ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ವಿವಿಧ ಇಲಾಖೆಗಳ ವರ್ಗಾವಣೆಗೆ ತಡೆ ಕೊಟ್ಟ ಸಿಎಂ

|
Google Oneindia Kannada News

ಬೆಂಗಳೂರು, ಡಿಸೆಂಬರ್ 02; ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಇಲಾಖೆಗಳ ವರ್ಗಾವಣೆಗೆ ತಡೆ ನೀಡಿದ್ದಾರೆ. ಮುಂದಿನ ಸೂಚನೆಯವರೆಗೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ವರ್ಗಾವಣೆ ಪ್ರಸ್ತಾವನೆ ಮಂಡಿಸದಂತೆ ಸೂಚನೆ ನೀಡಲಾಗಿದೆ.

ಗುರುವಾರ ಮತ್ತು ಶುಕ್ರವಾರ ಮುಖ್ಯಮಂತ್ರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದರೆ ಈ ತೀರ್ಮಾನಕ್ಕೆ ಕಾರಣ ಏನು? ಎಂಬುದು ಬಹಿರಂಗವಾಗಿಲ್ಲ.

ರವಿ ಚನ್ನಣ್ಣನವರ್‌ ಸೇರಿ 11 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ರವಿ ಚನ್ನಣ್ಣನವರ್‌ ಸೇರಿ 11 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

CM Basavaraj Bommai Stayed Various Department Transfer

ಮುಖ್ಯಮಂತ್ರಿಗಳು ಗುರುವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಯಾವುದೇ ವರ್ಗಾವಣೆ ಪ್ರಸ್ತಾವನೆಗಳನ್ನು ಮುಂದಿನ ಸೂಚನೆಯವರೆಗೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮಂಡಿಸದಂತೆ ಸೂಚಿಸಿದೆ ಎಂದು ತಿಳಿಸಿದ್ದಾರೆ.

Breaking; ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಶಿವಮೊಗ್ಗಕ್ಕೆ ಹೊಸ ಎಸ್‌ಪಿ Breaking; ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಶಿವಮೊಗ್ಗಕ್ಕೆ ಹೊಸ ಎಸ್‌ಪಿ

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಹುಮಹಡಿಗಳ ಕಟ್ಟಡ ಇವರಿಗೆ ಈ ಕುರಿತು ಸೂಚನೆ ನೀಡಿದ್ದಾರೆ.

CM Basavaraj Bommai Stayed Various Department Transfer

ಆರೋಗ್ಯ ಇಲಾಖೆಗೂ ಸೂಚನೆ; ಮುಖ್ಯಮಂತ್ರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಯಾವುದೇ ವರ್ಗಾವಣೆ ಪ್ರಸ್ತಾವನೆಗಳನ್ನು ಮುಂದಿನ ಸೂಚನೆಯವರೆಗೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮಂಡಿಸದಂತೆ ಸೂಚಿಸಿದೆ.

Breaking; ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ವರ್ಗಾವಣೆBreaking; ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ವರ್ಗಾವಣೆ

ವರ್ಗಾವಣೆಗೆ ತಡೆ ನೀಡಿರುವುದು ಯಾವ ಕಾರಣಕ್ಕೆ ಎಂದು ಹಲವಾರು ಚರ್ಚೆಗಳು ನಡೆಯುತ್ತಿವೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ವರ್ಗಾವಣೆಗಳು ನಡೆದರೆ ಕೆಲಸಕ್ಕೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಸುದ್ದಿಗಳು ಹಬ್ಬಿವೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮುಖ್ಯಮಂತ್ರಿಗಳ ಆಪ್ತರಲ್ಲಿ ಒಬ್ಬರು. ಆದರೆ ಅವರ ಇಲಾಖೆಯ ವರ್ಗಾವಣೆಗೆ ಸಹ ತಡೆ ನೀಡಲಾಗಿದೆ. ಮುಂದಿನ ಆದೇಶದ ತನಕ ವರ್ಗಾವಣೆ ಇರುವುದಿಲ್ಲ. ಪುನಃ ವರ್ಗಾವಣೆ ಆರಂಭವಾಗಲಿದೆ.

ಇದಲ್ಲದೇ ರಾಜ್ಯ ಚುನಾವಣಾ ಆಯೋಗ 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ವರ್ಗಾವಣೆಗೊಂಡರೆ ಚುನಾವಣಾ ಕಾರ್ಯಗಳು ವಿಳಂಬವಾಗಲಿವೆ. ಆದ್ದರಿಂದ ಚುನಾವಣಾ ಆಯೋಗವು ವರ್ಗಾವಣೆ ಮಾಡದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ ಎಂಬ ಮಾಹಿತಿ ಇದೆ.

English summary
Karnataka chief minister Basavaraj Bommai stayed the various department transfer. No transfer in department till further order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X