• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಹನುಮ ಜಯಂತಿ ಶುಭಾಶಯ: ಲೇವಡಿ ಮಾಡಿದ ಟ್ವಿಟ್ಟಿಗರು

By Balaraj Tantry
|
   ಸಿದ್ದರಾಮಯ್ಯನವರ ಹನುಮಜ್ಜಯಂತಿ ಶುಭಾಶಯಕ್ಕೆ ಟ್ವಿಟ್ಟಿಗರು ಗರಂ | Oneindia Kannada

   ಅಂಜನೀಪುತ್ರ ಹನುಮ ಜಯಂತಿಯ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಸಮಸ್ತ ಜನತೆ ಶುಭ ಕೋರಿದ್ದಾರೆ. ಟ್ವಿಟ್ಟರ್ ಮೂಲಕ ಶುಭ ಕೋರಿದ ಮುಖ್ಯಮಂತ್ರಿಗಳನ್ನು ಟ್ವಿಟ್ಟಿಗರು ಲೇವಡಿ ಮಾಡಿದ್ದಾರೆ.

   ಹನುಮಜ್ಜಯಂತಿಯ ದಿನವಾದ ಶನಿವಾರ (ಮಾ 31) ಸಿಎಂ ಸಿದ್ದರಾಮಯ್ಯ, 'ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ' ಎಂದು @siddaramaiah ಅಕೌಂಟಿನಿಂದ ಟ್ವೀಟ್ ಮಾಡಿದ್ದರು.

   ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಹನುಮ ಭಕ್ತರನ್ನು ಬಂಧಿಸುವ ನೀವು, ಹನುಮ ಜಯಂತಿಗೆ ಶುಭ ಕೋರುವುದು ತರವಲ್ಲ, ನಿಮ್ಮ ಶುಭಾಶಯಗಳು ಯಾರಿಗೆ ಬೇಕಿದೆ, ನಾವು ಯಾವಾಗಲೂ ಸಿದ್ದರಾಮಯ್ಯನವರ ಪರ.. ಹೀಗೆ ಹಲವು ಟ್ವೀಟ್ ಪ್ರತಿಕ್ರಿಯೆಗಳು ಬಂದಿವೆ.

   ಹನುಮ ಜಯಂತಿಯ ಪ್ರಯುಕ್ತ ದೇಶದ ಸಮಸ್ತ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಜಕೀಯ ಮುಖಂಡರು ಶುಭ ಕೋರಿದ್ದಾರೆ. ಬಿಜೆಪಿಯ ಕರ್ನಾಟಕ ಘಟಕವೂ ಮುಖ್ಯಮಂತ್ರಿಗಳ ಶುಭಾಶಯಕ್ಕೆ ಅಣಕವಾಡಿದೆ.

   ಚೈತ್ರ ಮಾಸದಲ್ಲಿ ಬರುವ ಈ ಹನುಮ ಜಯಂತಿಯನ್ನು ಭಾರತದಲ್ಲಿ ವಿಶಿಷ್ಟ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಸಿಎಂ, ಬಿಜೆಪಿ ಟ್ವೀಟ್ ಮತ್ತು ಸಿದ್ದರಾಮಯ್ಯನವರಿಗೆ ಬಂದ ಕೆಲವೊಂದು ಪ್ರತಿಕ್ರಿಯೆಗಳು, ಮುಂದೆ ಓದಿ..

   ಸಿಎಂ ಸಿದ್ದರಾಮಯ್ಯ ಹನುಮಜ್ಜಯಂತಿ ಶುಭಾಶಯ

   ಸಿಎಂ ಸಿದ್ದರಾಮಯ್ಯ ಹನುಮಜ್ಜಯಂತಿ ಶುಭಾಶಯ

   ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಟ್ವೀಟ್ ಹೀಗಿದೆ, "ನಾಡಿನ ಸಮಸ್ತ ಜನತೆಗೆ ಹನುಮ‌ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ".

   ಬಿಜೆಪಿ ಪ್ರತಿಕ್ರಿಯಿಸಿದ್ದು ಹೀಗೆ

   ಬಿಜೆಪಿ ಪ್ರತಿಕ್ರಿಯಿಸಿದ್ದು ಹೀಗೆ

   ಮುಖ್ಯಮಂತ್ರಿಗಳ ಟ್ವೀಟಿಗೆ ಬಿಜೆಪಿ ಪ್ರತಿಕ್ರಿಯಿಸಿದ್ದು ಹೀಗೆ, " ಟ್ವಿಟ್ಟರ್ನಲ್ಲಿ ಶುಭಾಶಯ ಕೋರುವುದು ಹಾಗಿರಲಿ ಸರ್. ಗಣೇಶ ಚತುರ್ಥಿ, ಹನುಮ ಜಯಂತಿ, ರಾಮನವಮಿ ಹೀಗೆ ಎಲ್ಲ ಹಬ್ಬಗಳ ಆಚರಣೆಗೆ ಸರ್ಕಾರದಿಂದ ನೂರು ತೊಡಕನ್ನು ತಂದು, ಈಗ ಮಾತ್ರ ಟ್ವಿಟ್ಟರ್ನಲ್ಲಿ ಶುಭಾಶಯ ಕೊರ್ತೀರಲ್ಲ, ಏನು ಅನ್ನಿಸೋದಿಲ್ಲವಾ?".

   ಸಿದ್ದರಾಮಯ್ಯನವರನ್ನು ಅಣಕವಾಡಿದ ಟ್ವಿಟ್ಟಿಗರು

   ಸಿದ್ದರಾಮಯ್ಯನವರನ್ನು ಅಣಕವಾಡಿದ ಟ್ವಿಟ್ಟಿಗರು

   ಹಿಂದುತ್ವ ಅದು ಪ್ರತಿಯೊಬ್ಬ ಭಾರತೀಯನ ಜೀವನ ಶೈಲಿ. ಆದರೆ ದಾಳಿಕೋರರಿಂದ ಹಾಗೂ ಲದ್ದಿ ಜೀವಿಗಳಿಂದ ಆ ಜೀವನ ಶೈಲಿಗೆ ಆತಂಕ ಬಂದೊದಗಿದೆ. ಬಹು ದೈವ ಆರಾಧನೆ ಇದರ ಸಂಸ್ಕೃತಿ. ಆರಾಧನೆಗೆ ತಡೆಯೊಡ್ಡುತ್ತಿರುವುದು ಕಾಂಗ್ರೆಸ್. ನಾಚಿಕೆ ಆಗಬೇಕು ಸರ್ ನಿಮಗೆ, ಓಟಿಗಾಗಿ ಯಾವ ಬಣ್ಣವನ್ನಾದರು ಹಚ್ಚುತೀರಾ. 5 ವರ್ಷಗಳ ನಂತರ ನಮ್ಮ ನೆನಪು ಮಾಡಿಕೊಂಡ ನಿಮಗೆ ಧನ್ಯವಾದಗಳು ಸ್ವಾಮೀ, ಆದರೆ #ಈ_ಭಾರಿ_ಬಿಜೆಪಿ_ಸರಕಾರ

   ನಿಮ್ ಡಂಗಾಣಿ ಶುಭಾಷಯಗಳು ನಮ್ಗೆ ಬೇಕಿಲ್ಲಾ

   ನಿಮ್ ಡಂಗಾಣಿ ಶುಭಾಷಯಗಳು ನಮ್ಗೆ ಬೇಕಿಲ್ಲಾ

   ಸ್ವಾಮಿ ಇವತ್ತು ಊಟಕ್ಕೆ ಏನು?? ಮೀನಾ? ಬೀಫಾ? ಏನಾದರೂ ತಿನ್ಕೊಳ್ಳಿ ಆದರೆ ಎಲ್ಲರ ಮುಂದೆ ತಿಂದು ನಂತರ ದೇವಸ್ಥಾನಕ್ಕೆ ಮಾತ್ರ ಹೋಗ್ಬೇಡಿ. ನಿಮ್ ಡಂಗಾಣಿ ಶುಭಾಷಯಗಳು ನಮ್ಗೆ ಬೇಕಿಲ್ಲಾ ... ಎಲೆಕ್ಷನ್ ಬಂದ ಕೂಡ್ಲೆ ಹಿಂದುಗಳ ನೆನಪಾಗುತ್ತಲ್ವಾ ...

   ಹನುಮನ ಧೈರ್ಯದಿಂದಲೇ ಹಿಂದೂ ವಿರೇೂಧಿಗಳನ್ನು ಎದುರಿಸಿರೇೂದು

   ಹನುಮನ ಧೈರ್ಯದಿಂದಲೇ ಹಿಂದೂ ವಿರೇೂಧಿಗಳನ್ನು ಎದುರಿಸಿರೇೂದು

   ಏನ್ ಎಲೆಕ್ಷನ್ ಅಂತ ನಮ್ಮನ್ನು ಓಲೈಕೆ ಮಾಡ್ತಾಯಿದೀರಾ??? ನಿಮ್ kembridge ANAL-ytica ಟ್ರಿಕ್ಸ್.ಗೆ ನಾವ್ ಬಗ್ಗೋಲ್ಲಾ ... ಅಲ್ಲ ಸಾರ್ ಹನುನ ಮಾಲಧಾರಿಗಳನ್ನ ಬಂಧಿಸಿˌಹನುಮ ಜಯಂತಿಗೆ ನಿರ್ಬಂಧ ಹೇರಿˌ ಈಗ ಹನುಮ ಜಯಂತಿಗೆ ಶುಭಾಶಯ ಹೇಳುತ್ತಿರಲ್ಲ ಏನ್ ಸಾರ್ ಇದು Hypocrasy. ಆ ಹನುಮನ ಧೈರ್ಯದಿಂದಲೇ ನಿಮ್ಮಂತಹ ಹಿಂದೂ ವಿರೇೂಧಿಗಳನ್ನು ಎದುರಿಸಿರೇೂದು.......

   lok-sabha-home

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Chief Minister Siddaramaiah's Hanuma Jayanthi wishes tweet, Twitterite strong reply to CM tweet. Some of the tweets are like this, you are arresting Hanuma Bhaktas now you are wishing, during election time you will come to know the Hindu festival..

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more