ಡಿಕೆ ಶಿವಕುಮಾರ್ ಸರ್ಕಾರದ 'ಶತಕದ ಪಥ, ಪ್ರಗತಿಯ ರಥ': ರೈತರು-ಜನಸಾಮಾನ್ಯರಿಗೆ 3 ಬಂಪರ್ ಯೋಜನೆ ಘೋಷಣೆ
ಬೆಂಗಳೂರು: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ 100 ದಿನ ಪೂರೈಸಿದ್ದರ ಸಂಭ್ರಮದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರೀಸಾಮಾನ್ಯರಿಗೆ ಮೂರು ವಿಶೇಷ ಯೋಜನೆಗಳನ್ನು ಘೋಷಿಸಿದೆ. ರೈತರನ್ನು ಗಮನದಲ್ಲಿಟ್ಟುಕೊಂಡು 'ನೇಗಿಲ ಯೋಜನೆ ಮತ್ತು ತೇಗ ಸರಿ ಯೋಜನೆ ಹಾಗೂ ಉಚಿತ ನಿವೇಶನ' ಯೋಜನೆಯನ್ನು ಘೋಷಿಸಿದೆ. ಇದರೊಂದಿಗೆ ಇಂದು ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇನ್ನಷ್ಟು ಜನಪರ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ.
ಹೌದು, ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರಕ್ಕೆ 100 ದಿನ ಪೂರ್ಣ ಹಿನ್ನೆಲೆಯಲ್ಲಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 'ದೃಢ ಕರ್ನಾಟಕ ಸಂಕಲ್ಪ-ಶತಕದ ಪಥ, ಪ್ರಗತಿಯ ರಥ' ಹೆಸರಿನಲ್ಲಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ. ಇದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

ಬುಧವಾರಷ್ಟೇ ರಾಜ್ಯ ಸಚಿವ ಸಂಪುಟವು ಮೇಲಿನ ಮೂರು ಹೊಸ ಯೋಜನೆಗಳನ್ನು ಜನತೆಗೆ ಅರ್ಪಿಸಲು ತೀರ್ಮಾನಿಸಿದೆ. ಯಾರಿಗೆ ಇದರ ಪ್ರಯೋಜನ ಸಿಗಲಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮೂರು ವಿನೂತನ ಯೋಜನೆಗಳು
1. ನೇಗಿಲ ಯೋಜನೆ: ಯಾರು ಮೂರು ಎಕರೆ ಹಾಗೂ ಅದಕ್ಕಿಂತ ಕಡಿಮೆ ಭೂಮಿ ಹೊಂದಿದ್ದಾರೋ ಅಂತಹ ರಾಜ್ಯದ ಸುಮಾರು 59 ಲಕ್ಷ ಸಣ್ಣ ರೈತರ ಜಮೀನನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿ ಉಳುಮೆ ಮಾಡಿಕೊಡಲಾಗುತ್ತದೆ. ಈ ಮೂಲಕ ಬರಗಾಲದಲ್ಲಿ ಸಂಕಷ್ಟ ಅನುಭವಿಸಿದ ಸಣ್ಣ ರೈತರಿಗಾಗಿ ಈ ಯೋಜನೆ ಘೋಷಿಸಲಾಗಿದೆ.
2. ತೇಗ ಸಿರಿ ಯೋಜನೆ: ರಸ್ತೆ ಬದಿಯ ಜಮೀನುಗಳಲ್ಲಿ ತೇಗದ ಮರ ಬೆಳೆಸಲು ಅರಣ್ಯ ಇಲಾಖೆಯಿಂದ ಉಚಿತ ಸಸಿ ಹಾಗೂ ಮರ ಕಟಾವು ಮಾಡಿದಾಗ ರೈತರಿಗೆ ಶೇ. 70ರಷ್ಟು ಆದಾಯ ನೀಡುವ 493 ಕೋಟಿ ರೂ. ವೆಚ್ಚದ ವಿನೂತನ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ರೈತರಿಗೆ ಮತ್ತೊಂದು ಆದಾಯ ಸಿಗಲಿದೆ ಎನ್ನಲಾಗಿದೆ.
3. ಉಚಿತ ನಿವೇಶನ ಯೋಜನೆ: ರಾಜ್ಯದಲ್ಲಿ ಸ್ವಂತ ಸೂರು ಇಲ್ಲದ ಬಡ ಕುಟುಂಬಗಳಿಗೆ ಮೂರು ಹಂತಗಳಲ್ಲಿ ಒಟ್ಟು 15 ಲಕ್ಷ ಉಚಿತ ನಿವೇಶನಗಳನ್ನು ಹಂಚಿಕೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಡಿಕೆ ಶಿವಕುಮಾರ್ ಅವರ 100 ದಿನದ ಸಂಭ್ರಮಕ್ಕೆ ಮೂರು ವಿಶೇಷ ಯೋಜನೆ ಘೋಷಿಸಲಾಗಿದೆ. ಇನ್ನಷ್ಟು ಕೊಡುಗೆಗಳ ಘೋಷಣೆ ಕುರಿತು ರಾಜ್ಯದ ಜನರಲ್ಲಿ ನಿರೀಕ್ಷೆ ಮೂಡಿಸಿದೆ. ಅದಕ್ಕೆ ಇಂದು ಉತ್ತರ ಸಿಗಲಿದೆ.
ಡಿಕೆ ಶಿವಕುಮಾರ್ ಸ್ವಂತ ಹೆಜ್ಜೆ!
ಜೂನ್ 3ರಂದು ಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ಬಳಿಕ ಅಲ್ಲಿಂದ ಇಲ್ಲಿಯವರೆಗೆ ಜನಪರ ಕಾಳಜಿಯ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಪಂಚ ಗ್ಯಾರೆಂಟಿ ಯೋಜನೆಗಳ ಜಾರಿ ಹೊರತಾಗಿ ಆಡಳಿತದಲ್ಲಿ ತಮ್ಮದೇ ಆದ ಸ್ವಂತ ಹೆಜ್ಜೆ ಮೂಡಿಸಿದ್ದಾರೆ ಎನ್ನಬಹುದು. ಈ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ 'ಭಾರತ್ ಜೋಡೋ ಯುವಕರ ಸಂಘ, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ನಿರ್ಧಾರ ಘೋಷಿಸಿದರು. ಈ ಮೂಲಕ ಯುವಕರು, ವಿದ್ಯಾರ್ಥಿಗಳ ಅಭ್ಯುದಯದ ಹೊಸ ಯೋಜನೆಗಳ ಅನುಷ್ಠಾನಕ್ಕೆ ಮುಂದಾದರು. ಜೊತೆಗೆ ಆಡಳಿತ ಯಂತ್ರಕ್ಕೆ ಹೊಸ ರೀತಿಯ ಸ್ಪರ್ಶ ನೀಡಿದರು. ಇನ್ನೂ ಸಂಪುಟದ ಸದಸ್ಯರು, ಅಧಿಕಾರ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೂರು ದಿನ ಯಶಸ್ವಿಯಾಗಿ ಪೂರೈಸಿದ್ದಾರೆ.
'ದೃಢ ಕರ್ನಾಟಕ ಸಂಕಲ್ಪ-ಶತಕದ ಪಥ, ಪ್ರಗತಿಯ ರಥ': ನಿರೀಕ್ಷೆ..
ಇಂದಿನ 'ದೃಢ ಕರ್ನಾಟಕ ಸಂಕಲ್ಪ-ಶತಕದ ಪಥ, ಪ್ರಗತಿಯ ರಥ' ಕಾರ್ಯಕ್ರಮದಲ್ಲಿ ಯೋಜನೆಗಳ ಫಲಾನುಭವಿಗಳನ್ನು ಆಹ್ವಾನಿಸಿದ್ದು, ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಬುಧವಾರ ತೀರ್ಮಾನಿಸಿದ ಮೂರು ನವೀನ ಯೋಜನೆಗಳ ಜೊತೆಗೆ ಇಂದಿನ ಕಾರ್ಯಕ್ರಮದಲ್ಲಿ ಯುವಕರು, ಬರಗಾಲ ಎದುರಿಸುತ್ತಿರುವ ರೈತರು, ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಇನ್ನಷ್ಟು ಯೋಜನೆಗಳು ಘೋಷಣೆ ಆಗುವ ನಿರೀಕ್ಷೆಗಳು ಇವೆ.


Click it and Unblock the Notifications
