Cauvery Water Row: 9 ಸಾವಿರ ಕ್ಯೂಸೆಕ್ ಬೇಡ, 2 ಸಾವಿರ ಕ್ಯೂಸೆಕ್ ಸಾಕು; ತಮಿಳುನಾಡಿಗೆ ನೀರು ಕಡಿತಕ್ಕೆ ಕರ್ನಾಟಕ ಆಗ್ರಹ

Cauvery water row: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ-ತಮಿಳುನಾಡು ನಡುವಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ತಮಿಳುನಾಡಿನ ಬಿಳಿಗುಂಡ್ಲು ಗಡಿ ಭಾಗಕ್ಕೆ ಪ್ರತಿದಿನ 9,000 ಕ್ಯೂಸೆಕ್‌ ನೀರು ಹರಿಸುವಂತೆ ನೀಡಿರುವ ಆದೇಶವನ್ನು 2,000 ಕ್ಯೂಸೆಕ್‌ಗೆ ಇಳಿಸುವಂತೆ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮನವಿ ಮಾಡಿದೆ.

ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕುಸಿದಿರುವುದರಿಂದ ನೀರು ಬಿಡುಗಡೆ ಪ್ರಮಾಣ ಕಡಿತ ಅಗತ್ಯ ಎಂದು ಕರ್ನಾಟಕ ವಾದಿಸಿದೆ. ಆಗಸ್ಟ್‌ 25ರಂದು CWMA, ಆಗಸ್ಟ್‌ 24ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕೈಗೊಂಡ ನಿರ್ಧಾರವನ್ನು ಅನುಮೋದಿಸಿ, ಆಗಸ್ಟ್‌ 25ರಿಂದ ಸೆಪ್ಟೆಂಬರ್‌ 8ರವರೆಗೆ ಪ್ರತಿದಿನ 9,000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಇದೀಗ ಈ ಆದೇಶವನ್ನು ಪರಿಷ್ಕರಿಸಿ 2,000 ಕ್ಯೂಸೆಕ್‌ಗೆ ಇಳಿಸುವಂತೆ ರಾಜ್ಯ ಮನವಿ ಸಲ್ಲಿಸಿದೆ. ಸೆಪ್ಟೆಂಬರ್‌ 8ರಂದು CWRC ಸಭೆ ನಡೆಯಲಿದ್ದು, ಬಳಿಕ ಮಳೆ ಹಾಗೂ ಬೆಳೆ ಪರಿಸ್ಥಿತಿಯನ್ನು ಆಧರಿಸಿ CWMA ಪರಿಶೀಲನೆ ನಡೆಸಲಿದೆ.

Cauvery water row intensifies as Karnataka seeks sharp reduction in daily water release to Tamil Nadu

ನಾಲ್ಕು ಜಲಾಶಯಗಳಲ್ಲಿ 66.629 ಟಿಎಂಸಿ ನೀರು

ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಸಲ್ಲಿಸಿರುವ ಮನವಿಯಲ್ಲಿ, ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಒಟ್ಟು 66.629 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ ಎಂದು ತಿಳಿಸಲಾಗಿದೆ. ಮುಂದಿನ ಅವಧಿಯಲ್ಲಿ ಜಲಾಶಯಗಳಿಗೆ ಒಳಹರಿವು 20 ಟಿಎಂಸಿಗಿಂತ ಹೆಚ್ಚಾಗುವ ಸಾಧ್ಯತೆ ಕಡಿಮೆ ಇದ್ದು, ರಾಜ್ಯದಲ್ಲಿ ನೀರಿನ ಕೊರತೆ ಎದುರಾಗುವ ಆತಂಕವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್‌ನಲ್ಲೇ ಕರ್ನಾಟಕ ನೀರಾವರಿಗಾಗಿ ನೀರು ಬಿಡುಗಡೆ ಆರಂಭಿಸಿದೆ. ಸೆಪ್ಟೆಂಬರ್‌ 4ರವರೆಗೆ ನಾಲ್ಕು ಜಲಾಶಯಗಳಿಂದ ಸುಮಾರು 15.124 ಟಿಎಂಸಿ ನೀರನ್ನು ಕಾವೇರಿ ಜಲಾನಯನ ಪ್ರದೇಶದ ಕಡಿಮೆ ಪ್ರಮಾಣದ ಕೃಷಿ ಪ್ರದೇಶಗಳಿಗೆ ನೀರಾವರಿ ಒದಗಿಸಲು ಹರಿಸಲಾಗಿದೆ. ನಿಂತಿರುವ ಬೆಳೆಗಳನ್ನು ರಕ್ಷಿಸಲು ಕಾಲುವೆಗಳಿಗೆ ನೀರು ಹರಿಸುವುದು ಮುಂದುವರಿಸುವುದು ಅಗತ್ಯ ಎಂದು ಕರ್ನಾಟಕ ಹೇಳಿದೆ.

ಕುಡಿಯುವ ನೀರು, ನೀರಾವರಿಗೆ 154 ಟಿಎಂಸಿ

ರಾಜ್ಯದ ಉಳಿದ ನೀರಾವರಿ ಅಗತ್ಯ, ಬೆಂಗಳೂರು ಸೇರಿದಂತೆ ಕುಡಿಯುವ ನೀರಿನ ಅವಶ್ಯಕತೆ ಹಾಗೂ ಪರಿಸರ ಹರಿವು ಸೇರಿದಂತೆ ಒಟ್ಟು ಸುಮಾರು 154 ಟಿಎಂಸಿ ನೀರಿನ ಅಗತ್ಯವಿದೆ ಎಂದು ಕರ್ನಾಟಕ ತಿಳಿಸಿದೆ. ಹೀಗಾಗಿ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದರೆ ರಾಜ್ಯದ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗಲಿದೆ ಎಂದು ವಾದಿಸಿದೆ.

ಇದೇ ವೇಳೆ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸುಮಾರು 55 ಟಿಎಂಸಿ ನೀರು ಸಂಗ್ರಹವಿದೆ ಎಂದು ಕರ್ನಾಟಕ ತನ್ನ ಮನವಿಯಲ್ಲಿ ತಿಳಿಸಿದೆ. ಮಧ್ಯಂತರ ಜಲಾನಯನ ಪ್ರದೇಶಗಳಿಂದ 45 ಟಿಎಂಸಿ ಅಥವಾ ಅದಕ್ಕಿಂತ ಹೆಚ್ಚಿನ ನೀರು ಬರಬಹುದಾಗಿದ್ದು, ತಮಿಳುನಾಡಿನ ಇತರ ಜಲಾಶಯಗಳಲ್ಲಿ ಸುಮಾರು 6 ಟಿಎಂಸಿ ನೀರು ಇರುವುದಾಗಿ ಹೇಳಿದೆ. ಒಟ್ಟಾರೆ ತಮಿಳುನಾಡಿಗೆ ಸುಮಾರು 100 ಟಿಎಂಸಿ ನೀರಿನ ಲಭ್ಯತೆ ಇದೆ ಎಂದು ಕರ್ನಾಟಕ ಲೆಕ್ಕ ನೀಡಿದೆ.

ಕರ್ನಾಟಕದ ವಾದವೇನು?

ಕಡಿಮೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿರುವ ಸಾಂಬಾ ಬೆಳೆಗೆ ಮೆಟ್ಟೂರು ಜಲಾಶಯದಿಂದ ತಮಿಳುನಾಡಿನ ಅಗತ್ಯ ಸುಮಾರು 95 ಟಿಎಂಸಿಗಿಂತ ಹೆಚ್ಚಾಗುವುದಿಲ್ಲ . ಹೀಗಾಗಿ ಕರ್ನಾಟಕದಿಂದ ಮತ್ತಷ್ಟು ನೀರು ಪಡೆಯದೇ ತಮಿಳುನಾಡು ತನ್ನ ಅಗತ್ಯವನ್ನು ನಿರ್ವಹಿಸಬಹುದು ಎಂದು ರಾಜ್ಯ ಸರ್ಕಾರ ವಾದಿಸಿದೆ.

ಜುಲೈ ಮತ್ತು ಆಗಸ್ಟ್‌ನಲ್ಲಿ CWRC ಹಾಗೂ CWMA ತ್ವರಿತವಾಗಿ ಕೈಗೊಂಡ ನಿರ್ಧಾರಗಳಿಗೂ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ನೈರುತ್ಯ ಮುಂಗಾರು ಪೂರ್ಣಗೊಳ್ಳುವವರೆಗೆ ಕಾಯದೆ ಸಂಕಷ್ಟದ ಪರಿಸ್ಥಿತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡದೆ ಕೈಗೊಂಡಿರುವ ತಾತ್ಕಾಲಿಕ ನಿರ್ಧಾರಗಳು ಏಕಪಕ್ಷೀಯವಾಗಿದ್ದು, ಕರ್ನಾಟಕದ ನ್ಯಾಯಸಮ್ಮತ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ ಎಂದು ರಾಜ್ಯ ತನ್ನ ಮನವಿಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+