ಅದೃಷ್ಟದ ಕಾರು ಬದಲಾವಣೆ ಮಾಡಿದ್ರಾ ಎಚ್.ಡಿ.ಕುಮಾರಸ್ವಾಮಿ?
Recommended Video
ಬೆಂಗಳೂರು, ಏಪ್ರಿಲ್ 17 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅದೃಷ್ಟದ ಕಾರನ್ನು ಬದಲಾವಣೆ ಮಾಡಿದರೆ?. ಕುಮಾರಸ್ವಾಮಿ ಪ್ರಯಾಣಿಸುವ ರೇಂಜ್ ರೋವರ್ ಕಾರಿನಲ್ಲಿ ಏಪ್ರಿಲ್ 11ರಂದು ಬೆಂಕಿ ಕಾಣಿಸಿಕೊಂಡಿತ್ತು.
ಹೌದು, ಮುಖ್ಯಮಂತ್ರಿಯಾದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಕಾರನ್ನು ಬಳಕೆ ಮಾಡುತ್ತಿಲ್ಲ. 2018ರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಅವರು ಕಪ್ಪು ರೇಂಜ್ ರೋವರ್ ಕಾರು ಬಳಸುತ್ತಿದ್ದರು.
ಏಪ್ರಿಲ್ 11ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪೀಹಳ್ಳಿ ಗ್ರಾಮದಲ್ಲಿ ಸಂಚಾರ ನಡೆಸುವಾಗ ಕುಮಾರಸ್ವಾಮಿ ಅವರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದ್ದರಿಂದ, ಕುಮಾರಸ್ವಾಮಿ ಅವರು ಕಾರನ್ನು ಬದಲಾಯಿಸಿರುವ ಸಾಧ್ಯತೆ ಇದೆ.
ಕಳೆದ ಮೂರು ದಿನಗಳಿಂದ ಎಚ್.ಡಿ.ಕುಮಾರಸ್ವಾಮಿ ಅವರು ಬಿಳಿ ಬಣ್ಣದ ಲೆಕ್ಸೆಸ್ (Lexus) ಕಾರಿನಲ್ಲಿ ಸಂಚಾರ ನಡೆಸುತ್ತಿದ್ದಾರೆ. ಈ ಕಾರು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರಿಗೆ ಸೇರಿದ್ದಾಗಿದೆ. ರೇಂಜ್ ರೋವರ್ ಕಾರು ರಿಪೇರಿಗೆ ಹೋಗಿದೆ ಎಂಬ ಉತ್ತರವನ್ನು ಮುಖ್ಯಮಂತ್ರಿಗಳ ಸಿಬ್ಬಂದಿ ನೀಡಿದ್ದಾರೆ.

ಮುಖ್ಯಮಂತ್ರಿಗಳ ಕಾರು
ಕಪ್ಪು ಬಣ್ಣದ ರೇಂಜ್ ರೋವರ್ ಕಾರನ್ನು ಅದೃಷ್ಟದ ಕಾರು ಎಂದು ಎಚ್.ಡಿ.ಕುಮಾರಸ್ವಾಮಿ ನಂಬುತ್ತಾರೆ. 2018ರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಅವರ ರೇಂಜ್ ರೋವರ್ ಕಾರಿನಲ್ಲಿ ಸಂಚಾರ ನಡೆಸುತ್ತಿದ್ದರು. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಅವರು ಮುಖ್ಯಮಂತ್ರಿಯಾದರೂ ರೇಂಜ್ ರೋವರ್ ಕಾರಿನ ಬಳಕೆ ಬಿಟ್ಟಿರಲಿಲ್ಲ.

ಸರ್ಕಾರಿ ಕಾರು ಬಳಕೆ ಮಾಡುತ್ತಿಲ್ಲ
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮುಖ್ಯಮಂತ್ರಿಗಳಿಗೆ ಟೊಯೋಟಾ ಫಾರ್ಚುನರ್ ಕಾರನ್ನು ನೀಡಿತ್ತು. ಆದರೆ, ಕುಮಾರಸ್ವಾಮಿ ಅವರು ಸರ್ಕಾರಿ ಕಾರು ಬಳಕೆ ಮಾಡದೇ ರೇಂಜ್ ರೋವರ್ ಕಾರಿನಲ್ಲಿಯೇ ಪ್ರಯಾಣ ಮಾಡುತ್ತಿದ್ದಾರೆ.

ಅದೃಷ್ಟದ ಕಾರು ಬದಲಾವಣೆ
ಕಳೆದ ಮೂರು ದಿನಗಳಿಂದ ಎಚ್.ಡಿ.ಕುಮಾರಸ್ವಾಮಿ ಅವರು ಬಿಳಿ ಬಣ್ಣದ ಲೆಕ್ಸೆಸ್ (Lexus) ಕಾರಿನಲ್ಲಿ ಸಂಚಾರ ನಡೆಸುತ್ತಿದ್ದಾರೆ. ರೇಂಜ್ ರೋವರ್ ಕಾರನ್ನು ರಿಪೇರಿಗೆ ಕಳಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಲೆಕ್ಸೆಸ್ ಕಾರು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರಿಗೆ ಸೇರಿದ್ದು.

ಕಾರಿನಲ್ಲಿ ಬೆಂಕಿ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಚುನಾವಣಾ ಪ್ರಚಾರ ಮುಗಿಸಿ ವಾಪಸ್ ಆಗುವಾಗ ಕುಮಾರಸ್ವಾಮಿ ಅವರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅವರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದರು. ಆದ್ದರಿಂದ, ಕಾರನ್ನು ಬದಲಾವಣೆ ಮಾಡಿದ್ದಾರೆಯೇ? ಎಂಬ ಪ್ರಶ್ನೆ ಎದ್ದಿದೆ.












Click it and Unblock the Notifications