CM Siddaramaiah: ಸಿದ್ದರಾಮಯ್ಯ ಮುಡಾ ಸಂಕಷ್ಟ; 'ಸಿಎಂ ಜಗ್ಗಿದ್ಯಾಕೆ? ಬಗ್ಗಿದ್ಯಾಕೆ?'

ಬೆಂಗಳೂರು, ಅಕ್ಟೋಬರ್‌ 01: ಸಿದ್ದರಾಮಯ್ಯನವರು ಈಗ ಸಿಕ್ಕಿಬಿದ್ದಿದ್ದಾರೆ. ಜಗ್ಗೋಲ್ಲ;,ಬಗ್ಗೋಲ್ಲ ಏನೇ ಬಂದ್ರೂ ಎದುರಿಸ್ತೀನಿ ಎಂದವರು ನಿನ್ನೆ ಕತ್ತಲಾದ ಮೇಲೆ ಜಗ್ಗಿದ್ಯಾಕೆ? ಬಗ್ಗಿದ್ಯಾಕೆ? ರಾತ್ರೋರಾತ್ರಿ ಜಗ್ಗಿದ್ದು, ಬಗ್ಗಿದ್ದು ಯಾಕೆ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು(ಮಂಗಳವಾರ) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದರಿಂದ ಅವರ ಕಪಟತನ ಎಂಥದ್ದೆಂದು ಅರ್ಥವಾಗುತ್ತದೆ. ನಿನ್ನೆ 14 ಸೈಟ್ ಸರೆಂಡರ್ ಮಾಡಿದ್ದಾಗಿ ಲೆಟರ್ ಕೊಟ್ಟಿದ್ದಾರೆ. ಆ ಪತ್ರದಲ್ಲಿ ದಿನಾಂಕವೂ ಇಲ್ಲ. ಆದ್ದರಿಂದ ಅದು ಖಾತ್ರಿಯೇನಲ್ಲ ಎಂದು ತಿಳಿಸಿದರು.

Chalavadi Narayan Swamy Asked CM Siddaramaiah Many Questions

ಹಳ್ಳಿಕಡೆ 'ನೂರು ಬಾರಿ ಕದ್ದೋನು ಒಂದು ಸಾರಿಯಾದ್ರೂ ಸಿಗಲೇಬೇಕು' ಎಂಬ ಗಾದೆ ಇದೆ. ಹಾಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಚಾ ಅಲ್ಲ. ನೂರಾರು ಬಾರಿ ಕದ್ದವರು ಒಂದು ಸಾರಿ ಸಿಕ್ಕಿ ಹಾಕಿಕೊಳ್ತಾರಲ್ವ? ಒಂದು ಸಾರಿ ಸಿಕ್ಕಿದರೂ ನೂರು ಬಾರಿ ಮಾಡಿದ ಹಾಗೇ ಎಂದು ವಿಶ್ಲೇಷಿಸಿದರು.

ಇವರು ಜಗ್ಗಿದ ಮೇಲೆ ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ನಿಜವಾಗಿಯೂ ಗೌರವ ಸಿಕ್ಕಿದೆ. ಯಾರೂ ಕೂಡ ಈ ರೀತಿ ಉದ್ಧಟತನ ಪ್ರದರ್ಶನ ಮಾಡಬಾರದು ಎಂದು ನುಡಿದರು. ಕಳೆದ ಬಾರಿ ಅವರ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕಳವಾಗಿದ್ದ ಹುಬ್ಲೋಟ್ ವಾಚ್ ವಿಚಾರ ಬಂದಿತ್ತು. ಅದೊಂದು ಹಗರಣವಾಗಿತ್ತು. ಅದು ದುಡ್ಡು ಕೊಟ್ಟು ಕೊಂಡದ್ದೆಂದು ಮೊದಲು ಹೇಳಿದ್ದರು. ಸ್ವಲ್ಪ ದಿನದ ಬಳಿಕ ಸ್ನೇಹಿತರಿಂದ ಉಡುಗೊರೆ ಎಂದಿದ್ದರು. ನಂತರ ಕಳವು ಮಾಲೆಂದು ಗೊತ್ತಾಗಿತ್ತು. ಇದರಿಂದ ಕಷ್ಟ ಅನುಭವಿಸಬೇಕಾಗಬಹುದೆಂದು ಅದನ್ನು ಸರೆಂಡರ್ ಮಾಡಿದ್ದರು ಎಂದು ವಿವರಿಸಿದರು.

ಕದ್ದ ಮಾಲನ್ನು ವಿಧಾನಸೌಧದಲ್ಲಿ ಸರೆಂಡರ್ ಮಾಡಿದ್ದು ಸರಿಯೇ? ಪೊಲೀಸರಿಗೆ ಕೊಡಬೇಕಿತ್ತಲ್ಲವೇ? ಎಂದು ಕೇಳಿದರು. ಎಸ್‍ಇಪಿ, ಎಸ್‍ಟಿಪಿ ಹಣ ದುರುಪಯೋಗ ಮಾಡಿದರು. ಪ್ರತಿಭಟನೆ ನಡೆದು ಮುಜುಗರ ಅನುಭವಿಸಬೇಕಾದ ಸಂದರ್ಭದಲ್ಲಿ, ಪ್ರಜಾಪ್ರಭುತ್ವ ದಿನದಂದು ನಾನೊಂದು ತಪ್ಪು ಮಾಡಿದೆ. ಅನ್ಯ ಉದ್ದೇಶಕ್ಕೆ ಪರಿಶಿಷ್ಟ ಸಮುದಾಯದ ಹಣ ಬಳಸಬಾರದಿತ್ತು ಎಂದಿದ್ದರು ಎಂದು ಗಮನ ಸೆಳೆದರು. ಅಲ್ಲಿಗೆ ಅವೆರಡರಿಂದ ತಪ್ಪಿಸಿಕೊಂಡರು ಎಂದರು.

ವಾಲ್ಮೀಕಿ ನಿಗಮದ್ದು 187 ಕೋಟಿಯ ಹಗರಣವಲ್ಲ; 87 ಕೋಟಿಯ ಹಗರಣ ಎಂದು ಸದನದಲ್ಲೇ ಒಪ್ಪಿಕೊಂಡರು. ಈಗ ಮುಡಾದ್ದು ತಮ್ಮ ನಿವೇಶನಗಳಿಗೆ 62 ಕೋಟಿ ಬರಬೇಕು; ಕೊಡ್ತೀರಾ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು. ಪತ್ರಕರ್ತರು ಕೊಡ್ತಾರಾ? ಎಂದು ಕೇಳಿದರು. ಇವತ್ತಿನ ಅವರ ಪರಿಸ್ಥಿತಿ ನೋಡಿ ಎಂದು ತಿಳಿಸಿದರು.

ನೀತಿ ಮತ್ತು ನ್ಯಾಯದ ಹಾದಿಯನ್ನು ಬಿಟ್ಟು ಎಷ್ಟು ದೂರ ಹೋದರೂ, ಒಂದು ದಿನ ಬಂದು ಸತ್ಯದ ಎದುರು ಶರಣಾಗಬೇಕಾಗುತ್ತದೆ. ಸಿದ್ದರಾಮಯ್ಯ ಅವರ ನಿವೇಶನ ಹಿಂದಿರುಗಿಸುವ ನಿರ್ಧಾರಕ್ಕೆ "ಕತ್ತಲು ಕಟ್ಟಿ ಹೋದ ಮೇಲೆ ದೀಪ ಹಚ್ಚಿದಂತೆ" ಎಂಬ ಗಾದೆ ನಿಖರವಾಗಿ ಅನ್ವಯಿಸುತ್ತದೆ. ಒಳ್ಳೆಯದ್ದನ್ನು ಮಾಡಬೇಕಾದ ಸಮಯವು ಕಳೆದುಹೋದ ಮೇಲೆ ಬಂದ ಜ್ಞಾನ, ಅನಿವಾರ್ಯವಾಗಿ ಪಶ್ಚಾತ್ತಾಪವನ್ನೇ ತರುತ್ತದೆ ಎಂಬುದು ಮಾನ್ಯ ಸಿದ್ದರಾಮಯ್ಯ ರವರ ನಡೆಯಿಂದ ಸ್ಪಷ್ಟವಾಗಿದೆ.

ಅವರ ತಪ್ಪುಗಳನ್ನು ಒಪ್ಪಿಕೊಳ್ಳದೆ, ಬಿಜೆಪಿ ಮೇಲೆ ನಿರಂತರ ಆರೋಪ ಮಾಡಿ, ಗೌರವಾನ್ವಿತ ರಾಜ್ಯಪಾಲರನ್ನು ಮತ್ತು ಅವರ ಹುದ್ದೆಯನ್ನು ಅಪಮಾನಿಸುವಂತ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡಿ, ನಮ್ಮ ಪಕ್ಷದ ಮೈಸೂರು ಚಲೋ ಪಾದಯಾತ್ರೆಗೆ ಪರ್ಯಾಯವಾಗಿ ಭಂಡತನ ಪ್ರದರ್ಶಿಸಿ, ಅಬ್ಬರಿಸಿ, ಬೊಬ್ಬಿರಿದು ಕಪ್ಪು ಚುಕ್ಕೆ ಇಲ್ಲ ನನ್ನಲ್ಲಿ ಎಂಬಂತಹ ಅಪಹಾಸ್ಯದ ಹೇಳಿಕೆಗಳನ್ನು ನೀಡಿ, ಕೊನೆಗೆ ಹೋದ ಮೇಲೆ ನೀರಲ್ಲಿ ಹೋಮ ಎಂಬ ಗಾದೆಯ ಮಾತಿನಂತೆ ಸೈಟ್ ಗಳನ್ನು ಹಿಂದಿರುಗಿಸಲು ನಿರ್ಧಾರ ಪ್ರಕಟಿಸಿರುವುದು ತಮ್ಮ ತಪ್ಪನ್ನು ಸ್ಪಷ್ಟವಾಗಿ ಒಪ್ಪಿಕೊಂಡ ಹಾಗೆ ಅನಿಸುತ್ತದೆ. ಅವರ ಈ ನಡೆ ಕೇವಲ ಕಾನೂನಿನ ಬಂಧನದಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನವೇ ಹೊರತು, ನೈತಿಕ ಜವಾಬ್ದಾರಿ ಹೊತ್ತಂತೆ ಕಾಣುತ್ತಿಲ್ಲ.

ಸಿದ್ಧರಾಮಯ್ಯ ಅವರ ನಿರ್ಧಾರಗಳು ಮತ್ತು ನಡೆಗಳನ್ನು ಗಮನದಲ್ಲಿಟ್ಟುಕೊಂಡರೆ, ಅವರು ಇದೀಗ ಮೂಡಾ ಹಗರಣದ ನೈತಿಕ ಹೊಣೆ ಹೊತ್ತು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನೈತಿಕತೆಯ ಪ್ರಜ್ಞೆಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+