ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕಾಗಿ ಇಂದು ರಾತ್ರಿ ಕೇಂದ್ರದ ತಂಡ ಆಗಮನ

|
Google Oneindia Kannada News

ಬೆಂಗಳೂರು, ಸೆ.6: ರಾಜ್ಯದಲ್ಲಿ ಮುಂಗಾರು ಧಾರಾಕಾರ ಮುಂದುವರಿದಿದ್ದು, ನಿರೀಕ್ಷೆಗೂ ಮೀರಿದ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ಸಂಬಂಧ ಅಧ್ಯಯನಕ್ಕಾಗಿ ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಲಿದೆ.

ಬೆಂಗಳೂರು ಜಲಮಂಡಳಿ, ರಾಜ್ಯ ಮಳೆ ಹಾಗೂ ಪ್ರವಾಹದ ಹಾನಿ ಕುರಿತು ಸಚಿವರು , ಅಧಿಕಾರಿಗಳು, ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರದ ತಂಡ ಮಂಗಳವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿದೆ, ಪ್ರಸ್ತುತ ಆಗಿರುವ ಹಾನಿಯ ಬಗ್ಗೆ ಮನವಿ ನೀಡಲಾಗುವುದು. ಕೆಲವು ಜಿಲ್ಲೆಗಳಲ್ಲಿ ತಂಡ ಅಧ್ಯಯನದ ನಂತರ ರಾಜ್ಯ ಸರ್ಕಾರ, ತಂಡದೊಂದಿಗೆ ಸಭೆ ನಡೆಸಲಿದೆ ಎಂದು ಹೇಳಿದರು.

ಅತ್ಯಂತ ಬರಪೀಡಿತ ಪ್ರದೇಶಗಳ ಅಂತರ್ಜಲ ಮಟ್ಟ ಮೇಲೇರಿದೆ ಹಾಗೂ ಎಲ್ಲಾ ಸಣ್ಣ ನೀರಾವರಿ ಹಾಗೂ ಅಚ್ಚುಕಟ್ಟು ಪ್ರದೇಶದ ಕೆರೆಗಳು ತುಂಬಿವೆ ಎಂದು.ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು ಮಳೆ ಹಾಗೂ ಮೂಲಸೌಲಭ್ಯ ನಿರ್ವಹಣೆಗೆ 300 ಕೋಟಿ ರೂ.: ಸಿಎಂ ಬೊಮ್ಮಾಯಿಬೆಂಗಳೂರು ಮಳೆ ಹಾಗೂ ಮೂಲಸೌಲಭ್ಯ ನಿರ್ವಹಣೆಗೆ 300 ಕೋಟಿ ರೂ.: ಸಿಎಂ ಬೊಮ್ಮಾಯಿ

ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಚಾಮರಾಜನಗರ, ಗುಲ್ಬರ್ಗಾ, ಬೀದರ್, ಕೊಪ್ಪಳ ಎಲ್ಲಾ ಪ್ರದೇಶಗಳಲ್ಲಿ ಕೆರೆಗಳು ತುಂಬಿರುವುದು ದಾಖಲೆ. ರಾಜ್ಯ ದಲ್ಲಿ ಆಗಸ್ಟ್ ಕೊನೆ ವಾರದಲ್ಲಿ ಒಟ್ಟಾರೆ ಶೇ 144 ರಷ್ಟು ಹೆಚ್ಚುವರಿ ಮಳೆಯಾಗಿದೆ. ಸೆಪ್ಟೆಂಬರ್ 5 ದಿನಗಳಲ್ಲಿಯೇ ಶೇ 51ರಷ್ಟು ಮಳೆ ಹೆಚ್ಚಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಮತ್ತೆ ಮಳೆ ಹೆಚ್ಚಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸೂಚನೆ ಇದೆ ಎಂದರು.

ಬೆಂಗಳೂರಿನ 164 ಕೆರೆಗಳೆಲ್ಲವೂ ತುಂಬಿ ಹರಿಯುತ್ತಿವೆ

ಬೆಂಗಳೂರಿನ 164 ಕೆರೆಗಳೆಲ್ಲವೂ ತುಂಬಿ ಹರಿಯುತ್ತಿವೆ

ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 1 ರಿಂದ 5 ರವರೆಗೆ ಕೆಲವು ಪ್ರದೇಶಗಳಲ್ಲಿ ಶೇ 150 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಕೆ.ಆರ್.ಪುರಂ ಭಾಗದಲ್ಲಿ ಶೇ. 307 ರಷ್ಟು ಹೆಚ್ವು ಮಳೆಯಾಗಿದೆ. ಕಳೆದ 42 ವರ್ಷಗಳಲ್ಲಿಯೇ ಆಗಿರುವ ಅತಿ ಹೆಚ್ಚಿನ ಮಳೆ ಇದು. ಬೆಂಗಳೂರಿನ 164 ಕೆರೆಗಳೆಲ್ಲವೂ ತುಂಬಿ ಹರಿಯುತ್ತಿವೆ. ಆದರೆ ಜೊತೆಗೆ ಮಳೆಯಾಗಿ ದೊಡ್ಡ ಪ್ರಮಾಣದ ಪ್ರವಾಹ ದಕ್ಷಿಣ ವಲಯದಲ್ಲಿ ಆಗಿದೆ. ಹಲವಾರು ಪ್ರದೇಶಗಳಿಗೆ ಭೇಟಿಯನ್ನೂ ನೀಡಲಾಗಿದೆ ಎಂದರು.

ಕೆರೆಗಳಿಗೆ ಸ್ಲೂಯೀಸ್ ಗೇಟ್ ಗಳಿಲ್ಲ. ನೀರು ಹೊರಬಿಡಲು , ಹಿಡಿದಿಟ್ಟುಕೊಳ್ಳುವುದು ಹಾಗೂ ಕೆರೆ ನಿರ್ವಹಣೆಗೆ ಸ್ಲೂಯೀಸ್ ಗೇಟ್ ಅವಶ್ಯಕ. ಬೆಂಗಳೂರಿನಾದ್ಯಂತ ದೊಡ್ಡ ಕೆರೆಗಳಿಗೆ ಸ್ಲೂಯೀಸ್ ಗೇಟ್ ಗಳನ್ನು ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕೆಲವು ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿ ಕಾಂಪೌಂಡ್, ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ರಸ್ತೆಯ ಮೇಲೆ ನೀರು ನಿಲ್ಲುವ ಪರಿಸ್ಥಿತಿ ಬಂದಿದೆ. ಅವುಗಳನ್ನು ತೆರವು ಮಾಡಲು ಆದೇಶ ನೀಡಿದ್ದೇನೆ. ಇನ್ನೂ ನಾಲ್ಕು ದಿನ ಮಳೆಯಿರುವುದರಿಂದ ಕಾರ್ಯಾಚರಣೆ ತೀವ್ರವಾಗಿ ಆಗಬೇಕು ಎಂದು ಸೂಚಿಸಲಾಗಿದೆ.

17 ಜಿಲ್ಲೆಗಳಲ್ಲಿ ಮಳೆ ಎಫೆಕ್ಟ್

17 ಜಿಲ್ಲೆಗಳಲ್ಲಿ ಮಳೆ ಎಫೆಕ್ಟ್

ರಾಜ್ಯದ 17 ಜಿಲ್ಲೆಗಳ ಮಾಹಿತಿ ಪಡೆದಿದ್ದು, ಕಳೆದ 5 ದಿನಗಳಲ್ಲಿ 5092 ಜನ ಕಾಳಜಿ ಕೇಂದ್ರಗಳಲ್ಲಿ ಇದ್ದಾರೆ. 14717 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಹಾಗೂ 1374 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ಹಾನಿಯಾಗಿದೆ.

5 ದಿನಗಳ ಮಳೆಗೆ 430 ಮನೆಗಳು ತೀವ್ರವಾಗಿ ಹಾನಿಯಾಗಿವೆ ಹಾಗೂ 2188 ಮನೆಗಳು ಭಾಗಶ: ಹಾನಿಯಾಗಿವೆ. 255 ಕಿಮೀ ರಸ್ತೆಗಳು, ಸೇತುವೆಗಳು ಹಾಗೂ ಕಲ್ವರ್ಟ್ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದರು.

ಮನೆಗಳ ಹಾನಿಯಾಗಿರುವುದನ್ನು ಕೂಡಲೇ ಸಮೀಕ್ಷೆ ಮಾಡಿ, ಮನೆಗಳಿಗೆ ನೀರು ನುಗ್ಗಿದ್ದರೆ 10 ಸಾವಿರ ರೂ.ತೀವ್ರವಾಗಿ ಹಾನಿಯಾಗಿದೆ ಕೂಡಲೇ 95 ಸಾವಿರ ರೂ. ಹಾಗೂ ಕಡಿಮೆ ಹಾನಿಯಾಗಿದ್ದಾರೆ 50 ಸಾವಿರ ರೂ.ಗಳನ್ನು ನೀಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ 664 ಕೋಟಿ ರೂ.ಗಳು ಲಭ್ಯವಿದೆ ಎಂದರು.

ಪೂರ್ತಿ ಬಿದ್ದುಹೋದ ಮನೆಗಳಿಗೆ 5 ಲಕ್ಷ

ಪೂರ್ತಿ ಬಿದ್ದುಹೋದ ಮನೆಗಳಿಗೆ 5 ಲಕ್ಷ

ಕೃಷಿ ಬೆಳೆ ಹಾನಿಯಾಗಿರುವುದಕ್ಕೆ ಮಳೆ ನಿಂತ ಕೂಡಲೇ ಜಂಟಿ ಸಮೀಕ್ಷೆ ಕೂಡಲೇ ಪ್ರಾರಂಭಿಸಲು ಪರಿಹಾರ ಆಪ್ ನಲ್ಲಿ ಅಪ್ ಲೋಡ್ ಮಾಡುವಂತೆ ತಿಳಿಸಿದೆ. ಈಗಾಗಲೆ ಘೋಷಿಸಿದಂತೆ ಪೂರ್ತಿ ಬಿದ್ದುಹೋದ ಮನೆಗಳಿಗೆ 5 ಲಕ್ಷ, ತೀವ್ರವಾಗಿ ಹಾನಿಯಾದರೆ 3 ಲಕ್ಷ ಹಾಗೂ ಅಲ್ಪ ಹಾನಿಯಾಗಿದ್ದರೆ 50 ಸಾವಿರ ರೂ. ನೀಡಲು ಸೂಚಿಸಿದೆ. ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಹೆಚ್ಚಿನ ಮೊತ್ತವಿದೆ. ಕೃಷಿ ಬೆಳೆ ಪರಿಹಾರವನ್ನು ಕೂಡ ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಹೆಚ್ಚಿದೆ. ಒಣಬೇಸಾಯಕ್ಕೆ 13600 ಸಾವಿರ, ನೀರಾವರಿ ಜಮೀನುಗಳಿಗೆ 25 ಸಾವಿರ ರೂ., ಹಾಗೂ ತೋಟಗಾರಿಕೆ ಗೆ 28 ಸಾವಿರ ರೂ.ಗಳು ನೀಡಲು ಸೂಚಿಸಿದೆ. ಅದರ ಪ್ರಕಾರ ಪರಿಹಾರ ಒದಗಿಸಲಾಗುವುದು ಎಂದರು.
ಮೂಲಸೌಕರ್ಯ ಹಾನಿಯನ್ನು ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಿದ್ದೇವೆ. ಶಾಶ್ವತವಾಗಿ ದುರಸ್ತಿ ಮಾಡಲು ಅಂದಾಜು ಪಟ್ಟಿ ಸಿದ್ಧ ಪಡಿಸಲು ಸೂಚಿಸಲಾಗಿದೆ. ಲೋಕೋಪಯೋಗಿ ಹಾಗೂ ಆರ್.ಡಿ.ಪಿ.ಆರ್ ಇಲಾಖೆಗೆ 500 ಕೋಟಿ ರೂ.ಗಳನ್ನು ರಸ್ತೆಗಳಿಗೆ ಬಿಡುಗಡೆ ಮಾಡಿದ್ದು, ಅಂದಾಜು ಪಟ್ಟಿ ಬಂದ ಕೂಡಲೇ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಸಂತ್ರಸ್ತರಿಗೆ ಪಡಿತರ ವಿತರಣೆ

ಸಂತ್ರಸ್ತರಿಗೆ ಪಡಿತರ ವಿತರಣೆ

ತೀವ್ರ ಮಳೆಯಿಂದ ಸ್ವಂತ ಮನೆಗಳನ್ನು ತೊರೆದು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿರುವ ಸಂತ್ರಸ್ತರಿಗೂ ಸಹ ಪಡಿತರ ವಿತರಿಸಲು ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಂಗಡಿಗಳಿಗೆ, ವಾಣಿಜ್ಯ ಕೇಂದ್ರಗಳಿಗೆ ಹಾನಿಯಾಗಿದ್ದರೆ ಎನ್.ಡಿ.ಆರ್.ಎಫ್ ನಡಿ ಪರಿಹಾರ ನೀಡಲು ಅವಕಾಶ ಇಲ್ಲ. ಆದರೆ ಕಾರವಾರ, ರಾಮನಗರಕ್ಕೆ ಹೋದಾಗ ಅಂಗಡಿಗಳಿಗೆ ಪರಿಹಾರ ನೀಡಬೇಕೆನ್ನುವ ತೀರ್ಮಾನ ಮಾಡಿದ್ದು, ರಾಜ್ಯ ಸರ್ಕಾರ ವೇ ಹಣ ಭರಿಸಲಿದೆ. ಹಾನಿಯ ಆಧಾರದ ಮೇಲೆ ಪರಿಹಾರ ನೀಡಲಾಗುವುದು. ಪ್ರಥಮ ಬಾರಿಗೆ ಪ್ರವಾಹಕ್ಕೆ ರಾಜ್ಯದ ವಾಣಿಜ್ಯ ಕೇಂದ್ರಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.

English summary
Monsoon has continued in the state and the flood situation has been caused due to unexpected rains. In this context, a team from the Center will arrive in the Karnataka state for a study on relief distribution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X