ಗಣರಾಜ್ಯೋತ್ಸವ : ಕರ್ನಾಟಕದ ಸ್ತಬ್ಧಚಿತ್ರ ನೋಡಿ
ಬೆಂಗಳೂರು, ಜ. 23 : ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ಈ ಬಾರಿಯ ಪೆರೇಡ್‌ನಲ್ಲಿ ಕರ್ನಾಟಕದ ಚನ್ನಪಟ್ಟಣ ಬೊಂಬೆಗಳ ಸ್ತಬ್ಧ ಚಿತ್ರ ಮೊದಲು ಆಗಮಿಸಲಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ವೀಕ್ಷಿಸುವ ಮೊದಲ ಸ್ತಬ್ಧ ಚಿತ್ರ ನಮ್ಮ ರಾಜ್ಯದ್ದಾಗಲಿದೆ.
66ನೇ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ 16 ರಾಜ್ಯಗಳು, 9 ವಿವಿಧ ಸಚಿವಾಲಯಗಳ ಟ್ಯಾಬ್ಲೋ ಸೇರಿ ಒಟ್ಟು 25 ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ. ರಕ್ಷಣಾ ಇಲಾಖೆಯ ಯಂತ್ರೋಪಕರಣಗಳ ಪ್ರದರ್ಶನದ ಬಳಿಕ ಸ್ತಬ್ಧ ಚಿತ್ರಗಳ ಮೆರವಣಿಗೆ ಆರಂಭವಾಗಲಿದೆ.

ಕರ್ನಾಟಕದ ಸ್ತಬ್ಧ ಚಿತ್ರ ಹೀಗಿದೆ : ಕರ್ನಾಟಕದ ಚನ್ನಪಟ್ಟಣದ ಬೊಂಬೆಗಳ ಸ್ತಬ್ಧ ಚಿತ್ರ ಮಕ್ಕಳ ಲೋಕವನ್ನು ಪ್ರತಿಬಿಂಬಿಸಲಿದೆ. 42 ಬೊಂಬೆ ಹಾಗೂ ಆಟಿಕೆಗಳು ಈ ಸ್ತಬ್ಧ ಚಿತ್ರದಲ್ಲಿವೆ. 4 ಬೊಂಬೆಗಳು ಬ್ಯಾಟರಿ ಚಾಲಿತವಾಗಿ ತಿರುಗುತ್ತವೆ.[ಗಣರಾಜ್ಯೋತ್ಸವಕ್ಕೆ ಸೈನಿಕರ ತಾಲೀಮು, ನೋಡಿ]
ಕನ್ನಡದ ಜನಪ್ರಿಯ ಶಿಶುಗೀತೆ 'ಆನೆ ಬಂತೊಂದಾನೆ' ಗೀತೆಯ ಸಾಲುಗಳ ಸಂಗೀತವೂ ಸ್ತಬ್ಧ ಚಿತ್ರದ ಜೊತೆ ಬಿತ್ತರಗೊಳ್ಳಲಿದೆ. ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ರಾವ್ ಅವರು ಈ ಸಂಗೀತ ಸಂಯೋಜನೆ ಮಾಡಿದ್ದಾರೆ. [ಗಣರಾಜ್ಯೋತ್ಸವದಲ್ಲಿ ಚನ್ನಪಟ್ಟಣದ ಗೊಂಬೆಗಳ ಕಲರವ]
ಶಶಿಧರ ಅಡಪ ಅವರ ನೇತೃತ್ವದಲ್ಲಿ ಸುಮಾರು 100 ಮಂದಿಯ ತಂಡ ಎರಡು ತಿಂಗಳ ಕಾಲ ಕೆಲಸ ಮಾಡಿ ಈ ಸ್ತಬ್ಧಚಿತ್ರವನ್ನು ನಿರ್ಮಿಸಿದ್ದಾರೆ. ಸ್ತಬ್ಧ ಚಿತ್ರದೊಂದಿಗೆ ದೆಹಲಿಯ ಕನ್ನಡ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.[ಪಿಟಿಐ ಚಿತ್ರ]












Click it and Unblock the Notifications