'ಸಿದ್ದರಾಮಯ್ಯನಂತ ಪಿಕ್ ಪಾಕೆಟರ್ ಯಾರು ಇಲ್ಲ'

ಹುಬ್ಬಳ್ಳಿ, ಮೇ 02: ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ವಿಚಾರ ನಡೆಸಿದೆ. ಎಂತಹ ನಾಚಿಕೆಗೇಡಿಗಳು ಇದ್ದಾರೆ ಅವರು, ನಮಗೆ ನಾಚಿಕೆ ಮಾನ ಮರ್ಯಾದೆ ಇಲ್ವಾ ಅಂತ ಕೇಳ್ತಾರೆ. ಕೇಂದ್ರವನ್ನು ಪಿಕ್ ಪಾಕೇಟ್ ಸರ್ಕಾರ ಅಂತಾರೆ. ಸಿದ್ದರಾಮಯ್ಯನವರೇ ನಿಮಗಿಂತ ದೊಡ್ಡ ಪಿಕ್ ಪಾಕೆಟರ್ ಸಿಗಲು ಸಾಧ್ಯವೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ದುರಂಹಕಾರದ ಪರಮಾವದಿ ಹೆಚ್ಚಾಗಿದೆ.‌ ಕಳ್ಳತನ ಮಾಡ್ತೀರಿ, ಸುಳ್ಳತನ ಮಾಡ್ತೀರಿ, ಹಗಲು ದರೋಡೆ ನಡೆಸಿದ್ದೀರಿ. ಸಿದ್ದರಾಮಯ್ಯ ಶಿಷ್ಯಂದಿರು ಬಾಲಿಶವಾಗಿ ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಹೆಚ್ಚಿನ ಬೆಲೆ ಏರಿಕೆ ಆಗಿಲ್ಲ. ಕರ್ನಾಟಕದಲ್ಲಿ ಬೆಲೆ ಏರಿಕೆ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್‌ ಜೋಶಿ ಅವರು ತೀವ್ರ ವಾಗ್ದಾಳಿ ನಡೆಸಿದರು.

CM Siddaramaiah Arrogance Has Increased Says Pralhad Joshi

ಹಾಲಿನಿಂದ ಆಲ್ಕೋಹಾಲ್ ವರಗೆ ಎಲ್ಲಾ ಬೆಲೆ ಏರಿಕೆ ಮಾಡಿದ್ದಾರೆ. ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌, ಮಲ್ಲಿಕಾರ್ಜುನ್‌ ಖರ್ಗೆ ಸ್ಥಿತಿ ಕೆಟ್ಟುಹೋದ ಗ್ರಾಮಾಪೋನ್ ನಂತಿದೆ. ಮರ್ಯಾದಿಗೇಡಿನ ಪರಮಾವದಿಯಲ್ಲಿದ್ದಾರೆ ಸಿದ್ದರಾಮಯ್ಯ ಎಂದು ಜೋಶಿ ಅವರು ಕಿಡಿಕಾರಿದ್ದಾರೆ. ಇದು ಸಿಎಂ ಸಿದ್ದರಾಮಯ್ಯನವರ ಮರ್ಯಾದೆ ಗೇಡಿತನಕದ ಪರಮಾವಧಿ ಎಂದು ಹೇಳಿದರು.

ಪೆಗಾಸಸ್ ವಿಚಾರದಲ್ಲಿ ಸದನ ಹಾಳು ಮಾಡಿದರು.. ಈಗ ಅದೇನು ಆಯಿತು. ಬೆಲೆ ಏರಿಕೆ ಬಗ್ಗೆ ನಾನು ಸದನದಲ್ಲಿ ಚರ್ಚೆಗೆ ಸಿದ್ಧ ಅಂತ ಹೇಳಿದೆ ಆದರೆ ಯಾರು ಕಾಂಗ್ರೆಸ್ ಸಂಸದರು ಮಾತನಾಡಲಿಲ್ಲ. ಕರ್ನಾಟಕದಲ್ಲಿ ಹಾಲಿನಿಂದ ಆಲ್ಕೋಹಾಲ್ ವರಿಗೆ ಬೆಲೆ ಏರಿಕೆ ಇವರ ಮಿಸ್ ಮ್ಯಾನೇಜ್ಮೆಂಟ್ ಕಾರಣ. ರಾಜ್ಯ ಸರ್ಕಾರ ವಿರುದ್ಧ ನಾ ನೀನ ಮರೆಯಲಾರೆ ಅಂತ ಹಾಡಿನ ಮೂಲಕ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಅವರು ವ್ಯಂಗ್ಯವಾಡಿದರು.

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಒಳಗೊಳಗೆ ಬಡಿದಾಡಿತ್ತಾರೆ ಹೊರಗೆ ಏನೇನೋ ಮಾತನಾಡುತ್ತಾರೆ. ಮೀಸಲಾತಿಯಿಂದ ಸೆಕೆಂಡ್ ಗ್ರೆಡ್ ವ್ಯಕ್ತಿಗಳು ಅಧಿಕಾರ ವ್ಯವಸ್ಥೆ ಬರ್ತಾರೆ ಅಂತ ನೆಹರು ಪತ್ರ ಬರೆದಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಿರಿವ ಸಿದ್ದರಾಮಯ್ಯ ಈಗ ಅಲ್ಲಿ ಹೋಗಿ ಬಿದ್ದಿರಿ. ಮುಸ್ಲಿಂ ಸಮುದಾಯದಲ್ಲಿ ಸಹ ಅಸ್ಪೃಶ್ಯರು ಇದ್ದಾರೆ ಅವರ ಗಣತಿ ಯಾಕೆ ಮಾಡಿಲ್ಲ. ಯಾಕಿಷ್ಟು ತಲೆ ಕಟ್ಟಿರುವು ತರ ಸಿದ್ದರಾಮಯ್ಯ ವರ್ತನೆ ಮಾಡುತ್ತಾರೆ. ಬಂದೋಬಸ್ತ್ ಹೋಗಿದ್ದ ಎಎಸ್ಪಿ ಮೇಲೆ ಹೊಡೆಯಲು ಹೋಗತ್ತಾರೆ. ದಪ್ಪ ಚರ್ಮದವರಿಗೆ ಏನು ಹೇಳಬೇಕು. ಪಾಕಿಸ್ತಾನಕ್ಕೆ ಎಷ್ಟು ಜನ ಕಳುಹಿಸಲಾಗಿದೆ ಉತ್ತರ ನೀಡಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಹೇಳಿಕೆ ಪಾಕಿಸ್ತಾನದಲ್ಲಿ ಸಂಭ್ರಮಿಸಿದ್ದಾರೆ. ಸ್ವಲ್ಪನಾದರು ಮರ್ಯಾದೆ ಬೇಕಲ್ವಾ ದೇಶ ಭದ್ರತೆ ವಿಚಾರದಲ್ಲಿ.ಇವರು ಪಾಕಿಸ್ತಾನದ ಹೀರೋ ಆಗಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮಾತು ಸಹ ಕೇಳಲ್ವಾ. ಪಾಕಿಸ್ತಾನದ ಜಿಂದಾಬಾದ್ ಎನ್ನಲು ನೂರಾರು ಕಾರಣ ಅಂತೆ? ಇದು ದೇಶ ದ್ರೋಹ ಅಲ್ವಾ ನೀವು ಯಾರನ್ನು ಬೆಂಬಲಿಸಿತ್ತಿರಾ?. ನಿಮ್ಮ ಕಾರ್ಯಕ್ರಮದಲ್ಲಿ ಬಂದು ಧಿಕ್ಕಾರ ಕೂಗಿದವರು, ಮಂಗಳೂರು ಕುಕ್ಕರ್ ಬಾಂಬ್ ವಿಚಾರದಲ್ಲಿ ನಿಮ್ಮ ಗುಪ್ತಚರ ಇಲಾಖೆ ಏನು ಮಾಡಿತು ಎಂದು ಪ್ರಶ್ನಿಸಿದರು.

ಭಯೋತ್ಪಾದಕರು, ಅವರಿಗೆ ಬೆಂಬಲ ನೀಡುವವರ ಮನೆ ಹೊಕ್ಕು ಹೊಡೆಯುತ್ತೆವೆ. ಪೆಹಲ್ಗಾಮ್ ಬಗ್ಗೆ ಬಹಳಷ್ಟು ದುಃಖ ಇದೆ. ಪ್ರಧಾನಿ, ಗೃಹ ಸಚಿವರು, ಈ ವಿಚಾರದಲ್ಲಿ ಮನಸ್ಸಿಗೆ ಸಾಕಷ್ಟು ನೋವು ಮಾಡಿಕೊಂಡಿದ್ದಾರೆ
ಪಾಕಿಸ್ತಾನಕ್ಕೆ ಏನು ಶಿಕ್ಷೆ ನೀಡಬೇಕೋ‌ ಅದನ್ನು ಮಾಡೇ ಮಾಡತ್ವಿ. ಹಿಂದೂ ಭಯೋತ್ಪಾದಕತೆ ಅರ್ಥವೇನು? ಇದು ಬಹಳಷ್ಟು ಅತೀಯಾಗಿದೆ..ನೀವು ದೇಶಕ್ಕೆ ಅನ್ಯಾಯ ಮಾಡಬೇಡಿ ಎಂದು ಹೇಳಿದರು.

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಈ ಹತ್ಯೆ ಆಗಿದೆ. ಇದನ್ನು ತೀವ್ರವಾಗಿ ಖಂಡನೆ ಮಾಡುತ್ತೇನೆ. ಪೊಲೀಸರು ಸಹ ಸರ್ಕಾರದ ಪ್ರತಿನಿಧಿಯಂತೆ ವರ್ತನೆ ಮಾಡುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡನೆ ಮಾಡುತ್ತೆವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+