವರು ಶಾಸಕರಾಗಿದ್ದಾರೆ, ಜನರಾ ಕ್ಷೇಮಾಭಿವೃದ್ದಿ ಬಗ್ಗೆ ಗಮನ ನೀಡಲಿ ಎಂದು ಸಿದ್ದರಾಮಯ್ಯ, ಎಚ್ಡಿಕೆಗೆ ಬುದ್ದಿಮಾತನ್ನು ಹೇಳಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ

ದುಬಾರಿ ಹ್ಯುಬ್ಲೊಟ್ ವಜ್ರಖಚಿತ ವಾಚ್

ದುಬಾರಿ ಹ್ಯುಬ್ಲೊಟ್ ವಜ್ರಖಚಿತ ವಾಚ್

ಈ ನಡುವೆ, ಮುಖ್ಯಮಂತ್ರಿಗಳು ಧರಿಸುವ ದುಬಾರಿ ಹ್ಯುಬ್ಲೊಟ್ ವಜ್ರಖಚಿತ ವಾಚ್ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಲೋಕಾಯುಕ್ತ ಮೆಟ್ಟಲೇರಿದೆ. ಈಗಾಗಲೇ ಸಿಎಂ ವಿರುದ್ದ ಮೂರು ದೂರು ದಾಖಲಿಸಿರುವ ಸಂಸ್ಥೆಯ ರಾಮಮೂರ್ತಿ ಗೌಡ ಎನ್ನುವವರು, ಸಿದ್ದರಾಮಯ್ಯನವರು ತಮ್ಮ ದುಬಾರಿ ಗ್ಲಾಸ್ ಮತ್ತು ಕೈಗಡಿಯಾರದ ಬಗ್ಗೆ ಆಸ್ತಿ ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ ಎಂದು ದೂರಿದ್ದಾರೆ.

ಕುಮಾರಸ್ವಾಮಿ ಪುತ್ರನ ಕಾರು

ಕುಮಾರಸ್ವಾಮಿ ಪುತ್ರನ ಕಾರು

ನಿಮ್ಮ ಪುತ್ರ ಕೋಟ್ಯಂತರ ರೂಪಾಯಿ ಮೌಲ್ಯದ ಕಾರು ತೆಗೆದುಕೊಂಡಿದ್ದಾರಲ್ಲಾ ಮತ್ತು ಕೋಟಿಗಟ್ಟಲೆ ವೆಚ್ಚದಲ್ಲಿ ಸಿನಿಮಾ ಮಾಡ್ತಾ ಇದ್ದೀರಲ್ಲಾ, ಅದೆಲ್ಲಾ ಏನು ನಿಮ್ಮ ಪುತ್ರ ದುಡಿದಿದ್ದಾ ಎಂದು ಕುಮಾರಸ್ವಾಮಿಯನ್ನು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಹೇಳಿದ್ದು

ಕುಮಾರಸ್ವಾಮಿ ಹೇಳಿದ್ದು

ನನ್ನ ಪುತ್ರ ನಿಖಿಲ್ ಕಂಪೆನಿಯೊಂದರ ನಿರ್ದೇಶಕ, ಅವನು ದುಡಿದ ಸಂಪಾದನೆಯಲ್ಲೇ ಕಾರು ತೆಗೆದುಕೊಂಡಿದ್ದಾನೆ. ಸಿನಿಮಾಗೆ ಬೇರೆಯವರಿಂದ ಸಾಲ ಮಾಡಿ ಬಂಡವಾಳ ಹಾಕಿದ್ದೇನೆ. ನನ್ನ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನೀವು ಉಳಿಸಿಕೊಂಡಿದ್ದಾರಾ ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಗರಂ ಆಗಿದ್ದಾರೆ.

ದುಬಾರಿ ಬೆಲೆಯ ಗಿಫ್ಟ್

ದುಬಾರಿ ಬೆಲೆಯ ಗಿಫ್ಟ್

ವಾಚನ್ನು ಉಡುಗೊರೆಯಾಗಿ ಸ್ವೀಕರಿಸಿದ್ದೇನೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಇಷ್ಟು ದುಬಾರಿ ಬೆಲೆಯ ಗಿಫ್ಟ್ ಅನ್ನು ಸುಮ್ಮನೇ ಯಾರಾದರೂ ಕೊಡಲು ಸಾಧ್ಯವೇ? ಕೊಟ್ಟವರು ಮುಖ್ಯಮಂತ್ರಿಗಳಿಂದ ಭರ್ಜರಿ ಕೆಲಸ ಮಾಡಿಸಿಕೊಂಡಿರಬಹುದು ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಕಾಡದೇ ಇರುತ್ತಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಾಜಿ Vs ಹಾಲಿ

ಮಾಜಿ Vs ಹಾಲಿ

ನನ್ನ ಮಗ ದುಬಾರಿ ತೆಗೆದುಕೊಂಡಿದ್ದಾನೆ, ಅದು ಅವನ ಸಂಪಾದನೆ, ಅವನಿಷ್ಟ. ದುಬಾರಿ ಕಾರಿಗೆ ತೆರಿಗೆ ಕಟ್ಟಿರುತ್ತಾನೆ, ಕಟ್ಟಿಲ್ಲಾಂದರೆ ಅದನ್ನು ಕೇಳಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿದ್ದಾರೆ, ಇದನ್ನು ಕೇಳುವ ನೈತಿಕತೆ ಸಿದ್ದರಾಮಯ್ಯನವರಿಗೆ ಇಲ್ಲ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister of Karnatak Siddaramaiah and JDS State President and former CM HD Kumaraswamy war of words continues.
Please Wait while comments are loading...