ಮೈತ್ರಿ ಮಧ್ಯೆ ಮತ್ತೆ ಮುನಿಸು ತಂದ ವರ್ಗಾವಣೆ: ಸಿಎಂ ವಿರುದ್ಧ ಪಾಟೀಲ್ ಗರಂ

ಬೆಂಗಳೂರು, ಜನವರಿ 25: ಮೈತ್ರಿ ಸರ್ಕಾರದ ಮಿತ್ರ ಪಕ್ಷಗಳ ಮಧ್ಯೆ ವರ್ಗಾವಣೆ ವಿಷಯ ಮತ್ತೆ ಮುನಿಸು ತಂದಿದೆ. ಸಿಎಂ ಕುಮಾರಸ್ವಾಮಿ ವಿರುದ್ಧ ಎಂ.ಬಿ.ಪಾಟೀಲ್ ಅವರು ಮುನಿಸಿಕೊಂಡಿದ್ದಾರೆ.

ತಮ್ಮ ಗಮನಕ್ಕೆ ತಾರದೆ ಮುಖ್ಯಮಂತ್ರಿ ಕಚೇರಿಯಿಂದಲೇ ಮೂರು ನಗರ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಿರುವುದು ಎಂ.ಬಿ.ಪಾಟೀಲ್ ಅವರ ಮುನಿಸಿಗೆ ಕಾರಣವಾಗಿದೆ.

ಗೃಹ ಇಲಾಖೆ, ಅದಕ್ಕೊಬ್ಬರು ಸಚಿವರಿದ್ದರೂ ಸಹ ತಮ್ಮ ಗಮನಕ್ಕೆ ತರದೇ ಉನ್ನತಾಧಿಕಾರಿಗಳನ್ನು ಸಿಎಂ ಕಚೇರಿಯಿಂದಲೇ ಆದೇಶ ಹೊರಡಿಸಿ ವರ್ಗಾವಣೆ ಮಾಡಿರುವುದು ಪಾಟೀಲ್ ಅವರಿಗೆ ಬೇಸರ ತಂದಿದ್ದು, ಈ ಬಗ್ಗೆ ಅವರು ಮಹಾನಿರ್ದೇಶಕಿ ನೀಲಮಣಿರಾಜು ಅವರನ್ನು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ಮಿತ್ರ ಪಕ್ಷಗಳ ನಡುವೆ ಮುನಿಸು

ಮಿತ್ರ ಪಕ್ಷಗಳ ನಡುವೆ ಮುನಿಸು

ಈ ಹಿಂದೆಯೂ ವರ್ಗಾವಣೆ ವಿಷಯವಾಗಿ ಮಿತ್ರ ಪಕ್ಷಗಳ ನಡುವೆ ಮುನಿಸು ತಲೆದೂರಿತ್ತು. ಸಮನ್ವಯ ಸಮಿತಿಯಲ್ಲಿ ಚರ್ಚಿಸಿದ ಬಳಿಕವಷ್ಟೆ ಉನ್ನತಾಧಿಕಾರಿಗಳ ವರ್ಗಾವಣೆ ಮಾಡಬೇಕು ಎಂಬ ನಿಯಮವನ್ನೂ ಹೇರಿಕೊಳ್ಳಲಾಗಿತ್ತು ಆದರೆ ಈಗ ಕುಮಾರಸ್ವಾಮಿ ಅವರು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿರುವುದು ಎಂ.ಬಿ.ಪಾಟೀಲ್ ಗೆ ಬೇಸರ ತರಿಸಿದೆ.

ಮೂರು ನಗರಗಳ ಉನ್ನತ ಪೊಲೀಸ್ ಅಧಿಕಾರಿಗಳ ವರ್ಗ

ಮೂರು ನಗರಗಳ ಉನ್ನತ ಪೊಲೀಸ್ ಅಧಿಕಾರಿಗಳ ವರ್ಗ

ಹುಬ್ಬಳ್ಳಿ-ಧಾರವಾಡ ನಗರದ ಕಮಿಷನರ್ ಆಗಿದ್ದ ಎಂ.ಎನ್ ನಾಗರಾಜ್ ಅವರ ಜಾಗಕ್ಕೆ ಕೆಜಿಎಫ್ ಎಸ್‌ಪಿ ಆಗಿದ್ದ ಬಿ.ಎಸ್ ಲೋಕೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಬೆಳಗಾವಿ ನಗರ ಕಮಿಷನರ್ ಆಗಿದ್ದ ಡಿ.ಸಿ ರಾಜಪ್ಪ ಹುದ್ದೆಗೆ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್‌ಪಿ ಆಗಿದ್ದ ಪಿ. ರಾಜೇಂದ್ರ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಗೃಹ ರಕ್ಷಕ ದಳದ ಕಮಾಂಡೆಂಟ್ ಆಗಿದ್ದ ಆರ್.ರಮೇಶ್ ಅವರನ್ನು ಯೋಜನೆ ಆಧುನೀಕರಣದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ.

ಪರಮೇಶ್ವರ್ ಇದ್ದಾಗಲೂ ಹೀಗೆಯೇ ಆಗಿತ್ತು

ಪರಮೇಶ್ವರ್ ಇದ್ದಾಗಲೂ ಹೀಗೆಯೇ ಆಗಿತ್ತು

ಜಿ.ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದಾಗಲೂ ಸಹ ಪೊಲೀಸ್ ಅಧಿಕಾರಗಳ ವರ್ಗಾವಣೆಯಲ್ಲಿ ಸಿಎಂ ಅವರು ಹಸ್ತಕ್ಷೇಪ ಮಾಡಿದ್ದರು ಆಗಲೂ ಸಹ ಇಬ್ಬರ ನಡುವೆ ಮುನಿಸು ತಲೆದೂರಿತ್ತು. ಲೋಕಾಯುಕ್ತ ಸಚಿವ ರೇವಣ್ಣ ಅವರು ಸಹ ಇತರರ ಇಲಾಖೆಯಲ್ಲಿ ಮೂಗು ತೂರಿಸುತ್ತಾರೆ ಎಂಬ ಆರೋಪ ಮಾಡಲಾಗಿತ್ತು.

ವರ್ಗಾವಣೆ ಮನಸ್ಥಾಪ ಹೆಚ್ಚಾಗಿತ್ತು

ವರ್ಗಾವಣೆ ಮನಸ್ಥಾಪ ಹೆಚ್ಚಾಗಿತ್ತು

ವರ್ಗಾವಣೆ ಮನಸ್ಥಾಪ ಹೆಚ್ಚಾದ ನಂತರ ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿ. ಉನ್ನತ ಅಧಿಕಾರಿಗಳ ವರ್ಗಾವಣೆ ಮಾಡುವ ಮುನ್ನಾ ಸಮನ್ವಯ ಸಮಿತಿಯ ಗಮನಕ್ಕೆ ತರಬೇಕು ಎಂದು ನಿಯಮ ಮಾಡಿಕೊಳ್ಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+