5 ವರ್ಷ ಫಿಕ್ಸ್; ಸಿದ್ದರಾಮಯ್ಯರನ್ನ ಬದಲಾಯಿಸೋದು ಅಷ್ಟು ಸುಲಭ ಅಲ್ಲ: ಮೊಹರಂ ದೈವ ವಾಣಿ ಭವಿಷ್ಯ
ಬೆಂಗಳೂರು, ಜುಲೈ 07: 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಬಹುತದೊಂದಿಗೆ ಅಧಿಕಾರಕ್ಕೆ ಬಂದ ದಿನವೇ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಬಿಗ್ ಫೈಟ್ ಏರ್ಪಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಪಟ್ಟವು ಸಿದ್ದರಾಮಯ್ಯ ಪಾಲಾಯಿತು. ಸದ್ಯ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಬರೋಬ್ಬರಿ ಎರಡು ವರ್ಷ ಪೂರೈಸಿದೆ. ಇದೀಗ ಅಧಿಕಾರ ಹಂಚಿಕೆ ಸೂತ್ರದಡಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇತ್ತ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಭರ್ಜರಿ ಪೈಪೋಟಿ ಶುರುವಾಗಿದೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಕಾಂಗ್ರೆಸ್ ಪಾಳಯದಲ್ಲಿ ಬಹುದಿನಳಿಂದಲೂ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಿದ್ದರಾಮಯ್ಯ ಬಣದ ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಇತ್ತ ಡಿ ಕೆ ಶಿವಕುಮಾರ್ ಬಣದವರು ಮುಖ್ಯಮಂತ್ರಿ ಬದಲಾಗುತ್ತಾರೆ ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರ ನಡುವೆ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇತ್ತ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕಾಗಿ ಕಾದುಕುಳಿತ್ತಿದ್ದಾರೆ. ಇನ್ನೂ ಹಲವು ಮಠಾಧೀಶರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗಲಿ ಅಂತ ಹೇಳಿಕೆ ನೀಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಬಣದ ಶಾಸಕರು ಕೂಡ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯ ಹಾಲು ಕೆಟ್ಟರು ಹಾಲುಮತ ಕೆಡಲ್ಲ. ಅಂಥವರ ಕೈಯಲ್ಲಿ ಅಧಿಕಾರ ಕೊಟ್ಟಿದ್ದೀರಿ ಅಧಿಕಾರ ಬದಲಾಯಿಸುವುದು ಅಷ್ಟು ಸುಲಭವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಮೊಹರಂ ಅಲಿ ದೈವ ವಾಣಿ ಭವಿಷ್ಯ ನುಡಿದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಕೌಜಗೇರಿ ಗ್ರಾಮದ ಮೊಹರಂ ಹಬ್ಬದ ಅಂಗವಾಗಿ ಭಾನುವಾರ ಅಲಿ ದೇವರು ದೈವ ಭವಿಷ್ಯ ವಾಣಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಬಂದಿದೆ. ಹಾಲು ಕೆಟ್ಟರೆ ಹಾಲುಮತ ಕೆಡಲ್ಲ. ಅಂಥವರ ಕೈಯಾಗ ಅಧಿಕಾರ ಸಿಕ್ಕಿದೆ, ನೀವು ಕೊಟ್ಟಿರಿ ಅದನ್ನ ಬದಲಿ ಮಾಡುವುದು ಅಷ್ಟು ಸುಲಭವಲ್ಲ ಬಹಳ ಕಠಿಣ ಐತಿ ಎಂದು ದೇವರ ವಾಣಿ ಭವಿಷ್ಯ ನುಡಿದಿದೆ. ಹಾಲು ಕೆಟ್ರು ಹಾಲುಮತ ಕೆಡಂಗಿಲ್ಲ ಅಂತವ್ರ್ ಕೈಯಾಗ ಅಧಿಕಾರ ಸಿಕ್ಕತಿ ನೀವು ಕೊಟ್ಟಿದ್ದೀರಿ ಅದನ್ನು ಬದಲಿ ಮಾಡುವುದು ಅಷ್ಟು ಸುಲಭ ಅಲ್ಲ ಬಹಳ ಕಠಿಣ ಐತಿ ಅವರಿಗೆ ಅಧಿಕಾರ ಬಿಟ್ರಾ ಇನ್ನೊಬ್ಬರಿಗೆ ಅಧಿಕಾರ ಹೊಕ್ಕತಿ ಅಂತ ಮೊಹರಂ ಆಲಿ ದೈವ ವಾಣಿ ನುಡಿದಿದೆ.












Click it and Unblock the Notifications