ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಬಿಕ್ಕಟ್ಟು ಇತ್ಯರ್ಥ: ಸೆ.29 ಪರಿಷ್ಕ್ರತ Ranking ಬಿಡುಗಡೆ, ಆ.3ರಂದು ಕೌನ್ಸಿಲಿಂಗ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ವೃತಿಪರ ಕೋರ್ಸ್ ಗಳ ಸಿಇಟಿ ಶ್ರೇಯಾಂಕ(Ranking)ಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ.
ಈ ಸಮಿತಿಯು ಸಲ್ಲಿಸಿರುವ ವರದಿಯು ಸ್ವಾಗತಾರ್ಹವಾಗಿದ್ದು, ಪರಿಷ್ಕೃತ ಸಿಇಟಿ ರಾಂಕಿಂಗ್ ಪಟ್ಟಿಯನ್ನು ಇದೇ 29ರಂದು ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ಅಕ್ಟೋಬರ್‌ 3ರಿಂದ ಪ್ರವೇಶಾತಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಸಿಇಟಿ ಬಿಕ್ಕಟ್ಟು: ಹೈಕೋರ್ಟ್‌ನಲ್ಲಿ ಶುಕ್ರವಾರ ಫೈನಲ್ ಪರಿಹಾರಸಿಇಟಿ ಬಿಕ್ಕಟ್ಟು: ಹೈಕೋರ್ಟ್‌ನಲ್ಲಿ ಶುಕ್ರವಾರ ಫೈನಲ್ ಪರಿಹಾರ

ಶುಕ್ರವಾರ ಈ ಬಗ್ಗೆ ಮಾತನಾಡಿರುವ ಸಚಿವರು, ಸಿಇಟಿ ಶ್ರೇಯಾಂಕ ಸಮಸ್ಯೆಯನ್ನು ಬಗೆಹರಿಸಲು ಒಂದು ಸಮನ್ವಯ ಸೂತ್ರ ರೂಪಿಸುವಂತೆ ಸೂಚಿಸಿತ್ತು. ಅದರಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಐವರ ಸಮಿತಿ ರಚಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆವು. ಈಗ ನ್ಯಾಯಾಲಯವು ಸಮಿತಿ ಕೊಟ್ಟ ವರದಿಯನ್ನು ಪುರಸ್ಕರಿಸಿರುವುದು ಸಂತಸ ತಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಭಾಗೀಯ ಪೀಠದಲ್ಲಿ ಸಿಇಟಿ ಬಿಕ್ಕಟ್ಟು ಇತ್ಯರ್ಥ

ವಿಭಾಗೀಯ ಪೀಠದಲ್ಲಿ ಸಿಇಟಿ ಬಿಕ್ಕಟ್ಟು ಇತ್ಯರ್ಥ

ವೃತ್ತಿ ಪರ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತಂತೆ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿದೆ. ಸಿಇಟಿ Ranking ವಿವಾದಕ್ಕೆ ಸಂಬಂಧ ಸರ್ಕಾರ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇತ್ಯರ್ಥ ಪಡಿಸಿದೆ. ಸಮಿತಿ ಸೂಚಿಸಿರುವ ವಿಧಾನಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳ ಪರ ವಕೀಲರೂ ಸಮ್ಮತಿಸಿದ ಹಿನ್ನೆಲೆಯಲ್ಲಿ, ಸಮಿತಿ ಸೂಚಿಸಿರುವ ವಿಧಾನ ಅಳವಡಿಸಿಕೊಂಡು, ಹೊಸ Ranking ಪಟ್ಟಿ ಪ್ರಕಟಿಸುವಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್ ಮೇಲ್ಮನವಿ ಇತ್ಯರ್ಥಪಡಿಸಿದೆ.

ಐವರು ಸದಸ್ಯರ ಸಮಿತಿ ನೀಡಿದ ವರದಿಯಲ್ಲಿ ಏನಿದೆ?

ಐವರು ಸದಸ್ಯರ ಸಮಿತಿ ನೀಡಿದ ವರದಿಯಲ್ಲಿ ಏನಿದೆ?

2021ನೇ ಸಾಲಿನ ಪಿಯು ವಿದ್ಯಾರ್ಥಿಗಳಿಗೆ 3 ವಿಷಯಗಳಿಂದ ಒಟ್ಟು 18 ಅಂಕಗಳನ್ನು ಕಡಿತಗೊಳಿಸಿ ಸಾಮಾನ್ಯೀಕರಿಸಬೇಕು. ಭೌತಶಾಸ್ತ್ರದ ಸರಾಸರಿ 6 ಅಂಕ, ರಸಾಯನ ಶಾಸ್ತ್ರದ 5 ಅಂಕ ಹಾಗೂ ಗಣಿತದ 7 ಅಂಕಗಳನ್ನು ಕಡಿಮೆಗೊಳಿಸಬೇಕು. ಆಗ 100 ಅರ್ಹತಾ ಅಂಕಗಳಿಗೆ 6 ಅಂಕ ಕಡಿಮೆಯಾದಂತಾಗಲಿದೆ. ಆ ಬಳಿಕ 2021ನೇ ಸಾಲಿನ ವಿದ್ಯಾರ್ಥಿಗಳ ಒಟ್ಟು ಪಿಯು ಅಂಕಗಳ ಶೇ. 50 ಹಾಗೂ 2022ರ ಸಿಇಟಿಯಲ್ಲಿ ಪಡೆದ ಶೇ. 50 ಅಂಕ ಪರಿಗಣಿಸಿ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಏಕಸದಸ್ಯ ಪೀಠವು ಏನು ಹೇಳಿದೆ?

ಏಕಸದಸ್ಯ ಪೀಠವು ಏನು ಹೇಳಿದೆ?

2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನ ಸಿಇಟಿ ಫಲಿತಾಂಶಕ್ಕೆ ಪರಿಗಣಿಸದ ಕೆಇಎ ಕ್ರಮ ಪ್ರಶ್ನಿಸಿ 50ಕ್ಕೂ ಅಧಿಕ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಏಕಸದಸ್ಯಪೀಠ ಸೆ.3ರಂದು ಆದೇಶ ಹೊರಡಿಸಿತ್ತು. ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿಯ ಶೇ.50 ಅಂಕ ಹಾಗೂ ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ Rank ಪಟ್ಟಿ ಪ್ರಕಟಿಸುವಂತೆ ಕೆಇಎಗೆ ಸೆ.3ರಂದು ಆದೇಶಿಸಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಕೋರಿ ಇದೀಗ ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಕೋವಿಡ್ ಪಿಡುಗಿನಿಂದ ಪರೀಕ್ಷೆಯಿಲ್ಲದೇ ವಿದ್ಯಾರ್ಥಿಗಳು ಪಾಸ್!

ಕೋವಿಡ್ ಪಿಡುಗಿನಿಂದ ಪರೀಕ್ಷೆಯಿಲ್ಲದೇ ವಿದ್ಯಾರ್ಥಿಗಳು ಪಾಸ್!

ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು 2020-2021ನೇ ಸಾಲಿನಲ್ಲಿ ಪಿಯು ಪರೀಕ್ಷೆಯನ್ನೇ ಎದುರಿಸಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದ ಅನುಸಾರ ಅವರು ಅಂಕಗಳನ್ನು ಪಡೆದುಕೊಂಡಿದ್ದಾರೆ. 2020-21ನೇ ಸಾಲಿನಲ್ಲಿ ಪಿಯು ವಿದ್ಯಾರ್ಥಿಗಳು ಅನುತ್ತೀರ್ಣ ಆಗಿರಲಿಲ್ಲ. 2021- 22ನೇ ಸಾಲಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ್ದ ಪರಿಕ್ಷೆಯನ್ನು ಎದುರಿಸಿದ್ದರು. ಹಲವು ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಹಿಂದಿನ ಸಾಲಿನ ವಿದ್ಯಾರ್ಥಿಗಳು ಇಷ್ಟು ಅಂಕಗಳನ್ನು ಪಡೆದುಕೊಂಡಿಲ್ಲ. ಪರೀಕ್ಷೆಯನ್ನೇ ಬರೆಯದೇ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ನೋಡಲಾಗದು ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಲಾಗಿತ್ತು.

English summary
CET ranking crisis : Revised rankings will announce on September 29, counseling from August 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X