BREAKING: ಗಣಿಕಾರಿಕೆ ಮಾಡುವವರಿಗೆ ಸಿಎಂ ಯಡಿಯೂರಪ್ಪ ಖಡಕ್ ಎಚ್ಚರಿಕೆ!
ಬೆಂಗಳೂರು, ಜ. 23: ಅಕ್ರಮ ಗಣಿಕಾರಿಗೆಯಿಂದ ಶಿವಮೊಗ್ಗದ ಸಮೀಪ ಸ್ಪೋಟ ನಡೆದು ದುರಂತ ಸಂಭವಿಸಿದೆ. ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅಕ್ರಮ ಗಣಿಗಾರಿಕೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇನ್ನುಮುಂದೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಪರವಾನಗಿ ಇದ್ದಲ್ಲಿ ಮಾತ್ರ ಗಣಿಗಾರಿಕೆ ಮಾಡಬೇಕು ಎಂದು ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.

Recommended Video
ಬಿಜೆಪಿಯಲ್ಲಿ ಬಿರುಕು !! | Oneindia Kannada
ಶಿವಮೊಗ್ಗದ ಸಮೀಪ ಸಂಭವಿಸಿದ ಜಿಲೆಟಿನ್ ಕಡ್ಡಿ ಸ್ಪೋಟದಿಂದ ಸ್ಥಳ ಪರೀಕ್ಷೆಗೆ ಹೋಗುತ್ತಿದ್ದೇನೆ. ಈಗಾಗಲೇ ನಮ್ಮ ಸಚಿವರು, ಸಂಸದರು ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದಾರೆ, ಸಮಗ್ರ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಇನ್ನುಮುಂದೆ ಅಕ್ರಮ ಗಣಿಗಾರಿಕೆಗೆ ಯಾವ ಕಾರಣಕ್ಕೂ ನಾನು ಅವಕಾಶ ಕೊಡುವುದಿಲ್ಲ. ನೀವು ಗಣಿಗಾರಿಕೆ ಮಾಡಬೇಕಿದ್ದಲ್ಲಿ ಸೂಕ್ತವಾದ ಕಡೆ ಲೈಸೆನ್ಸ್ ಪಡೆದು ಗಣಿಗಾರಿಕೆ ಮಾಡಬೇಕು ಎಂದು ಯಡಿಯೂರಪ್ಪ ಅವರು ಸೂಚ್ಯವಾಗಿ ತಿಳಿಸಿದ್ದಾರೆ.












Click it and Unblock the Notifications