ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸುವ ವಾಚ್, ಗ್ಲಾಸ್ ಬೆಲೆ ಇಷ್ಟೊಂದಾ?

Posted By:
Subscribe to Oneindia Kannada

ರಾಜ್ಯದ ಜನತೆ ಎದುರಿಸುತ್ತಿರುವ ಗಂಭೀರ ವಿಚಾರ, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗುವುದು ಬಿಟ್ಟು, ಮುಖ್ಯಮಂತ್ರಿಗಳು ಧರಿಸುವ ವಾಚ್ ಮತ್ತು ಗ್ಲಾಸ್ ಮೇಲೆ ಟೀಕೆ, ಟಿಪ್ಪಣಿ ಅನಾವಶ್ಯಕ ಆರೋಪ, ಪ್ರತ್ಯಾರೋಪ ಮುಂದುವರಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧರಿಸುವ ಗ್ಲಾಸು ಮತ್ತು ವಾಚಿನ ಬೆಲೆ ಎಷ್ಟು ಎನ್ನುವ ವಿಚಾರದ ಸುತ್ತ ಅನಾವಶ್ಯಕ ಚರ್ಚೆ ಸುತ್ತೂರು ಮಠದಲ್ಲಿ ಮೊನ್ನೆ ಮೊನ್ನೆ ಅನಾವರಣಗೊಂಡಿತ್ತು. (ಜಯ ತರುತ್ತಾ ಗ್ರಾಮ ಸ್ವರಾಜ್ ಕಾಂಗ್ರೆಸ್ ಸಮಾವೇಶ)

ಈ ವಿಚಾರಕ್ಕೆ ಚಾಲನೆ ನೀಡಿದವರು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ. ಬೀದರ್ ನಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಮುಖ್ಯಮಂತ್ರಿಗಳು ಒಂದೂವರೆ ಲಕ್ಷ ರೂಪಾಯಿ ಗ್ಲಾಸ್, ಐವತ್ತು ಲಕ್ಷ ರೂಪಾಯಿಯ ವಾಚ್ ಧರಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು.

ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಮಠದಲ್ಲಿ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಮೌಢ್ಯದ ವಿಚಾರದಲ್ಲಿ ಸರಕಾರದ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. (ಸಿದ್ದರಾಮಯ್ಯ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿ)

ಬಸವಣ್ಣನ ಸಂಸ್ಕೃತಿಯ ಮೇಲೆ ನನಗೆ ನಂಬಿಕೆ, ಅದನ್ನೇ ನಂಬಿ ಕೆಲಸ ಮಾಡುತ್ತಿದ್ದೇನೆ. ಜನರ ನಂಬಿಕೆ, ಜಾತ್ರೆ, ಸಂಪ್ರದಾಯಕ್ಕೆ ನಮ್ಮ ವಿರೋಧವಿಲ್ಲ. ಆದರೆ ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಮೌಢ್ಯ ಬಿತ್ತುವುದನ್ನು ತಡೆಯುವುದು ನಮ್ಮ ಉದ್ದೇಶ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ವಾಚು, ಗ್ಲಾಸು, ಅದರ ಬೆಲೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಬೀದರ್ ನಲ್ಲಿ ಕುಮಾರಸ್ವಾಮಿ ಹೇಳಿದ್ದು

ಬೀದರ್ ನಲ್ಲಿ ಕುಮಾರಸ್ವಾಮಿ ಹೇಳಿದ್ದು

ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೂವರೆ ಲಕ್ಷ ರೂಪಾಯಿ ಬೆಲೆಬಾಳುವ ಗ್ಲಾಸ್, ಐವತ್ತು ಲಕ್ಷ ರೂಪಾಯಿ ಬೆಲೆಬಾಳುವ ವಾಚ್ ಧರಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

ಪತ್ರಕರ್ತರು ಎತ್ತಿದ ಪ್ರಶ್ನೆ

ಪತ್ರಕರ್ತರು ಎತ್ತಿದ ಪ್ರಶ್ನೆ

ಸುತ್ತೂರು ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಆಗುತ್ತಿದ್ದ ವೇಳೆ ಸಿದ್ದರಾಮಯ್ಯನವರಿಗೆ ಪತ್ರಕರ್ತರು, ಸರ್ ಕುಮಾರಸ್ವಾಮಿಯವರು ನೀವು ಲಕ್ಷಾಂತರ ರೂಪಾಯಿ ಬೆಲೆಬಾಳುವ ವಾಚ್ ಮತ್ತು ಗ್ಲಾಸ್ ಧರಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರಲ್ಲಾ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ ಅವರಿಗೆ ಬೇರೇನೂ ಕೆಲಸವಿಲ್ಲ ಎಂದು ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರನ್ನು ಲೇವಡಿ ಮಾಡುವ ಹೇಳಿಕೆಯನ್ನು ನೀಡಿದ್ದಾರೆ.

ಮುಖ್ಯಮಂತ್ರಿಗಳು ಹೇಳಿದ್ದು

ಮುಖ್ಯಮಂತ್ರಿಗಳು ಹೇಳಿದ್ದು

ತನ್ನ ಕನ್ನಡಕ ತೆಗೆದಿಟ್ಟು ಇದನ್ನು ಯಾರಾದರು 50 ಸಾವಿರ ಕೊಟ್ಟು ಖರೀದಿಸಿ, ತಮ್ಮ ವಾಚ್ ತೋರಿಸಿ ಈ ವಾಚ್ ಅನ್ನು 10 ಲಕ್ಷಕ್ಕೆ ಖರೀದಿಸಿ ಎಂದು ಮಾಧ್ಯಮದವರ ಮೂಲಕ ಮುಖ್ಯಮಂತ್ರಿಗಳು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಪರೋಕ್ಷವಾಗಿ ಎಚ್ಡಿಕೆಗೆ ತಿರುಗೇಟು

ಪರೋಕ್ಷವಾಗಿ ಎಚ್ಡಿಕೆಗೆ ತಿರುಗೇಟು

ದುಬಾರಿ ಬೆಲೆಯ ವಾಚ್ ಮತ್ತು ಗ್ಲಾಸ್ ಧರಿಸುವ ಶೋಕಿ ನನಗಿಲ್ಲ. ಇಂತಹ ಆರೋಪಗಳನ್ನು ನಮ್ಮ ರಾಜ್ಯದ ಕೆಲವು ರಾಜಕಾರಣಿಗಳು ಮಾತ್ರ ಮಾಡಲು ಸಾಧ್ಯ. ಯಾಕೆಂದರೆ ಅವರಿಗೆ ಅದರ ಅನುಭವ ಇರುತ್ತದೆ, ಹಾಗಾಗಿ ಅದರ ನಿಖರ ಬೆಲೆ ಅವರಿಗೆ ಮಾತ್ರ ಗೊತ್ತಿರುತ್ತದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ತಿರುಗೇಟು

ಕುಮಾರಸ್ವಾಮಿ ತಿರುಗೇಟು

50 ಸಾವಿರ ಕೊಟ್ಟು ಖರೀದಿಸಿ, 10 ಲಕ್ಷ ಕೊಟ್ಟು ಖರೀದಿಸಿ ಎನ್ನುವ ಹೇಳಿಕೆಗೆ ರಾಯಚೂರಿನಲ್ಲಿ ತಿರುಗೇಟು ನೀಡಿದ ಕುಮಾರಸ್ವಾಮಿ, ನಾನೇನು ಸೆಕೆಂಡ್ ಹ್ಯಾಂಡ್ ಗಿರಾಕಿಯಲ್ಲ. ಅವರಿಗೆ ಅದನ್ನು ಮಾರಾಟ ಮಾಡಬೇಕೆಂದಾಗ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿ ಎಂದು ಹೇಳಿ ತಿರುಗೇಟು ನೀಡಿದರು.

ಬೀದರ್ ನಲ್ಲಿ ನಡೆದ ಘಟನೆ

ಬೀದರ್ ನಲ್ಲಿ ನಡೆದ ಘಟನೆ

ರೈತರ ಸಭೆಯನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ, ರೈತನೊಬ್ಬ ಎದ್ದು ವಾಚ್ ಮತ್ತು ಗ್ಲಾಸ್ ಬಗ್ಗೆ ಪ್ರಸ್ತಾವಿಸಿದಾಗ ಸಿಟ್ಟಾದ ಸಿಎಂ, ವಾಚ್ ಬಿಚ್ಚಿ "ತಗೋಳಯ್ಯ 5 ಲಕ್ಷ ಕೊಡು" ಎಂದು ಗರಂ ಆಗಿದ್ದಾರೆ. ಅದಕ್ಕೆ ರೈತ ಸಾರ್... ಐನೂರು ರೂಪಾಯಿ ಕೊಡ್ತೀನಿ ಸಾರ್ ಎಂದು ವಾಚ್ ಗೆ ಬೆಲೆ ಫಿಕ್ಸ್ ಮಾಡಿದ ಘಟನೆ ವರದಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Champion of backward classes, Karnataka Chief Minister Siddaramaiah`s lavish lifestyle ridiculed by ex-CM, JDs leader H D Kumaraswamy. Both spat over expensive glass and wrist watch used by Cong CM.
Please Wait while comments are loading...