ಟ್ರಾಫಿಕ್ ನಿಯಮ ಉಲ್ಲಂಘಿಸಿ, ರಾಜ್ಯಾದ್ಯಂತ 'ಕ್ಯಾಶ್ ಲೆಸ್' ದಂಡ ಕಟ್ಟಿ

Subscribe to Oneindia Kannada

ಬೆಂಗಳೂರು, ನವೆಂಬರ್ 17: ಟ್ರಾಫಿಕ್ ನಿಯಮ ಉಲ್ಲಂಘಿಸುವ ಸವಾರರಿಗೆ ಈಗಾಗಲೇ ಬೆಂಗಳೂರಿನಲ್ಲಿ ಕ್ಯಾಶ್ ಲೆಸ್ ದಂಡ ಕಟ್ಟುವ ಆಯ್ಕೆ ಇದೆ. ಇದನ್ನು ರಾಜ್ಯದಾದ್ಯಂತ ವಿಸ್ತರಿಸಲು ಪೊಲೀಸ್ ಇಲಾಖೆಯ ಟ್ರಾಫಿಕ್ ವಿಭಾಗ ನಿರ್ಧರಿಸಿದೆ.

ಕರ್ನಾಟಕದಾದ್ಯಂತ ಎಲ್ಲಾ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇ-ಚಲನ್ ವ್ಯವಸ್ಥೆ ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ. ಈ ವ್ಯವಸ್ಥೆ ಮೂಲಕ ನಿಯಮ ಉಲ್ಲಂಘಿಸುವವರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ದಂಡ ಪಾವತಿಸಬಹುದಾಗಿದೆ.

Cashless fines facility extending across Karnataka for Traffic violators

'ಕೆಲವು ಜಿಲ್ಲೆಗಳಲ್ಲಿ ಎಲೆಕ್ಟ್ರಾನಿಕ್ ಚಲನ್ ಸೌಲಭ್ಯ ಇದೆ. ಆದರೆ ಇ-ಚಲನ್ ಮೂಲಕ ರಾಜ್ಯದಾದ್ಯಂತ ಏಕರೀತಿಯ ವ್ಯವಸ್ಥೆ ಬರಲಿದೆ," ಎಂದು ರಸ್ತೆ ಸುರಕ್ಷತೆ ಮತ್ತು ಸಾರಿಗೆ ವಿಭಾಗದ ಆಯುಕ್ತೆ ಡಿ. ರೂಪ ಹೇಳಿದ್ದಾರೆ. ಇದು ಅವರದ್ದೇ ಆಲೋಚನೆಯ ಯೋಜನೆಯಾಗಿದೆ.

ಇ-ಚಲನ್ ಯೋಜನೆಯಿಂದ ಪಾರದರ್ಶಕತೆ ಹೆಚ್ಚಾಗುವುದರ ಜತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎಂದು ಅವರು ಹೇಳಿದ್ದಾರೆ. ಈ ವ್ಯವಸ್ಥೆಯಲ್ಲಿ ಪೇಟಿಯಂನಂಥ ಪೇಮೆಂಟ್ ಗೇಟ್ ವೇಗಳ ಮೂಲಕವೂ ಹಣಪಾವತಿಗೆ ಅವಕಾಶವಿದೆ.

ಈ ವ್ಯವಸ್ತೆಯಡಿಯಲ್ಲಿ ಕೈಯಲ್ಲಿ ಹಿಡಿಯಬಹುದಾದ ಯಂತ್ರವನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗುತ್ತದೆ. ಇದಕ್ಕೆ ಮೊಬೈಲ್ ಸಂಪರ್ಕ ಇರುತ್ತದೆ. ಈ ಮೊಬೈಲ್ ಮೂಲಕ ಟ್ರಾಫಿಕ್ ನಿಯಮ ಉಲ್ಲಂಘಿಸದವರ ವಿವರಗಳನ್ನು ಭರ್ತಿ ಮಾಡಬಹುದು. ಇದರ ಜತೆಯಲ್ಲೇ ರಶೀದಿಯೂ ಹೊರಬರಲಿದೆ. ಜತೆಗೆ ಗಾಡಿ ಮಾಲಿಕರ ವಿವರಗಳನ್ನೂ ಆರ್.ಟಿ.ಒ ಡಾಟಾ ಬೇಸ್ ನಿಮದ ಪಡೆದುಕೊಳ್ಳಲಿದ್ದು ಎಲ್ಲಾ ಮಾಹಿತಿಗಳು ಸಿಗಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Those who violate the Traffic Rule are have the option to pay a non-cash penalty in Bangalore. Now the department of traffic police has decided to extend it across the state.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ