• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜುಲೈನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್?

|
Google Oneindia Kannada News

ಬೆಂಗಳೂರು, ಜೂ. 29: ಕೊರೊನಾ ವೈರಸ್‌ ಸಂಕಷ್ಟದ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಒತ್ತಡ ಹೆಚ್ಚಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಅನರ್ಹರಾಗಿದ್ದವರಲ್ಲಿ ಇಬ್ಬರು ಈಗ ವಿಧಾನ ಪರಿಷತ್ ಪ್ರವೇಶಿಸುವ ಮೂಲಕ ಮಂತ್ರಿಯಾಗಲು ಅರ್ಹತೆ ಪಡೆದಿದ್ದಾರೆ.

   Congress Cycle Rally against Fuel hike : ಸೈಕಲ್ ಏರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು|Oneindia Kannada

   ಆದರೆ ಮಾಜಿ ಸಚಿವ ಎಚ್. ವಿಶ್ವನಾಥ್ ಅವರ ರಾಜಕೀಯ ಜೀವನ ಅತಂತ್ರವಾಗಿದ್ದು, ಮಂತ್ರಿಸ್ಥಾನ ಹೋಗಲಿ ಪರಿಷತ್ ಸದಸ್ಯರಾಗಲೂ ಪರದಾಡಬೇಕಾದ ಸ್ಥಿತಿ ತಂದು ಕೊಂಡಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆಗೆ ಮೊದಲು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವಂತೆ ಒತ್ತಡವೂ ಸಿಎಂ ಯಡಿಯೂರಪ್ಪ ಅವರ ಮೇಲೆ ಹೆಚ್ಚಾಗುತ್ತಿದೆ. ಇದರೊಂದಿಗೆ ಬಿಜೆಪಿ ಹಿರಿಯ ಶಾಸಕರೂ ಮಂತ್ರಿ ಮಂಡಲ ವಿಸ್ತರಣೆ ಮಾಡುವಂತೆ ಒತ್ತಡ ಹಾಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬವ ಮೊದಲು ಜುಲೈನಲ್ಲಿ ಸಂಪುಟ ವಿಸ್ತರಣೆಗೆ ಲಾಕ್‌ಡೌನ್‌ ಮಧ್ಯೆ ಮುಹೂರ್ತ ಫಿಕ್ಸ್ ಆಗಿದೆ ಎಂಬ ಮಾಹಿತಿ ಬಂದಿದೆ.

   ಸದ್ಯ 6 ಸ್ಥಾನಗಳು ಖಾಲಿ

   ಸದ್ಯ 6 ಸ್ಥಾನಗಳು ಖಾಲಿ

   ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರ ಸಂಪುಟದ 34 ಸಚಿವ ಸ್ಥಾನಗಳ ಪೈಕಿ 6 ಸ್ಥಾನಗಳು ಖಾಲಿಯಿದ್ದು, ಸದ್ಯ 28 ಸಚಿವರ ಬಲವನ್ನು ಹೊಂದಿದೆ. ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ ಶಾಸಕರಲ್ಲಿ 10 ಜನರಿಗೆ ಮಂತ್ರಿಸ್ಥಾನ ಕೊಡುವ ಮೂಲಕ ಸಂಪುಟ ವಿಸ್ತರಣೆ ಮಾಡಲಾಗಿತ್ತು.

   ಇದೀಗ ಉಳಿದ 6 ಸ್ಥಾನಗಳಿಗೆ ಬಿಜೆಪಿ ಹಿರಿಯ ಶಾಸಕರೂ ಸೇರಿದಂತೆ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಎಚ್. ವಿಶ್ವನಾಥ್ ಅವರು ಒತ್ತಡ ಹಾಕುತ್ತಿದ್ದಾರೆ. ಈ ಮೂವರೂ ಕೂಡ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದವರು. ಹೀಗಾಗಿ ನಮ್ಮನ್ನು ಮಂತ್ರಿಗಳನ್ನಾಗಿ ಮಾಡಿ ಎಂದು ಸಿಎಂಗೆ ಒತ್ತಡ ಹಾಕುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಕೂಡ ಕೊಟ್ಟ ಮಾತಿನಂತೆ ಮಂತ್ರಿ ಮಾಡುವ ಭರವಸೆಯನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.

   ಸಂಪುಟ ವಿಸ್ತರಣೆ

   ಸಂಪುಟ ವಿಸ್ತರಣೆ

   ಕೊರೊನಾ ವೈರಸ್‌ ಸಂಕಷ್ಟದ ಮಧ್ಯೆಯೂ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಹಾಗೂ ಸಿಎಂ ಯಡಿಯೂರಪ್ಪ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಸರಳವಾಗಿ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಿ ಖಾಲಿ ಇರುವ ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ಸೂಚಿಸಿದೆ.


   ಲಾಕ್‌ಡೌನ್ ಹಾಗೂ ಕೊರೊನಾ ವೈರಸ್‌ ಸಂಕಷ್ಟದಲ್ಲಿ ಉತ್ತಮ ಆಡಳಿತ ಕೊಡಲು ಪೂರ್ಣ ಪ್ರಮಾಣದ ಮಂತ್ರಿಮಂಡಲ ಅಗತ್ಯ ಎನ್ನುವ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ. ಖಾಲಿ ಇರುವ 6 ಸ್ಥಾನಗಳೊಂದಿಗೆ ಕಳಪೆ ಸಾಧನೆ ಹೊಂದಿರುವ 4 ಜನರನ್ನು ಮಂತ್ರಿ ಮಂಡಲದಿಂದ ಕೈಬಿಡಲು ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.

   2 ಸ್ಥಾನ ಖಾಲಿ ಬಿಡಲು

   2 ಸ್ಥಾನ ಖಾಲಿ ಬಿಡಲು

   ನಾಲ್ವರು ಸಚಿವರಿಂದ ರಾಜೀನಾಮೆ ಪಡೆದರೆ ಒಟ್ಟು 10 ಮಂತ್ರಿ ಸ್ಥಾನಗಳು ಖಾಲಿ ಆದಂತಾಗುತ್ತದೆ. ಅವುಗಳಲ್ಲಿ 8 ಜನರಿಗೆ ಮಂತ್ರಿ ಸ್ಥಾನ ಹಂಚಿಕೆ ಮಾಡಿ ಉಳಿದ 2 ಮಂತ್ರಿ ಪದವಿಗಳನ್ನು ಕಾಯ್ದಿರಿಸಲು ತೀರ್ಮಾನ ಮಾಡಲಾಗಿದೆ.


   ಬೆಂಗಳೂರಿನ ಆರ್.ಆರ್. ನಗರ ಹಾಗೂ ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಬಳಿಕ ಉಳಿದೆರಡು ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಅನರ್ಹ ಶಾಸಕರಾಗಿರುವ ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ್ ಅವರೂ ಮಂತ್ರಿಯಾಗುವುದು ಖಚಿತವಾಗಿದೆ. ಹೀಗಾಗಿ ಈಗಿನ ಒಟ್ಟು 28 ಜನರ ಸಚಿವ ಸಂಪುಟ ಜುಲೈನಲ್ಲಿ ವಿಸ್ತರಣೆ ಬಳಿಕ 32ಕ್ಕೆ ಏರಿಕೆ ಆಗಲಿದೆ.

   ಜುಲೈನಲ್ಲಿ ವಿಸ್ತರಣೆ?

   ಜುಲೈನಲ್ಲಿ ವಿಸ್ತರಣೆ?

   ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇದೇ ಜುಲೈ 27ಕ್ಕೆ ಒಂದು ವರ್ಷ ತುಂಬಲಿದೆ. ರಾಜ್ಯ ಬಿಜೆಪಿ ಸರ್ಕಾರ ಮೊದಲ ವರ್ಷದ ವರ್ಷಾಚರಣೆಯನ್ನು ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮಾಡಲು ನಿರ್ಧಾರ ಮಾಡಿದೆ.


   ಸರ್ಕಾರಕ್ಕೆ ಒಂದು ವರ್ಷ ತುಂಬುವ ಮುನ್ನ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ಯಡಿಯೂರಪ್ಪ ತೀರ್ಮಾನ ಮಾಡಿದ್ದಾರೆ. ಹೀಗಾಗಿ ಜುಲೈ 27ರೊಳಗೆ ಸಂಪುಟ ವಿಸ್ತರಣೆ ಮಾಡುವ ಭರವಸೆ ನೂತನ ಪರಿಷತ್ ಸದಸ್ಯರಿಗೆ ಸಿಕ್ಕಿದೆ ಎಂಬ ಮಾಹಿತಿಯಿದೆ. ಇನ್ನು ಸದಸ್ಯರ ನಿವೃತ್ತಿಯಿಂದ ಇಂದು (ಜೂ.29) ಖಾಲಿ ಆಗಿರುವ ವಿಧಾನ ಪರಿಷತ್ತಿನ 5 ನಾಮ ನಿರ್ದೇಶಿತ ಸದಸ್ಯ ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.

   English summary
   July 27 will be a year for the BJP government to come into power in the state. The BJP had decided to expand the Karnataka state cabinet before that.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X