Metro Pillar Collapse: ಶೀಘ್ರದಲ್ಲೇ ಪರಿಹಾರ ಘೋಷಿಸುತ್ತೇವೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜ. 10: ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ನಿರ್ಮಾಣ ಹಂತದ ಕಾಮಗಾರಿಗಳ ಕೆಳಗೆ ಓಡಾಡಲು ಜನ ಹೆಸರುವಂತಹ ಘಟನೆ ಮಂಗಳವಾರ ನಡೆದಿದೆ. ಮೆಟ್ರೊ 2 ನೇ ಹಂತದ ಕಾಮಗಾರಿ ನಡೆಯುತ್ತಿದ್ದ ನಾಗವಾರ ಬಳಿ‌ (ಹೆಣ್ಣೂರು ಕ್ರಾಸ್) ಬಳ್ಳಿ ಪಿಲ್ಲರ್‌ ಕುಸಿದು ತಾಯಿ - ಮಗು‌ ಮೃತಪಟ್ಟಿದ್ದಾರೆ.

23 ವರ್ಷದ ತೇಜಸ್ವಿನಿ ಮತ್ತು ಅವರ ಎರಡೂವರೆ ವರ್ಷದ ಕಂದಮ್ಮ ಈ ದುರಂತದಲ್ಲಿ ಮೃತ ಪಟ್ಟಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರದಲ್ಲೇ ಪರಿಹಾರವನ್ನು ಘೋಷಿಸುತ್ತೇವೆ ಎಂದಿದ್ದಾರೆ.

ಧಾರವಾಡದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ, "ಮೆಟ್ರೋ ಪಿಲ್ಲರ್ ಅಪಘಾತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ನನಗೆ ಈಗಷ್ಟೇ ಸುದ್ದಿ ತಿಳಿದಿದೆ. ಈ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ವಿವರ ಕೇಳಿದ್ದೇನೆ. ಶೀಘ್ರದಲ್ಲೇ ಸಂತ್ರಸ್ತರಿಗೆ ಪರಿಹಾರವನ್ನು ಘೋಷಿಸುತ್ತೇವೆ" ಎಂದಿದ್ದಾರೆ.

CM reaction to Bengaluru Metro PIllar Collapse Incident says We will announce compensation soon

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಧಾರವಾಡದ ಶಿರಸಿಂಗಿಯ ಶ್ರೀ ಲಿಂಗರಾಜ ದೇಸಾಯಿಯವರ 162ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೂ ಮೊದಲು ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಹುಬ್ಬಳ್ಳಿಯ ನವನಗರದ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ ನವೀಕರಣಗೊಂಡ ಭಾನಜಿ ಡಿ. ಖಿಮಜಿ ಒಪಿಡಿಯನ್ನು ಉದ್ಘಾಟಿಸಿದ್ದರು.

CM reaction to Bengaluru Metro PIllar Collapse Incident says We will announce compensation soon

ಮೆಟ್ರೊ 2 ನೇ ಹಂತದ ನಾಗವಾರ - ಗೊಟ್ಟಿಗೆರೆ ಮಾರ್ಗದ ಹೆಣ್ಣೂರು ಮುಖ್ಯ ರಸ್ತೆ ಎಚ್‌ಬಿಆರ್‌ ಲೇಔಟ್‌ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿತ್ತು. ಬೆಂಗಳೂರು ವಿಮಾನ ನಿಲ್ದಾಣವರೆಗೆ ನಡೆಯುತ್ತಿರುವ ಈ ಕಾಮಗಾರಿ ಪ್ರಗತಿಯಲ್ಲಿತ್ತು. ಹೆಣ್ಣೂರು ಕ್ರಾಸ್ ಬಳಿ ಮೆಟ್ರೋ ಪಿಲ್ಲರ್ ನಿರ್ಮಾಣಕ್ಕೆ ಕಬ್ಬಿಣದ ಸರಳುಗಳನ್ನು ಜೋಡಿಸಲಾಗಿತ್ತು. ಈ ಕಬ್ಬಿಣದ ಪಿಲ್ಲರ್‌ಗೆ ಕಾಂಕ್ರೀಟ್ ಹಾಕುವುದು ಬಾಕಿ ಇತ್ತು. ಇಷ್ಟರಲ್ಲಿ ಈ ದುರಂತ ಘಟನೆ ನಡದು ಎರಡು ಜೀವಗಳು ಅಸುನೀಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+