• search
For Quick Alerts
ALLOW NOTIFICATIONS  
For Daily Alerts

  ನ್ಯಾಯಾಧೀಶರು ಹಿಂದೆ ಸರಿದಿದ್ದು ದೂರುಗಾರ್ತಿಯ ಅವಿಶ್ವಾಸದಿಂದ

  |

  ಬೆಂಗಳೂರು, ಜ 13: ರಾಘವೇಶ್ವರ ಶ್ರೀಗಳ ವಿರುದ್ಧ ಮಾಡಲಾಗಿದ್ದ ಆರೋಪದಿಂದ ಶ್ರೀಗಳನ್ನು ದೋಷಮುಕ್ತಗೊಳಿಸಿದ ಪ್ರಕರಣದ ಮೇಲ್ಮನವಿಯ ವಿಚಾರಣೆಯಿಂದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೆ.ಎನ್ ಫಣೀಂದ್ರ ಅವರು ಶುಕ್ರವಾರದ (ಜ 12) ಕಲಾಪದಲ್ಲಿ ಹಿಂದೆ ಸರಿದಿದ್ದು, ದೂರುಗಾರ್ತಿಯ ಅವಿಶ್ವಾಸವೇ ಕಾರಣ, ಹೊರತು ಮಠದ ಪ್ರಭಾವವಲ್ಲ ಎಂಬುದನ್ನು ರಾಮಚಂದ್ರಾಪುರ ಮಠ ಸ್ಪಷ್ಟನೆ ನೀಡಿದೆ.

  ಶ್ರೀಗಳ ಮೇಲೆ ಮಾಡಲಾಗಿದ್ದ ಮಿಥ್ಯಾರೋಪದ ವಿಚಾರಣೆಯ ಸಂದರ್ಭದಲ್ಲಿ, ದೂರುಗಾರ್ತಿಮಹಿಳೆ ನ್ಯಾ. ಫಣೀಂದ್ರ ಅವರ ವಿರುದ್ಧ ರಾಷ್ಟ್ರಪತಿಗಳು ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಹಲವರಿಗೆ ಪತ್ರ ಬರೆದು ಅವಿಶ್ವಾಸ ವ್ಯಕ್ತಪಡಿಸಿದ್ದರು.

  ಸಹಸ್ರಾರು ಭಕ್ತರಿಂದ ರಕ್ತಲಿಖಿತ ಹಕ್ಕೊತ್ತಾಯ ಸಮರ್ಪಣೆ

  ಈ ಕಾರಣದಿಂದಾಗಿ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯಿಂದ ಈ ಹಿಂದೆಯೂ ಹಿಂದೆ ಸರಿದಿದ್ದು, ಶುಕ್ರವಾರದ ಕಲಾಪದಲ್ಲಿಯೂ ಇದೇ ಕಾರಣ ನೀಡಿ ವಿಚಾರಣೆಯಿಂದ ಹಿಂದೆ ಸರಿದಿರುತ್ತಾರೆ. ಹಾಗಿದ್ದಾಗಿಯೂ, ಶ್ರೀಮಠ ತನ್ನ ಪ್ರಭಾವ ಬಳಸಿ ನ್ಯಾಯಾಧೀಶರನ್ನು ವಿಚಾರಣೆಯಿಂದ ಹಿಂದೆ ಸರಿಸುತ್ತಿದೆ ಎಂದು ಬಿಂಬಿಸಲಾಗುತ್ತಿದ್ದು, ಇಂತಹ ಪ್ರಯತ್ನಗಳನ್ನು ಶ್ರೀಮಠ ಖಂಡಿಸುತ್ತದೆ ಎಂದು ಮಠದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

  Case on Raghaveshwara Seer: Judges withdrawn from the case because of unbelief on complainant

  ಈ ಹಿಂದೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ರಾಮಮೋಹನ ರೆಡ್ಡಿ ಅವರು, ಬೆಳಗಿನ ಕಲಾಪದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದ್ದರು.

  ಅದಾಗಿ ಊಟದ ನಂತರದ ಮಧ್ಯಾಹ್ನದ ಕಲಾಪಕ್ಕೆ ಆಗಮಿಸುತ್ತಿದ್ದಂತೆ ರಾಮಮೋಹನ ರೆಡ್ಡಿಯವರು ಯಾವುದೇ ಕಾರಣ ನೀಡದೇ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಇದನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಶ್ರೀಮಠದ ವಿರುದ್ಧ ಮಾಡಲಾಗುತ್ತಿರುವ ಆಕ್ರಮಣಗಳ ಹಿಂದೆ ಎಂತಹ ಪ್ರಭಾವಶಾಲಿ ಕಾಣದಕೈಗಳಿವೆ ಎಂಬುದನ್ನು ಗಮನಿಸಬಹುದಾಗಿದೆ.

  ಜೊತೆಗೆ, ಪ್ರಭಾವವನ್ನು ಯಾರು ಬಳಸುತ್ತಿದ್ದಾರೆ? ನ್ಯಾಯಾಲಯದಲ್ಲಿ ಸತ್ಯ ಹೊರಬರುವ ಸಂದರ್ಭಗಳಲ್ಲಿ ನ್ಯಾಯಾಧೀಶರನ್ನು ಯಾರು ಹಿಂದೆ ಸರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ರಾಮಚಂದ್ರಾಪುರ ಮಠ ಹೇಳಿದೆ.

  ರಾಮಚಂದ್ರಾಪುರಮಠವು ಶಂಕರಾಚಾರ್ಯರು ತೋರಿದ ಬೆಳಕಿನಪಥದಲ್ಲಿ ಸಾಗುತ್ತಿದ್ದು, ನ್ಯಾಯ ಹಾಗೂ ಧರ್ಮದ ಮಾರ್ಗದಲ್ಲಿ ಅಚಲವಾದ ವಿಶ್ವಾಸವನ್ನು ಹೊಂದಿದೆ. ಯಾವುದೇ ಸಂದರ್ಭದಲ್ಲಿ ವಾಮಮಾರ್ಗವನ್ನು ಬಳಸಬೇಕಾದ ಅನಿವಾರ್ಯತೆಯಾಗಲಿ, ಅಗತ್ಯತೆಯಾಗಲಿ ಶ್ರೀಮಠಕ್ಕೆ ಇಲ್ಲಾ ಎಂಬುದನ್ನು ಮಠ ಸ್ಪಷ್ಟಪಡಿಸಿದೆ.

  ಪ್ರಸ್ತುತ ಪ್ರಕರಣದಲ್ಲಿ ಶ್ರೀಮಠ ಪ್ರಭಾವವನ್ನು ಬಳಸಿ ನ್ಯಾಯಾಧೀಶರನ್ನು ಹಿಂದೆ ಸರಿಸುತ್ತಿದೆ ಎಂದು ಬಿಂಬಿಸುವ ಪ್ರಯತ್ನವನ್ನು ಖಂಡಿಸುತ್ತಾ, ಶ್ರೀಮಠ ಪ್ರಭಾವ ಬಳಸಿದ ದಾಖಲೆಗಳಿದ್ದಲ್ಲಿ ಹಾಜರುಪಡಿಸುವಂತೆ ಈ ಮೂಲಕ ಬಹಿರಂಗ ಸವಾಲನ್ನು ನೀಡುತ್ತಿದ್ದೇವೆ ಎಂದು ಮಠ ತನ್ನ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Case on Raghaveshwara Seer of Ramachandrapura Math: Judges withdrawn from the case because of unbelief on complainant, Ramachandrapura Math press release.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more