ಫಾಲಿ ನಾರಿಮನ್ ಬದಲಿಗೆ ಕಪಿಲ್ ಸಿಬಾಲ್ ರಿಂದ ವಾದ!

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 03: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ಪರ ವಾದ ಮಂಡಿಸಲು ಹಿರಿಯ ವಕೀಲ ಫಾಲಿ ನಾರಿಮನ್ ಅವರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲ ಕಮ್ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ರನ್ನು ಕಣಕ್ಕಿಳಿಸಲು ಕರ್ನಾಟಕ ಸರ್ಕಾರ ಚಿಂತಿಸಿರುವ ಸುದ್ದಿ ಬಂದಿದೆ.

ಕಳೆದ ವಾರ ನಡೆದ ಸುರ್ಪೀಂಕೋರ್ಟಿನಲ್ಲಿ ವಾದ ಮಂಡನೆ ನಂತರ ಮುಖ್ಯಮಂತ್ರಿಗಳ ಜತೆ ನಡೆದ ಪತ್ರ ವ್ಯವಹಾರವನ್ನು ಮುಂದಿಟ್ಟುಕೊಂಡು, ಫಾಲಿ ಎಸ್ ನಾರಿಮನ್ ಅವರು ವಾದ ಮಂಡನೆ ಮಾಡುವುದಿಲ್ಲ ಎಂದು ಹೇಳಿದ ಘಟನೆ ನಡೆದಿತ್ತು. [ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

Cauvery- With Nariman refraining from arguing for Karnataka, Sibal likely to step in

ಸುಪ್ರೀಂಕೋರ್ಟಿನ ಆದೇಶ ಪಾಲನೆ ಮಾಡಲು ಕರ್ನಾಟಕ ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿತ್ತು. ಆದರೆ, ನಂತರ ಕರ್ನಾಟಕ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿ, ನಾರಿಮನ್ ಅವರು ವಾದ ಮುಂದುವರೆಸಲಿದ್ದಾರೆ ಎಂದಿದ್ದರು.[ಕಾವೇರಿ ಕೇಸ್ : ನಾರಿಮನ್ ಆಯ್ಕೆ ಮಾಡಿದ್ದು ಯಾರು?]

ಸಿಬಲ್ ಎಂಟ್ರಿ: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದು, ಸುಪ್ರೀಂಕೋರ್ಟಿನಲ್ಲಿ ಕರ್ನಾಟಕ ಸರ್ಕಾರ ಈವರೆಗೆ ತೆಗೆದುಕೊಂಡ ನಿರ್ಣಯಗಳನ್ನು ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.['ನಾರಿಮನ್- ಕರ್ನಾಟಕ ಪರ ವಾದ ಮಾಡಲ್ಲ ಎಂದು ಹೇಳಿಲ್ಲ!']

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With senior counsel, Fali S Nariman refusing to argue the Cauvery waters matter for Karnataka, the government is in talks with Kapil Sibal. Nariman had told the Supreme Court last week that he would not argue the case for Karnataka as it was not following the orders of the court.
Please Wait while comments are loading...