• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಡೇ ಕರ್ಪ್ಯೂ: 'ಯಯಾತಿ' ಜೊತೆ ಸಮಯ ಕಳೆದ ಯಡಿಯೂರಪ್ಪ

|

ಬೆಂಗಳೂರು, ಜುಲೈ 12: ತಮ್ಮ ಸಿಬ್ಬಂದಿಗೆ ಕೊರೊನೊ ಸೋಂಕು ತಗಲಿರುವುದರಿಂದ ಹೋಂ ಕ್ವಾರಂಟೈನ್ ನಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಭಾನುವಾರ, ಯಯಾತಿ ಜೊತೆ ಸಮಯ ಕಳೆದಿದ್ದಾರೆ.

ಈ ಬಗ್ಗೆ, ಟ್ವೀಟ್ ಮಾಡಿರುವ ಬಿಎಸ್ವೈ, "ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು. ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ".

ಲಾಕ್ ಡೌನ್ ಪರಿಹಾರವಲ್ಲ ಎಂದಿದ್ದ ಬಿಎಸ್ವೈ ಈಗ ಕಂಪ್ಲೀಟ್ ಯೂಟರ್ನ್!

"ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ಇಂದಿನ ಭಾನುವಾರದ ಲಾಕ್ ಡೌನ್ ಮತ್ತು ಸ್ವಯಂ-ಕ್ವಾರಂಟೈನ್ ನಲ್ಲಿರುವ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿಯ ಜೊತೆಗೆ ಕಳೆಯುತ್ತಿದ್ದೇನೆ" ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಪುಸ್ತಕ ಓದುತ್ತಿರುವ ಫೋಟೋವನ್ನು ಯಡಿಯೂರಪ್ಪನವರು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದು, ಇದಕ್ಕೆ ಸುಮಾರು ಐದು ಸಾವಿರ ಲೈಕ್ಸ್ ಬಂದಿದ್ದು, ಮುನ್ನೂರು ರಿಟ್ವೀಟ್ ಪಡೆದುಕೊಂಡಿದೆ.

ಯಯಾತಿ, ಮರಾಠಿಯಿಂದ ಕನ್ನಡಾನುವಾದದ ಪುಸ್ತಕವಾಗಿದ್ದು, ವಿ.ಎಸ್‌. ಖಾಂಡೇಕರ್‌ ಅವರು ಬರೆದ ಕಾದಂಬರಿಯಾಗಿದೆ. ಮರಾಠಿಯ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿ. ಮರಾಠಿ ಸಾಹಿತ್ಯದಲ್ಲಿ ಹೊರಬಂದ ಮೇರು ಕೃತಿಗಳಲ್ಲಿ ಇದೂ ಒಂದಾಗಿದೆ.

ಭಾರತದ ಹಲವು ಭಾಷೆಗಳಿಗೆ ಈ ಕೃತಿ ಅನುವಾದಗೊಂಡಿದ್ದು ಕನ್ನಡಕ್ಕೆ ಇದನ್ನು ವಿ.ಎಂ.ಇನಾಂದಾರ್‌ ಅನುವಾದಿಸಿದ್ದಾರೆ.

English summary
Karnataka Chief Minister Yediyurappa Spent Sunday Curfew Time With Yayati Book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X