ಗಾಂಜಾ ಸಾಂಗ್ ಹಾಡಿದ್ದ ಚಂದನ್‌ ಶೆಟ್ಟಿಗೆ ಪೊಲೀಸರ ಸಮನ್ಸ್‌

ಬೆಂಗಳೂರು, ಆಗಸ್ಟ್ 27: ಕನ್ನಡ rapper ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಗಾಂಜಾ ಪರವಾಗಿ ಹಾಡು ಬರೆದಿರುವ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಹಿಂದೆ ಅಂತ್ಯ ಸಿನಿಮಾಗಾಗಿ ಚಂದನ್ ಶೆಟ್ಟಿ ಮಾಡಿದ್ದ ಹಾಡೊಂದು ಇದೀಗ ಬೆಂಗಳೂರು ಪೊಲೀಸರ ಕಣ್ಣು ಕೆಂಪಗಾಗಿಸಿದೆ. ಆ ಹಾಡಿನಲ್ಲಿ ಗಾಂಜಾ, ಮತ್ತು ಇತರ ಮಾದಕ ದ್ರವ್ಯಗಳ ಪರವಾದ ಸಾಹಿತ್ಯ ಇರುವುದು ಪೊಲೀಸರ ಸಿಟ್ಟಿಗೆ ಕಾರಣವಾಗಿದೆ.

CCB police warns Chandan Shetty for writing marijuana song

ಮಾದಕ ದ್ರವ್ಯ ತಡೆ ವಿಭಾಗದ ಸಿಸಿಬಿ ಪೊಲೀಸ್ ಅಸಿಸ್ಟಂಟ್ ಕಮಿಷನರ್ ಬಿ.ಎಸ್.ಮೋಹನ್ ಕುಮಾರ್ ಅವರು ಚಂದನ್ ಶೆಟ್ಟಿ ಅವರಿಗೆ ನೊಟೀಸ್ ಕಳುಹಿಸಿದ್ದು, ಖುದ್ದು ಬಂದು ವಿಚಾರಣೆ ಎದುರಿಸುವಂತೆ ಸೂಚಿಸಿದ್ದರು.

ಅಂತ್ಯ ಚಿತ್ರದ ಹಾಡು ಅದು

ಅಂತ್ಯ ಚಿತ್ರದ ಹಾಡು ಅದು

2015ರಲ್ಲಿ ಬಿಡುಗಡೆ ಆಗಿದ್ದ ಅಂತ್ಯ ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ ಪ್ರೋತ್ಸಾಹ ನೀಡುವಂತಹಾ ಸಾಹಿತ್ಯ ಇದೆ ಹಾಗಾಗಿ ನಾವೇಕೆ ನಿಮ್ಮ ಮೇಲೆ ಪ್ರಕರಣ ದಾಖಲಿಸಬಾರದು ಎಂದು ಪೊಲೀಸ್ ಅಧಿಕಾರಿ ನೊಟೀಸ್‌ನಲ್ಲಿ ಪ್ರಶ್ನಿಸಿದ್ದರು.

ಮಾದಕ ವ್ಯಸನದ ಪರವಾದ ಸಾಹಿತ್ಯ

ಮಾದಕ ವ್ಯಸನದ ಪರವಾದ ಸಾಹಿತ್ಯ

ಧಮ್ಮು ಬಿಡಬೇಡ, ಅದೇ ನಮಗೆ 'ಬಿಯರ್ ಎತ್ತೋದು ಹಳತಾಗಿದೆ, ಗಾಂಜಾ ಎಳೆಯೊದು ಹೊಸದಾಗಿದೆ', 'ಭಂಗಿ ಎಳಕೊಂಡು ನಗುತಾ ಇರು', 'ಶಿವನು ಹಿಡಿದರೆ ಭಂಗಿಯಂತೆ, ನಾವು ಹಿಡಿದರೆ ಕಂಬಿ ಅಂತೆ', 'ಬಿಡಬೇಡ ಧಮ್ಮು, ನಮ್ಮಯ ಪಾಲಿಗೆ ಇದೇ ವಿಸ್ಕಿ, ರಮ್ಮು' ಎಂಬ ಸಾಲುಗಳು ಹಾಡಿನಲ್ಲಿದೆ.

ಸಿಸಿಬಿಯ ಮಾದಕ ವಸ್ತು ತಡೆ ವಿಭಾಗ

ಸಿಸಿಬಿಯ ಮಾದಕ ವಸ್ತು ತಡೆ ವಿಭಾಗ

ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಅಬ್ಬರ ಹೆಚ್ಚಾಗಿರುವ ಕಾರಣ ಸರ್ಕಾರದ ಅಣತಿಯಂತೆ ಸಿಸಿಬಿ ತಂಡವು ಮಾದಕ ವಸ್ತುಗಳ ವಿರುದ್ಧ ವಿಭಾಗವೊಂದನ್ನು ತೆರೆದು ಕಾರ್ಯಚಾರಣೆ ನಡೆಸುತ್ತಿದೆ. ಈಗ ಸಿಸಿಬಿಯ ಇದೇ ವಿಭಾಗವು ಚಂದನ್ ಶೆಟ್ಟಿಗೆ ಸಮನ್ಸ್‌ ನೀಡಿದೆ.

ಚಂದನ್ ಶೆಟ್ಟಿ ವಿರುದ್ಧ ಪ್ರಕರಣ ಸಾಧ್ಯತೆ

ಚಂದನ್ ಶೆಟ್ಟಿ ವಿರುದ್ಧ ಪ್ರಕರಣ ಸಾಧ್ಯತೆ

ವಿಚಾರಣೆ ಎದುರಿಸುವಂತೆ ಚಂದನ್ ಶೆಟ್ಟಿಗೆ ಸದ್ಯ ಪೊಲೀಸರು ಹೇಳಿದ್ದಾರೆ. ಅಕಸ್ಮಾತ್ ವಿಚಾರಣೆ ಎದುರಿಸದಿದ್ದರೆ ಚಂದನ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಮಾದಕ ವಸ್ತುಗಳ ಪರವಾಗಿ ಸಾಹಿತ್ಯ ರಚನೆ ಮುಂದುವರೆದರೆ ಕೂಡಾ ಚಂದನ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+