ವಿಶ್ವ ಗ್ರಾಹಕರ ದಿನದಂದು ಕನ್ನಡದಲ್ಲಿ ಗ್ರಾಹಕ ಸೇವೆ ಅಭಿಯಾನ
ಬೆಂಗಳೂರು, ಮಾರ್ಚ್ 15: ಕರ್ನಾಟಕದಲ್ಲಿ ಸಿಗುವ ಪ್ರತಿಯೊಂದು ಉತ್ಪನ್ನ ಮತ್ತು ಸೇವೆಗಳ ಮಾಹಿತಿ ಕನ್ನಡದಲ್ಲಿ ಸಿಗಬೇಕು ಎಂದು ವಿಶ್ವ ಗ್ರಾಹಕರ ದಿನದಂದು ಕನ್ನಡ ಗ್ರಾಹಕ ಕೂಟ ಆಯೋಜಿಸಿದ್ದ ಅಭಿಯಾನ ಯಶಸ್ವಿಯಾಗಿದೆ.
ಭಾರತದ ಮಿಕ್ಕ ರಾಜ್ಯಗಳಲ್ಲಿ, ಮುಂದುವರಿದ ದೇಶಗಳಲ್ಲಿ ಅಲ್ಲಿನ ಜನರ ನುಡಿಯಲ್ಲಿ ಎಷ್ಟರ ಮಟ್ಟಿಗೆ ಮಾಹಿತಿಗಳು ಸಿಗುತ್ತಿವೆ? ಅವರ ಜೊತೆಗೆ ಕರ್ನಾಟಕದ ಸ್ಥಿತಿಗತಿಯನ್ನು ಅವಲೋಕಿಸಿದಾಗ ಕನ್ನಡದ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ ಅನ್ನುವುದು ಕಟು ಸತ್ಯವೇ ಸರಿ.

ಕನ್ನಡ ಉಳಿಯಬೇಕು, ಕನ್ನಡಿಗರು ಉಳಿಯಬೇಕೆಂದರೆ ಇದು ಬದಲಾವಣೆಯಾಗಬೇಕಿದೆ. ಇದು ಜನರೇ ಆಗ್ರಹಿಸಿ ತರಬೇಕಾದ ಬದಲಾವಣೆ. ಜನರ ನುಡಿಯಲ್ಲಿ ಸೇವೆ ಸಿಗಬೇಕಾದದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಶಯವಾಗಿದೆ ಎಂದು ಕನ್ನಡ ಗ್ರಾಹಕ ಕೂಟ ತಿಳಿಸಿದೆ.

ಯಾವಾಗ ಅದು ತಾನಾಗಿಯೇ ಕಾರ್ಯರೂಪಕ್ಕೆ ಬರದೇ ಇದ್ದಾಗ ಜನರೇ ಪ್ರಶ್ನಿಸಿ ಬದಲಾವಣೆ ತರಬೇಕಿದೆ. ಮಾರ್ಚ್ 15ರ ವಿಶ್ವ ಗ್ರಾಹಕರ ದಿನದಂದು ಕರ್ನಾಟಕದಲ್ಲಿ ಕನ್ನಡದಲ್ಲಿ ಎಲ್ಲವೂ ಸಿಗಬೇಕೆಂದು ಆಗ್ರಹಿಸೋಣ. ಎಲ್ಲಿ ಕನ್ನಡದಲ್ಲಿ ಮಾಹಿತಿ ಇಲ್ಲವೋ, ಅದರ ಆಧಾರ ಕುರಿತು ಮಾಹಿತಿ ಹಂಚಿಕೊಳ್ಳೋಣವೆಂದು ಟ್ವಿಟ್ಟರ್‌ನಲ್ಲಿ ಗ್ರಾಹಕಸೇವೆಯಲ್ಲಿ_ಕನ್ನಡ ಅಭಿಯಾನವನ್ನು ಕನ್ನಡ ಗ್ರಾಹಕ ಕೂಟ ಆಯೋಜಿಸಿತ್ತು.












Click it and Unblock the Notifications