ಕಳಸಾ ಬಂಡೂರಿ DPRಗೆ ಕೇಂದ್ರ ಜಲ ಆಯೋಗ ಅನುಮತಿ: ಚುನಾವಣಾ ಗಿಮಿಕ್ ಎಂದ ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 29: ಕಳಸಾ ಬಂಡೂರಿ DPRಗೆ ಕೇಂದ್ರ ಜಲ ಆಯೋಗ ಅನುಮತಿಸಿದ್ದು ಬಿಜೆಪಿಯ ಚುನಾವಣಾ ಗಿಮಿಕ್ ಅಷ್ಟೇ ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ, ' ಕಳಸಾ ಬಂಡೂರಿ DPRಗೆ ಕೇಂದ್ರ ಜಲ ಆಯೋಗ ಅನುಮತಿಸಿದ್ದು ಬಿಜೆಪಿಯ ಚುನಾವಣಾ ಗಿಮಿಕ್ ಅಷ್ಟೇ. ನೀರಾವರಿ ಯೋಜನೆಗಳ ಅನುಷ್ಠಾನ ವಿಳಂಬದ ಕುರಿತು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ವ್ಯಕ್ತವಾದ ಜನಬೆಂಬಲಕ್ಕೆ ಹೆದರಿದ ಬಿಜೆಪಿ ಸರ್ಕಾರ ತುರಾತುರಿಯಲ್ಲಿ DPR ಅನುಮತಿ ತಂದಿದೆ. ಈ ಮೂಲಕ ಕಾಂಗ್ರೆಸ್ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ' ಎಂದು ತಿಳಿಸಿದೆ.

'ನಮ್ಮ ಮೇಕೆದಾಟು ಪಾದಯಾತ್ರೆಗೆ ಹೆದರಿದ ಬಿಜೆಪಿ ಸರ್ಕಾರ ಪರಿಸರ ಇಲಾಖೆಯ ಅನುಮತಿ ತರಲಾಗದಿದ್ದರೂ ನೆಪ ಮಾತ್ರಕ್ಕೆ ಬಿಜೆಟ್‌ನಲ್ಲಿ ₹1000 ಕೋಟಿ ಘೋಷಿಸಿ ಮೂಗಿನ ಮೇಲೆ ತುಪ್ಪ ಸವರಿತ್ತು. ಈಗ ನಮ್ಮ ಪ್ರತಿಭಟನೆಗೆ ಹೆದರಿ ಕಳಸ ಬಂಡೂರಿ DPRಗೆ ಅನುಮತಿಸಿದೆ. ಮೇಕೆದಾಟು ವಿಚಾರದಲ್ಲಿ ಆಡಿದ ನಾಟಕವನ್ನೇ ಮಹದಾಯಿ ವಿಷಯದಲ್ಲೂ ಆಡುತ್ತಿದೆ' ಎಂದು ಹೇಳಿದೆ.
ನಮ್ಮ ಮೇಕೆದಾಟು ಪಾದಯಾತ್ರೆಗೆ ಹೆದರಿದ @BJP4Karnataka ಸರ್ಕಾರ ಪರಿಸರ ಇಲಾಖೆಯ ಅನುಮತಿ ತರಲಾಗದಿದ್ದರೂ ನೆಪ ಮಾತ್ರಕ್ಕೆ ಬಿಜೆಟ್‌ನಲ್ಲಿ ₹1000 ಕೋಟಿ ಘೋಷಿಸಿ ಮೂಗಿನ ಮೇಲೆ ತುಪ್ಪ ಸವರಿತ್ತು.
— Karnataka Congress (@INCKarnataka) December 29, 2022
ಈಗ ನಮ್ಮ ಪ್ರತಿಭಟನೆಗೆ ಹೆದರಿ ಕಳಸ ಬಂಡೂರಿ DPRಗೆ ಅನುಮತಿಸಿದೆ.
ಮೇಕೆದಾಟು ವಿಚಾರದಲ್ಲಿ ಆಡಿದ ನಾಟಕವನ್ನೇ ಮಹದಾಯಿ ವಿಷಯದಲ್ಲೂ ಆಡುತ್ತಿದೆ. pic.twitter.com/xYL1ykQzrx
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್
ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, 'ಕಳಸಾ ಭಂಡೂರಿ ಯೋಜನೆಯ ಅನುಮೋದನೆಗಾಗಿ ರಚನಾತ್ಮಕ ಯೋಜನಾ ವರದಿಯನ್ನು ನಿರೂಪಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ, ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಾಗೂ ರಾಜ್ಯದ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರಿಗೂ ಅನಂತ ಧನ್ಯವಾದಗಳು' ಎಂದು ತಿಳಿಸಿದ್ದಾರೆ. ಕೇಂದ್ರ ಜಲ ಆಯೋಗದ ಹಸ್ತಪ್ರತಿಯನ್ನೂ ಜೋಶಿ ಟ್ವೀಟ್ ಮಾಡಿದ್ದಾರೆ.
ಕೇಂದ್ರಕ್ಕೆ ಧನ್ಯವಾದ ಹೇಳಿದ ಜಲಸಂಪನ್ಮೂಲ ಸಚಿವ
ಕಳಸಾ ಬಂಡೂರಿ DPRಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.
'ಕರ್ನಾಟಕಕ್ಕೆ ಅತ್ಯಂತ ಅವಶ್ಯವಾಗಿರುವ ಕಳಸಾ ಬಂಡೂರಿ ಯೋಜನೆಗಾಗಿ ಶ್ರಮಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಮತ್ತು ರಾಜ್ಯದ ಎಲ್ಲ ಸಚಿವರಿಗೆ, ಸಂಸದರಿಗೆ, ನಾಯಕರಿಗೆ, ಶಾಸಕರಿಗೆ ಅನಂತ ಧನ್ಯವಾದಗಳು' ಎಂದು ಹೇಳಿದ್ದಾರೆ.












Click it and Unblock the Notifications