ಗುಂಡ್ಲುಪೇಟೆಯಲ್ಲಿ ಸೆರೆಸಿಕ್ಕಿತು ನರಭಕ್ಷಕ ವ್ಯಾಘ್ರ

ಚಾಮರಾಜನಗರ, ಜ. 2 : ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಜನರಲ್ಲಿ ಆತಂಕ ಮೂಡಿಸಿದ್ದ ನರಭಕ್ಷಕ ಹುಲಿಯು ಕೊನೆಗೂ ಸೆರೆಸಿಕ್ಕಿದೆ. ಗುರುವಾರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಹುಲಿ ಬಿದ್ದಿದ್ದು, ಜನರು ನಿರಾಳರಾಗಿದ್ದಾರೆ. ಸದ್ಯ ಹುಲಿಯನ್ನು ಬನ್ನೇರುಘಟ್ಟ ಉದ್ಯಾನವನಕ್ಕೆ ತರಲಾಗುತ್ತಿದೆ.

ಡಿ.27ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿ ದನ ಮೇಯಿಸುತ್ತಿದ್ದ ಜವರಯ್ಯ ಎಂಬ ರೈತನ ಮೇಲೆ ದಾಳಿ ಮಾಡಿದ್ದ ಹುಲಿ ಅವನನ್ನು ಕೊಂದು ಹಾಕಿತ್ತು. ಅಂದಿನಿಂದಲೂ ಅರಣ್ಯ ಇಲಾಖೆ ಹುಲಿಯನ್ನು ಹಿಡಿಯಲು ಕಾರ್ಯಚರಣೆ ಕೈಗೊಂಡಿತ್ತು. ಎರಡು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದ ಹುಲಿ ಗುರುವಾರ ಸಿಕ್ಕಿಬಿದ್ದಿದೆ. [ಗುಂಡ್ಲುಪೇಟೆಯಲ್ಲಿ ಹುಲಿ ದಾಳಿಗೆ ರೈತ ಬಲಿ]

TIGER

ಹುಲಿಯ ಓಡಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮದ್ದೂರು ಕಾಲೋನಿ ಬಳಿ ಬೋನು ಇಟ್ಟಿದ್ದರು. ಬುಧವಾರ ರಾತ್ರಿ ಹುಲಿ ಬೋನಿಗೆ ಬಿದ್ದಿದ್ದು, ಗುರುವಾರ ಬೆಳಗ್ಗೆ ಅದನ್ನು ಆನೆಗಳ ಸಹಾಯದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗುತ್ತಿದೆ. ಹುಲಿಯ ಕಾಲಿಗೆ ಗಾಯವಾಗಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಬನ್ನೇರುಘಟ್ಟದಲ್ಲಿ ನೀಡಲಾಗುತ್ತದೆ. [ಮೈಸೂರಿನಲ್ಲಿ ಸೆರೆಸಿಕ್ಕ ನರಭಕ್ಷಕ ಹುಲಿ]

ಗುಂಡ್ಲುಪೇಟೆಯ ಮದ್ದೂರು ಕಾಲೋನಿಯಲ್ಲಿ ಜವರಯ್ಯ ಎಂಬ ರೈತನನ್ನು ಕೊಂದ ಹುಲಿಯನ್ನು ಸೆರೆ ಹಿಡಿಯಲು ಬಂಡೀಪುರದಿಂದ ಅಭಿಮನ್ಯು ಆನೆಯನ್ನು ಕರೆಸಲಾಗಿತ್ತು. ಹುಲಿ ಹಿಡಿಯಲು ಬೋನ್ ಇಟ್ಟು ಎರಡು ಕರುಗಳನ್ನು ಕಟ್ಟಿಹಾಕಲಾಗಿತ್ತು. ಹುಲಿಯನ್ನು ಹಿಡಿಯಲು ಕಾಡಿನಲ್ಲಿ ಸಿಸಿಟಿವಿ ಸಹ ಅಳವಡಿಸಲಾಗಿತ್ತು. ಈ ವೇಳೆ ಹುಲಿಯ ಕಾಲಿಗೆ ಗಾಯವಾಗಿದ್ದು, ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಗಾಯಗೊಂಡ ಹುಲಿ ಬಹುದೂರ ಹೋಗಲು ಸಾಧ್ಯವಿಲ್ಲ ಎಂದು ಅರಿತ ಸಿಬ್ಬಂದಿ ಮದ್ದೂರು ಕಾಲೋನಿ ಸಮೀಪದ ಅರಣ್ಯದಲ್ಲಿ ಅದನ್ನು ಹಿಡಿಯಲು ಕಾರ್ಯಾಚರನೆ ನಡೆಸಿದ್ದರು. ಡಿ.31ರಂದು ಬೋನಿಗೆ ಬೀಳಬೇಕಿದ್ದ ಹುಲಿ ಅಲ್ಲಿ ಕಟ್ಟಿಹಾಕಿದ್ದ ಕರುಗಳನ್ನು ತಿಂದು, ಪರಾರಿಯಾಗಿತ್ತು. ಗುರುವಾರ ಕರುವನ್ನು ತಿನ್ನಲು ಬಂದು ಬೋನಿನೊಳಗೆ ಸಿಕ್ಕಿಹಾಕಿಕೊಂಡಿದೆ.

ಮದ್ದೂರು ಕಾಲೋನಿಯಲ್ಲಿ ಹುಲಿ ಬೋನಿಗೆ ಬಿದ್ದಿದೆ ಎಂಬ ಸುದ್ದಿ ಕೇಳಿದ ಗ್ರಾಮಸ್ಥರು ಹುಲಿಯನ್ನು ನೋಡಲು ಕಾಡಿನಂಚಿನಲ್ಲಿ ಜಮಾಯಿಸಿದ್ದರು. ಆದರೆ, ಅಧಿಕಾರಿಗಳು ಹುಲಿಯನ್ನು ಗ್ರಾಮಸ್ಥರಿಗೆ ತೋರಿಸಿದೆ ಅದನ್ನು ಬನ್ನೇರುಘಟ್ಟಕ್ಕೆ ತರಲು ವ್ಯವಸ್ಥೆ ಮಾಡಿದರು.ಇದರಿಂದ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+