ಕಾಂಗ್ರೆಸ್ ಎಂದರೆ ಸಿಡಿ ತಯಾರು ಮಾಡುವ ಗ್ಯಾಂಗ್; ಎಂಪಿಆರ್‌

ಬೆಂಗಳೂರು, ಮಾರ್ಚ್ 24: " ಕಾಂಗ್ರೆಸ್ ಎಂದರೆ ಸಿಡಿ ತಯಾರು ಮಾಡುವ ಗ್ಯಾಂಗ್. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದರು.

Recommended Video

      'ಕಾಂಗ್ರೆಸ್‌ನವರು ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡೋದು ಬಿಟ್ಟು ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ' | Oneindia Kannada

      ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಇಟ್ಟುಕೊಂಡು ಸದನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

      "ಯಾವ ಪುರುಷಾರ್ಥಕ್ಕೆ ಅಹೋರಾತ್ರಿ ಧರಣಿ ಮಾಡುತ್ತೀರಿ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು. ಮೇಟಿ ಅವರ ಹಗರಣ ಆಗ ಇರಲಿಲ್ಲವೇ?" ಎಂದು ಪ್ರಶ್ನಿಸಿದರು.

       CD Case Congress Protest Assembly Session MP Renukacharya Upset

      "ನಾವು ಹೆಣ್ಣು ಮಕ್ಕಳನ್ನು ಗೌರವಿಸುತ್ತೇವೆ. ಆ ಯುವತಿ ಬಂದು ದೂರು ಕೊಡದೇ ಓಡಾಡುತ್ತಿದ್ದಾರೆ. ಯುವತಿ ಇನ್ನೂ ಬಂದು ದೂರು ಕೊಟ್ಟಿಲ್ಲ" ಎಂದು ರೇಣುಕಾಚಾರ್ಯ ಹೇಳಿದರು.

      ಮಂಗಳವಾರದ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ ಕಾರಣ ಒಂದು ದಿನದ ಕಲಾಪ ವ್ಯರ್ಥವಾಯಿತು. ಕೈಯಲ್ಲಿ ಸಿಡಿ ಹಿಡಿದು, ಸಿಡಿ ಸರ್ಕಾರ, ಸಿಡಿ ಸಿಡಿ ಎಂದು ಘೋಷಣೆಗಳನ್ನು ಕೂಗುತ್ತಾ ಸದಸನದ ಬಾವಿಗೆ ಬಂದು ಸದಸ್ಯರು ಪ್ರತಿಭಟನೆ ಮಾಡಿದರು.

      ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರರಕರಣ ದಾಖಲು ಮಾಡಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು. ಕೋರ್ಟ್ ಮೊರೆ ಹೋಗಿರುವ 6 ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆ ಮಾಡುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+