ಮಕ್ಕಳಾಗದ ದಂಪತಿಗೆ ಗುಡ್ ನ್ಯೂಸ್; ಸರ್ಕಾರಿ ಆಸ್ಪತ್ರೆಗೂ ಬಂತ್ತು ಈ ಚಿಕಿತ್ಸೆ: ಇಲ್ಲಿದೆ ಮಾಹಿತಿ
ಬೆಂಗಳೂರು, ಮೇ 08: ಮಕ್ಕಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇತ್ತೀಚಿನ ಒತ್ತಡದ ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಹಲವು ದಂಪತಿಗಳಿಗೆ ಮಕ್ಕಳ್ಳಿಲ್ಲದ ಕೊರತೆ ಕಾಡುತ್ತಿವೆ. ಹೀಗಾಗಿ ಕೆಲವರು ದೇವರಲ್ಲಿ ಹರಕೆ ಕಟ್ಟಿದರೇ, ಇನ್ನೂ ಕೆಲವರು ಹಲವು ಚಿಕಿತ್ಸೆ ಮೊರೆ ಹೋಗ್ತಿದ್ದಾರೆ. ಆದರೆ ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿದ್ದು ಬಡ ಹಾಗೂ ಮದ್ಯಮ ವರ್ಗದವರಿಗೆ ಈ ಚಿಕಿತ್ಸೆ ಪಡೆಯೋದು ಕಷ್ಟವಾಗಿದೆ.
ಹೌದು, ತಡವಾಗಿ ಮದುವೆ, ಜೀವನದಲ್ಲಿನ ಕಮಿಟ್ ಮೆಂಟ್, ಆರ್ಥಿಕತೆ ಹೊರೆ ಹಾಗೂ ದಂಪತಿಗಳ ನಡುವಿನ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಸಾಕಷ್ಟು ಜನ ದಂಪತಿಗಳು ಮಕ್ಕಳಾಗದ ಸಮಸ್ಯೆಯನ್ನ ಎದುರಿಸುತ್ತಿರುತ್ತಾರೆ. ಹೀಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.

ಕೆಲವು ದಂಪತಿಗಳಿಗೆ ಮಕ್ಕಳ್ಳಿಲ್ಲದ ಕೊರತೆ ಕಾಡುತ್ತಿವೆ. ಮಕ್ಕಳಾಗದೆ ಕಂಗಾಲಾಗಿದ್ದಾರೆ, ಮಕ್ಕಳಾಗದ ಬಡ ತಾಯಂದಿರಿಗೆ ಆರೋಗ್ಯ ಇಲಾಖೆ ಹೊಸ ಗಿಫ್ಟ್ ನೀಡಿದ್ದು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ದುಬಾರಿ ಚಿಕಿತ್ಸೆಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಪರಿಚಯಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ದಂಪತಿಗಳು ಮಕ್ಕಳನ್ನ ಪಡೆಯಲು ಐವಿಎಫ್ ನಂತಹ ಚಿಕಿತ್ಸೆಯನ್ನ ನೀಡಲು ಆರೋಗ್ಯ ಇಲಾಖೆ ಗಿಫ್ಟ್ ನೀಡಲು ಮುಂದಾಗಿದೆ.
ಐವಿಎಫ್ ಚಿಕಿತ್ಸೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿತ್ತು. ಈ ಚಿಕಿತ್ಸೆಯನ್ನ ಬಡ ಹಾಗೂ ಮದ್ಯಮ ವರ್ಗದವರಿಗೆ ಪಡೆಯೋದು ಕಷ್ಟದ ಮಾತಾಗಿತ್ತು. ಎಷ್ಟೋ ಪೋಷಕರು ಇದೇ ಕಾರಣಕ್ಕೆ ಮಕ್ಕಳು ಪಡೆಯಲು ಸಾಧ್ಯವಾಗದೆ ಸಂಕಷ್ಟ ಎದುರಿಸುವಂತಾಗಿದೆ. ಈ ಸಂದರ್ಭದಲ್ಲಿ ಮಕ್ಕಳಾಗದ ದಂಪತಿಗಳು ಆರೋಗ್ಯ ಇಲಾಖೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಸರ್ಕಾರದಿಂದ ಮಕ್ಕಳಾಗದವರಿಗೆ ಐವಿಎಫ್ ಚಿಕಿತ್ಸೆ ಅವಶ್ಯ ಇದ್ದವರಿಗೆ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಆರ್ಥಿಕ ಹೊರೆಯಿಂದಾಗಿ ಇಷ್ಟು ದಿನ ಎಷ್ಟೋ ದಂಪತಿಗಳಿಗೆ ಮಕ್ಕಳನ್ನ ಮಾಡಿಕೊಳ್ಳುವ ಆಸೆ ಇದ್ದರೂ ಸಹ ಚಿಕಿತ್ಸೆಗೆ ಲಕ್ಷಾಂತರ ಹಣವಿಲ್ಲದೇ ಮಕ್ಕಳನ್ನ ಪಡೆಯದೇ ಹಿಂದೇಟು ಹಾಕುತ್ತಿದ್ರು. ಆದರೆ, ಬಹಳ ಬೇಡಿಕೆ ಇರೋ IVF ಚಿಕಿತ್ಸೆಯನ್ನ ಸರ್ಕಾರ ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗಿದ್ದು, ಯಾರು ಬೇಕಾದರೂ IVF ಚಿಕಿತ್ಸೆ ಪಡೆಯಬಹುದಾಗಿದೆ. ಈಗಾಗಲೇ ಪ್ರಾಥಮಿಕ ಹಂತದಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಶುರುವಾಗುತ್ತಿದೆ.
IVF ಚಿಕಿತ್ಸೆ ಎಂದರೇನು?
IVF ಚಿಕಿತ್ಸೆ ಅಂದ್ರೆ ಅಂಡಾಣು ಮತ್ತು ವೀರ್ಯಾಣುವನ್ನು ದೇಹದ ಹೊರಗೆ ಫಲ ನೀಡಲು ಇಡಲಾಗುವುದು ಬಳಿಕ ಮಹಿಳೆ ಗರ್ಭಾಶಯಕ್ಕೆ ಇಂಜೆಕ್ಟ್ ಮಾಡುವ ಪ್ರಕ್ರಿಯೆಯನ್ನು ಐವಿಎಫ್ ಚಿಕಿತ್ಸೆ ಎನ್ನಲಾಗುತ್ತೆ. ಸದ್ಯ ಇದು ಬಡ ಹಾಗೂ ಮದ್ಯಮ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬರ್ತಿರೋದು ಬಹಳ ಸಂತೋಷದ ವಿಷಯವಾಗಿದ್ದು, ಹಣದ ಸಮಸ್ಯೆಯಿಂದ ಮಕ್ಕಳನ ಮೇಲಿನ ಆಸೆಯನ್ನ ಕೈಬಿಟ್ಟ ಅನೇಕ ದಂಪತಿಗಳು ಇದು ವರವಾಗಲಿದೆ ಎಂದು ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ ಇಂದಿರಾ ಹೇಳಿದ್ದಾರೆ.












Click it and Unblock the Notifications