ಬಿಜೆಪಿ ಡಿನೋಟಿಫೈ ಆರೋಪಕ್ಕೆ ಸಿದ್ದರಾಮಯ್ಯ ನೀಡಿದ ಸ್ಪಷ್ಟನೆಗಳು

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 11 : ಬಿಜೆಪಿ ನಾಯಕ ಬಿ.ಜೆ ಪುಟ್ಟಸ್ವಾಮಿ ಮಾಡಿರುವ ಡಿನೋಟಿಫಿಕೇಶನ್ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಸಗಟವಾಗಿ ತಳ್ಳಿ ಹಾಕಿದ್ದಾರೆ.

ಸಿದ್ದರಾಮಯ್ಯ ಮೇಲೆ 300 ಕೋಟಿ ರು ಭೂಹಗರಣ ಹೊರಿಸಿದ ಬಿಜೆಪಿ

ಈ ಬಗ್ಗೆ ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, "ನನ್ನಿಂದ ಯಾವುದೇ ರೀತಿಯಲ್ಲೂ ಡಿನೋಟಿಫಿಕೇಶನ್ ಅಕ್ರಮ ನಡೆದಿಲ್ಲ. ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಬಿಜೆಪಿ ಮುಖಂಡ ಬಿ.ಜೆ ಪುಟ್ಟಸ್ವಾಮಿ ಆರೋಪಕ್ಕೆ ಸಿಎಂ ತಿರುಗೇಟು ನೀಡಿದರು.

CM Siddaramaiah denies denotification allegation made by BJP

ಬೆಂಗಳೂರಿನ ಭೂಪಸಂದ್ರದಲ್ಲಿ ಸರ್ವೇ ನಂಬರ್ 20ರಲ್ಲಿ 6.26 ಎರಕೆಯನ್ನು ಜಮೀನನ್ನು ಸಿದ್ದರಾಮಯ್ಯ ಅವರು 2016ರ ಜೂನ್ ನಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂದು ಬಿಜೆಪಿ ಎಂಲ್ಸಿ ಪುಟ್ಟಸ್ವಾಮಿ ಆರೋಪ ಮಾಡಿದ್ದರು.

ಸೆಕ್ಷನ್ 48ರ ಪ್ರಕಾರ ಡಿ.ನೊಟಿಫಿಕೇಶನ್ ಮಾಡಬಹುದು. ಇದಕ್ಕೆ ಹಲವು ಪ್ರಕ್ರಿಯೆಗಳಿದ್ದು, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಡಿನೊಟಿಫಿಕೇಶನ್ ಗಾಗೇ ಒಂದು ಸಮಿತಿ ಇದೆ.

ಆ ಸಮಿತಿ ಮುಂದೆ ಹೋಗಿ ಅಲ್ಲಿ ಸಮಿತಿಯಲ್ಲಿ ಒಪ್ಪಿಗೆ ಆಗಬೇಕು. ಆದರೆ, ಸಮಿತಿ ಮುಂದೆ ಡಿ.ನೊಟಿಫಿಕೇಶನ್ ಪ್ರಪೋಸಲ್ ಹೋಗೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah today (OCT 11) vehemently denied the latest allegation of the BJP that he had ordered denotification of a parcel of land in the city to allegedly benefit Rs.300 crore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ