'ಸಿದ್ಧರಾಮಯ್ಯ ಒಂದು ಕ್ಷಣ ಸಿಎಂ ಸ್ಥಾನದಲ್ಲಿ ಇರಬಾರದು'
ಬೆಂಗಳೂರು, ಸೆಪ್ಟೆಂಬರ್ 25: ಮುಡಾ ಪ್ರಕರಣದ ಕುರಿತು ರಾಜ್ಯಪಾಲರ ಷಡ್ಯಂತ್ರ ಎಂಬ ಆರೋಪ ವಿಚಾರ ಯಾವುದೇ ಷಡ್ಯಂತ್ರ ಇಲ್ಲಾ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ರಾಜ್ಯಪಾಲರು ಅಲ್ಲಾ ಇದು ಕೋರ್ಟ್ ಹೇಳಿದೆ ಎಲ್ಲಿದೆ ಇದರಲ್ಲಿ ಸ್ಪಷ್ಟವಾಗಿ ಆದೇಶ ಆಗಿದೆ.ಆದ್ದರಿಂದ ಸಿದ್ಧರಾಮಯ್ಯ ಒಂದು ಕ್ಷಣ ಸಿಎಂ ಸ್ಥಾನದಲ್ಲಿ ಇರಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ರಾಜೀನಾಮೆ ಕೊಟ್ಟು ಹೊರಬರಬೇಕು. ಸಿದ್ಧರಾಮಯ್ಯಾ ನವರು ರಾಮಕೃಷ್ಣ ಹೆಗಡೆ ಶಿಷ್ಯ ಅಂತಾರೆ. ಕೂಡಲೇ ರಾಜೀನಾಮೆ ಕೊಡಲಿ, ಮುಡಾ ಹಗರಣ ಸಿಬಿಐ ತನಿಖೆಗೆ ಕೊಡಲಿ. ಮುಡಾ ಹಗರಣವನ್ನ ಲೋಕಾಯುಕ್ತ ತನಿಖೆ ಬೇಡಾ ಸಿಬಿಐ ಗೆ ಕೊಡಲಿ ಎಂದ ಅವರು, ಲೋಕಾಯುಕ್ತ ಇಲಾಖೆಯಲ್ಲಿ ಅಧಿಕಾರಿಗಳು ಇರುತ್ತಾರೆ ಈ ಅಧಿಕಾರಿಗಳನ್ನ ರಾಜ್ಯ ಸರ್ಕಾರದವರು ನೇಮಕ ಮಾಡುತ್ತಾರೆ
ಹೇಗೆ ನ್ಯಾಯ ನೀರಿಕ್ಷೆ ಮಾಡಲು ಸಾಧ್ಯ ಎಂದರು.

ಸಿದ್ಧರಾಮಯ್ಯಾ ನವರು ಒಂದು ಕ್ಷಣ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯದೇ ತಕ್ಷಣ ರಾಜೀನಾಮೆ ಕೊಟ್ಟು ತನಿಖೆ ಎದುರುಸಬೇಕು ಎಂದು ಆಗ್ರಹಿಸಿದರು. ಮುಡಾ ಹಗರಣ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೇಶಾದ್ಯಂತ ಚರ್ಚೆಗೆ ಗ್ರಾಮವಾಗಿತ್ತು ಈಗ ಏನಾಗಿದೆ ಕೋರ್ಟ್ ಸ್ಪಷ್ಟವಾದ ಆದೇಶ ಕೊಟ್ಟಿದೆ ಎಂದ ಅವರು ಇದೇ ವೇಳೆ ಮುಡಾ ಹಗರಣದಲ್ಲಿ ಆದ ಹೈಕೋರ್ಟ್ ಆದೇಶ ಪ್ರತಿ ಓದಿ ಹೇಳಿದರು.
ಕಾಂಗ್ರೆಸ್ ಪಕ್ಷದ ಡಿಎನ್ ಎದಲ್ಲಿಯೇ ಭ್ರಷ್ಟಾಚಾರ ಇದೆ ಅಂತಾ ಹೇಳಿದ್ದೆ ಇದರಲ್ಲಿ ಬಹಳ ಕ್ಲಿಯರ್ ಆಗಿ ಇದೆ ಸಿಎಂಸಿದ್ಧರಾಮಯ್ಯಾ ಮೇಲ್ನೋಟಕ್ಕೆ ಹೇಳಿದೆ ಇದರಲ್ಲಿ ಸಿಎಂ ಸಿದ್ಧರಾಮಯ್ಯಾ ದುರುಪಯೋಗ ಮಾಡಿಕೊಂಡಿದೆ ಅಂತಾ ಹೇಳಿದ್ದು, ಕಾನೂನು ನಿಯಮಗಳನ್ನ ಉಲ್ಲಂಘನೆ ಸಹ ಮಾಡಲಾಗಿದೆ.ಸಿದ್ಧರಾಮಯ್ಯಾ ಭ್ರಷ್ಟಾಚಾರ ಮಾಡಿಲ್ಲ ಅಂತಾ ಹೇಳಲಿಕ್ಕೆ ಆಗಲ್ಲ ಕಾರಣಇದೊಂದು ಬಹಳ ಗಂಭೀರವಾದ ಪ್ರಕರಣ ಆಗಿದೆ.
ಸಿದ್ಧರಾಮಯ್ಯಾ ನ್ಯಾಯಾಲಯಕ್ಕೆ ಅಪೀಲ್ ಸಹ ಹೋಗಬಹುದು ಇದಕ್ಕೋ ಮುನ್ನ ರಾಜೀನಾಮೆ ಕೊಡಬೇಕು ಒಂದು ಕ್ಷಣ ಸಿಎಂ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಒತ್ತಾಯ ಮಾಡಿದರು. ಇನ್ನು
ಸಿದ್ಧರಾಮಯ್ಯಾ ನವರು ನೆನಪು ಮಾಡಿಕೊಳ್ಳಬಹುದು ಈ ಹಿಂದೆ ಸಹ ಯಡಿಯೂರಪ್ಪ ಅವರ ರಾಜೀನಾಮೆ ಕೊಡಲು ಆಗ್ರಹಿಸಿದ್ದರು. ಮೈಸೂರಿನಲ್ಲಿದಲಿತ ವ್ಯಕ್ತಿಯ ಭೂಮಿ ಹೊಡೆಯುವುದು ಎಷ್ಟು ಸರಿ
ರಾಜ್ಯಪಾಲರಿಗೆ ಬಹಳಷ್ಟು ಅವಮಾನ ಮಾಡಲಾಗಿದೆ.
ರಾಜ್ಯಪಾಲರ ಪೋಟೋಕ್ಕೆ ಚಪ್ಪಲಿ ಹಾರ ಹಾಕಿಸಿದ್ದು, ರಾಜ್ಯಪಾಲರಿಗೆ ಬಾಯಿಗೆ ಬಂದಂತೆ ಬೈಯದಿದ್ದು ಸಾಕಷ್ಟು ಪ್ರಮಾಣದಲ್ಲಿ ಅಪಮಾನವನ್ನ ಸಿದ್ಧರಾಮಯ್ಯಾ ನವರು ಮಾಡಿಸಿದರು. ಈಗ ಹೈಕೋರ್ಟ್ ಏನು ಆದೇಶ ಮಾಡಿದೆ ಗೊತ್ತಾಗಿದೆ ಅಲ್ಲಾ. ಆದ್ದರಿಂದ ಹಿಂದೆ ಮುಂದೆ ನೋಡಿದೇ ಸಿದ್ಧರಾಮಯ್ಯಾ ರಾಜೀನಾಮೆ ಕೊಡಬೇಕುಯಾವುದೇ ರೀತಿಯ ಸಿದ್ಧರಾಮಯ್ಯಾ ಪರ ವಕೀಲರು ಸಹ ಆದೇಶ ತಕ್ಷಣ ಜಾರಿ ಮಾಡಬಾರದು ಎಂದಿದ್ದಾರೆ ಆದರೆ ಯಾವುದೇ ರೀತಿಯ ಇದಕ್ಕೆ ಅವಕಾಶ ಬೇಡ ಎಂದರು.
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನಾನು ಪ್ರಶ್ನೆ ಮಾಡಲು ಬಯಸುತ್ತೇನೆರಾಹುಲ್ ಗಾಂಧಿ ಅವರು ಬೇರೆ ದೇಶಕ್ಕೆ ಹೋಗಿ ದೇಶದ ಬಗ್ಗೆ ಅಪಮಾನ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications