ಚುರುಗುಟ್ಟುವ ಬಿಸಿಲಿಗೆ ಮೈಯೊಡ್ಡಿದ ಕರ್ನಾಟಕ
ಕಾರವಾರ, ಜ. 23: ಸಂಕ್ರಾಂತಿ ನಂತರ ರಾಜ್ಯದ ಹವಾಮಾನದಲ್ಲಿ ಬದಲಾವಣೆ ಆರಂಭವಾಗಿದೆ. ಚಳಿಗಾಲ ನಿಧಾನವಾಗಿ ದೂರವಾಗುವ ಲಕ್ಷಣ ಕಾಣುತ್ತಿದ್ದು ಸಮುದ್ರ ತೀರ ಪ್ರದೇಶಗಳಲ್ಲಿ ಸೂರ್ಯ ಪ್ರಕಾಶಿಸತೊಡಗಿದ್ದಾನೆ.
ಬೆಂಗಳೂರಲ್ಲೂ ದಿನದ ಉಷ್ಣಾಂಶ ಸರಾಸರಿಯಲ್ಲಿ ಏರಿಕೆ ಕಂಡುಬಂದಿದೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಹೋಬಳಿಯಲ್ಲಿ ಅತಿಹೆಚ್ಚು ಅಂದರೆ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅದರಂತೆ ಕಲಬುರಗಿ ಜಿಲ್ಲೆಯ ಔರಾದ್ ನಲ್ಲಿ ಅತಿ ಕಡಿಮೆ ಎಂದರೆ 9.5 ಡಿಗ್ರಿ ಉಷ್ಠಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.[ರಾಜ್ಯದೆಲ್ಲೆಡೆ ಚಳಿಯ ಅಬ್ಬರ]

ಮಳೆ ಸಂಭವ?
ಹವಾಮಾನ ವೈಪರಿತ್ಯದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ 24 ಗಂಟೆಗಳ ಅವಧಿಯಲ್ಲಿ ಸಾಧಾರಣ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ. ವಾತಾವರಣದ ಉಷ್ಣತೆಯಲ್ಲಿನ ಏರು ಪೇರು ಇದಕ್ಕೆ ಕಾರಣವಾಗಿದ್ದು ಮಲೆನಾಡ ಭಾಗಗಳಲ್ಲೂ ಮಳೆ ಕಂಡುಬರುವ ನಿರೀಕ್ಷೆಯಿದೆ.
ರಾಜ್ಯದ ಒಟ್ಟು 2,145 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 7 ಗ್ರಾಪಂಗಳು ಶುಕ್ರವಾರ ಮಳೆಯ ಅನುಭವಕ್ಕೆ ತುತ್ತಾಗಿವೆ. ಅಲ್ಪ ಪ್ರಮಾಣದ ಮಳೆಯಾಗುವ ಸಂಭವವಿದ್ದು ಜನರು ಆತಂಕಕ್ಕೆ ಒಳಗಾಗಬಾರದು. ಗಾಳಿಯ ವೇಗದಲ್ಲಿಯೂ ಯಾವುದೇ ವಿಶೇಷ ವ್ಯತ್ಯಾಸಗಳಾಗಲ್ಲ ಎಂದು ವರದಿ ತಿಳಿಸಿದೆ.












Click it and Unblock the Notifications