ಸಿಎಂ ಗ್ರಾಮ ವಾಸ್ತವ್ಯ: ಜಿಲ್ಲಾಡಳಿತಕ್ಕೆ ಮಾರ್ಗಸೂಚಿ ರವಾನೆ

ಬೆಂಗಳೂರು, ಜೂನ್ 10: ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಕುರಿತಂತೆ ಸರ್ಕಾರವು ಎಲ್ಲಾ ಜಿಲ್ಲಾಡಳಿತಕ್ಕೆ ಮಾರ್ಗಸೂಚಿಗಳನ್ನು ರವಾನಿಸಿದೆ.

ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಸೂಕ್ತ ಶಾಲೆ ಗುರುತಿಸುವುದು, ಸಾರ್ವಜನಿಕ ಭೇಟಿಗೆ ಸೂಕ್ತ ಅವಕಾಶ ಇರುವ ಶಾಲೆಗಳನ್ನು ಪತ್ತೆ ಹಚ್ಚುವುದು ಮತ್ತು ಸೂಚಿಸುವುದು, ಶಾಸಕರೊಟ್ಟಿಗೆ ಸಭೆ ನಡೆಸಿ ಕಾರ್ಯಕ್ರಮಗಳನ್ನು ಅಂತಿಮಗೊಳಿಸುವುದು ಹೀಗೆ ಮುಂತಾದ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಗ್ರಾಮ ವಾಸ್ತವ್ಯ ಮತ್ತು ಸರ್ಕಾರದ ಸಾಧನೆಗಳ ಸಾಕ್ಷ್ಯ ಚಿತ್ರ ಪ್ರದರ್ಶನ, ಗ್ರಾಮ ವಾಸ್ತವ್ಯದ ಬಗ್ಗೆ ಪ್ರಚಾರ, ಅರ್ಜಿಗಳ ವಿಲೇವಾರಿ ಇನ್ನಿತರೆ ಕಾರ್ಯಗಳನ್ನು ನೋಡಿಕೊಳ್ಳುವ ಕಾರ್ಯಗಳನ್ನು ಮಾಡಬೇಕಿವೆ. ಸಂಜೆ ಆರು ಗಂಟೆ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದು,

CM Kumaraswamy grama vasthayva guidlines issued to district administration

ಸ್ವೀಕರಿಸಿದ ಅವಹಾಲುಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು, ಜನತಾ ದರ್ಶನದ ವೇಳೆ ಸಿಎಂ ನೀಡಿದ ಆದೇಶಗಳನ್ನು ದಾಖಲು ಮಾಡಿಕೊಳ್ಳುವುದು ಮತ್ತು ಅವನ್ನು ಕಾರ್ಯರೂಪಕ್ಕೆ ತರುವುದು ಮತ್ತು ಅದರ ದಾಖಲೀಕರಣ ಮಾಡುವುದು.

ಗ್ರಾಮ ವಾಸ್ತವ್ಯ ಮಾಡುವ ಸ್ಥಳದಲ್ಲಿ ಮೂಲಭೂತಸೌಲಭ್ಯ ವ್ಯವಸ್ಥೆ ಮಾಡುವುದು, ಭದ್ರತೆಯ ಬಗೆಗೆ ಪರಿಶೀಲನೆ ನಡೆಸುವುದು, ಪೊಲೀಸರೊಂದಿಗೆ ಸಮನ್ವಯ ಸಾಧಿಸುವುದು, ಸುತ್ತ-ಮುತ್ತಲ ಗ್ರಾಮಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಿಎಂ ಅವರ ಗಮನಕ್ಕೆ ತರುವುದು.

ಸಿಎಂ ಅವರ ಗ್ರಾಮ ವಾಸ್ತವ್ಯವನ್ನು ಯಶಸ್ವಿಗೊಳಿಸಲು ಭಾರಿ ಪ್ರಯತ್ನಗಳು ನಡೆಯುತ್ತಿದ್ದು, ಕುಮಾರಸ್ವಾಮಿ ಅವರು ಸಹ ಗ್ರಾಮ ವಾಸ್ತವ್ಯ ಸಫಲ ಕಾರ್ಯಕ್ರಮ ಆಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+