Caste-Wise Analysis: ಲಿಂಗಾಯತ, ಒಕ್ಕಲಿಗರಿಗೆ ಹೆಚ್ಚು ಮಹತ್ವ ನೀಡಿದ ರಾಜಕೀಯ ಪಕ್ಷಗಳು- ಅಂಕಿಅಂಶ, ಮಾಹಿತಿ, ವಿವರ

ಬೆಂಗಳೂರು, ಏಪ್ರಿಲ್‌ 21: ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಜಾತಿ ಸಮೀಕರಣವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಎಚ್ಚರಿಕೆಯಿಂದ ಅಂತಿಮಗೊಳಿಸಿವೆ. ಹಿಂದಿನ ಚುನಾವಣೆಗಳಲ್ಲಿ ತಮಗೆ ಹೆಚ್ಚು ಬೆಂಬಲ ನೀಡಿದ ಜಾತಿಗಳಿಗೆ ಪಕ್ಷಗಳು ಗರಿಷ್ಠ ಪ್ರಾತಿನಿಧ್ಯ ನೀಡಿವೆ.

ಬಿಜೆಪಿ

ಕೇಸರಿ ಪಕ್ಷವು ಲಿಂಗಾಯತರಿಂದ ಗರಿಷ್ಠ ಬೆಂಬಲವನ್ನು ಪಡೆದಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ಗಟ್ಟಿ ನೆಲೆ ಇದೆ. ಆದ್ದರಿಂದ ಪಕ್ಷವು ಸಮುದಾಯದ ಅಭ್ಯರ್ಥಿಗಳಿಗೆ ಗರಿಷ್ಠ ಸಂಖ್ಯೆಯ ಟಿಕೆಟ್‌ಗಳನ್ನು ನೀಡಿದೆ.

Caste Wise Candidates List Analysis for Karnataka Assembly Election 2023

ಲಿಂಗಾಯತರು 68 ಟಿಕೆಟ್‌ಗಳನ್ನು ಪಡೆದಿದ್ದಾರೆ, ನಂತರ ಮತ್ತೊಂದು ಪ್ರಬಲ ಜಾತಿಯ ಒಕ್ಕಲಿಗರು 42 ಟಿಕೆಟ್‌ಗಳನ್ನು ಪಡೆದಿದ್ದಾರೆ. ಒಕ್ಕಲಿಗ ಜನಸಂಖ್ಯೆಯು ಮುಖ್ಯವಾಗಿ ಹಳೆ ಮೈಸೂರು ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದು, ಈ ಪ್ರದೇಶದಲ್ಲಿನ 61 ಕ್ಷೇತ್ರಗಳಲ್ಲಿ ಬಿಜೆಪಿ ಪೈಪೋಟಿ ಎದುರಿಸುತ್ತಿದೆ.

ಒಕ್ಕಲಿಗರು ಸಾಂಪ್ರದಾಯಿಕವಾಗಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಇದೇ ಸಮುದಾಯಕ್ಕೆ ಸೇರಿದ ಡಾ.ಕೆ.ಸುಧಾಕರ್, ಕೆ.ಸಿ.ನಾರಾಯಣಗೌಡ, ಆರ್.ಅಶೋಕ, ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರಂತಹ ನಾಯಕರ ಮೂಲಕ ಬಿಜೆಪಿ ಈ ಕ್ಷೇತ್ರದಲ್ಲಿ ನೆಲೆಕಂಡುಕೊಳ್ಳಲು ಯತ್ನಿಸುತ್ತಿದೆ.

ಆಡಳಿತಾರೂಢ ಬಿಜೆಪಿ ಸರಕಾರ ಚುನಾವಣೆಗೆ ಕೆಲವೇ ತಿಂಗಳಿರುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಹೆಚ್ಚಿಸಿದೆ. ಅದರ ಲಾಭ ಪಡೆಯಲು ಮತ್ತು ಸಮುದಾಯಗಳನ್ನು ಓಲೈಸಲು ಬಿಜೆಪಿ 37 ಎಸ್‌ಸಿ ಮತ್ತು 18 ಎಸ್‌ಟಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.

ಪಕ್ಷವು ಬ್ರಾಹ್ಮಣರಿಗೆ 13, ಈಡಿಗರಿಗೆ 8 ಮತ್ತು ಕುರುಬ ಸಮುದಾಯದ ಅಭ್ಯರ್ಥಿಗಳಿಗೆ 7 ಸ್ಥಾನಗಳನ್ನು ನೀಡಿದೆ.

ಬಿಜೆಪಿಯಿಂದ ಜಾತಿವಾರು ಟಿಕೆಟ್ ಹಂಚಿಕೆಯ ಸಂಪೂರ್ಣ ಪಟ್ಟಿ ಇಲ್ಲಿದೆ

1 ಲಿಂಗಾಯತ 68
2 ಒಕ್ಕಲಿಗ 47
3 ಎಸ್ಸಿ 37
4 ಎಸ್‌ಟಿ 18
5 ಬ್ರಾಹ್ಮಣರು 13
6 ಈಡಿಗ 8
7 ಕುರುಬ 7
8 ರೆಡ್ಡಿ 7
9 ಬಂಟರು 6
10 ಮರಾಠ 3
11 ಗಾಣಿಗ 2
12 ನಾಯ್ಡು 2
13 ರಜಪೂತ 2
14 ಯಾದವ್ 2
15 ಬಲಿಜ 1
16 ಜೈನ 1
17 ಕೊಡವರು 1
18 ಕೋಲಿ-ಕಬ್ಬಲಿಗ 1
19 ಕೊಮಾರಪಂತ್ 1
20 ಮೊಗವೀರ 1
21 ತಿಗಲ 1

ಕಾಂಗ್ರೆಸ್

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ವಿರೋಧ ಪಕ್ಷವಾದ ಕಾಂಗ್ರೆಸ್‌f ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

ಬಿಜೆಪಿಯಂತೆಯೇ, ಕಾಂಗ್ರೆಸ್ ಪಕ್ಷವು ಲಿಂಗಾಯತರಿಗೆ 51 ಸ್ಥಾನಗಳನ್ನು ನೀಡಿದೆ. ನಂತರದ ಎರಡನೇ ಪ್ರಬಲ ಸಮುದಾಯವಾದ ಒಕ್ಕಲಿಗರಿಗೆ 45 ಕ್ಷೇತ್ರಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷವು ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿದೆ.

ಕಾಂಗ್ರೆಸ್ ಪರಿಶಿಷ್ಟ ಜಾತಿಗೆ 36 ಸ್ಥಾನಗಳನ್ನು ನೀಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿರುವ ಕುರುಬ ಸಮುದಾಯಕ್ಕೆ ಪಕ್ಷ 14 ಸ್ಥಾನಗಳನ್ನು ನೀಡಿದೆ.

ಅಲ್ಪಸಂಖ್ಯಾತರನ್ನು ಓಲೈಸಲು ಪಕ್ಷವು ಮುಸ್ಲಿಮರಿಗೆ 15 ಸ್ಥಾನಗಳನ್ನು ನೀಡಿದೆ. ಕಾಂಗ್ರೆಸ್ ಬ್ರಾಹ್ಮಣರಿಗೆ ಏಳು ಸ್ಥಾನಗಳನ್ನು ನೀಡಿದೆ.

ಕಾಂಗ್ರೆಸ್ ವಿವಿಧ ಜಾತಿಗಳಿಗೆ ಸೀಟು ಹಂಚಿಕೆ ಮಾಡಿದ್ದು ಹೀಗೆ

1 ಲಿಂಗಾಯತ 51
೨ ಒಕ್ಕಲಿಗ ೪೫
3 ಎಸ್ಸಿ 36
4 ಮುಸ್ಲಿಮರು 15
5 ಕುರುಬ 14
6 ವಾಲ್ಮೀಕಿ 16
7 ಮರಾಟ 4
8 ಬಿಲ್ಲ-ಈಡಿಗ 7
9 ಬ್ರಾಹ್ಮಣ 7
10 ಬೆಸ್ತ-ಕೋಳಿ-ಮೊಗವೀರ 6
11 ಬಂಟ್ಸ್ 5
12 ಕ್ರಿಶ್ಚಿಯನ್ 3
13 ಬಲಿಜ-ಬಾಲಾಜಿಗ ನಾಯ್ಡು 2
14 ಗೊಲ್ಲ 2
15 ಜೈನ 1
16 ಕೊಡವ 1
17 ರಜಪೂತ 2
18 ವೈಶ್ಯ 1
19 ಕೊರಾಚ 1
20 ಇತರೆ 4

ಜೆಡಿಎಸ್

ಕರ್ನಾಟಕದ ಪ್ರಾದೇಶಿಕ ಪಕ್ಷ 211 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ವಿವಿಧ ಪಕ್ಷಗಳ 7 ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಿದ್ದು, ಆರು ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸುತ್ತಿಲ್ಲ.

ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಜೆಡಿಎಸ್-ಹಳೇ ಮೈಸೂರು ಭಾಗದ ಭದ್ರಕೋಟೆಯಾಗಿದ್ದು, ಪಕ್ಷವು ಸಮುದಾಯಕ್ಕೆ ಗರಿಷ್ಠ 55 ಸ್ಥಾನಗಳನ್ನು ನೀಡಿದೆ. ಪಕ್ಷವು ರಾಜ್ಯದಲ್ಲಿ ಲಿಂಗಾಯತರಿಗೆ 41 ಸ್ಥಾನಗಳನ್ನು ನೀಡಿದೆ.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ಓಲೈಸಲು ಜೆಡಿಎಸ್ ಕ್ರಮವಾಗಿ 33 ಮತ್ತು 13 ಸ್ಥಾನಗಳನ್ನು ಸಮುದಾಯಗಳಿಗೆ ನೀಡಿದೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮುದಾಯದ ಮುಖವಾಗಿರುವುದರಿಂದ ಜೆಡಿಎಸ್ 23 ಸ್ಥಾನಗಳನ್ನು ಮುಸ್ಲಿಮರಿಗೆ ನೀಡಿದೆ.

ಇತರೆ ಹಿಂದುಳಿದ ವರ್ಗಗಳಿಗೆ ಕುರುಬ, ನೇಕಾರ ಮತ್ತು ಮಡಿವಾಳ ಸೇರಿದಂತೆ ಒಟ್ಟು 31 ಸ್ಥಾನಗಳನ್ನು ನೀಡಲಾಗಿದೆ.

ಜೆಡಿಎಸ್ ಟಿಕೆಟ್ ಹಂಚಿಕೆಯ ಜಾತಿವಾರು ವಿಂಗಡಣೆ ಸಂಪೂರ್ಣ ಪಟ್ಟಿ ಇಲ್ಲಿದೆ

1 ಒಕ್ಕಲಿಗ 55
2 ಲಿಂಗಾಯತ 41
3 ಎಸ್ಸಿ 33
4 ಎಸ್‌ಟಿ 13
5 ಮುಸ್ಲಿಮರು 23
6 ಕುರುಬ 10
7 ನೇಕಾರ 1
8 ಮಡಿವಾಳ 1
9 ಕೋಲಿ 1
10 ಈಡಿಗ 7
11 ಕ್ಷತ್ರಿಯ 1
12 ತಿಗಳ 1
13 ಕುಂಬಾರ 1
14 ಉಪ್ಪಾರ 2
15 ಕೊಂಕಣಿ 1
16 ಬಂಟರು 4
17 ಬಲಿಜ 2
18 ನಾಯ್ಡು 1
19 ಮರಾಟ 5
20 ಇತರೆ 8

ಜಾತಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್
ಲಿಂಗಾಯತ 68 51 41
ಒಕ್ಕಲಿಗ 47 45 55
ಎಸ್ಸಿ 37 36 33
ಎಸ್‌ಟಿ 18 13
ಬ್ರಾಹ್ಮಣರು 13
ಈಡಿಗ 8 7 7
ಕುರುಬ 7 14 10
ರೆಡ್ಡಿ 7
ಬಂಟರು 6 5 4
ಇತರೆ 13 66 49
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+