ಹೊಸ ಕೇಬಲ್ ನಿಯಮಗಳಿಗೆ ವಿರೋಧ, ಜನವರಿ 24ರಂದು ಕೇಬಲ್ ಬಂದ್
ಬೆಂಗಳೂರು, ಜನವರಿ 16: ಟ್ರಾಯ್‌ನ ಹೊಸ ಕೇಬಲ್ ನಿಯಮಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್‌ಗಳು ಜನವರಿ 24ರಂದು ರಾಜ್ಯದಾದ್ಯಂತ ಕೇಬಲ್ ಬಂದ್ ಮಾಡಲಿದ್ದಾರೆ.
ಫೆಬ್ರವರಿ ಒಂದರಿಂದ ಟ್ರಾಯ್ ಹೊಸ ದರಗಳು ಮತ್ತು ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ದರ ಮತ್ತು ನಿಯಮಗಳನ್ನು ವಿರೋಧಿಸಿ ಆಪರೇಟರ್‌ಗಳು ಪ್ರತಿಭಟನೆ ಮಾಡಲಿದ್ದು, ಜನವರಿ 24 ರಂದು ಕೇಬಲ್ ಟಿವಿ ಬಂದ್ ಮಾಡಲಿದ್ದಾರೆ.
ನಗರದ ಖಾಸಗಿ ಹೊಟೆಲ್‌ನಲ್ಲಿ ಇಂದು ಕೇಬಲ್ ಆಪರೇಟರ್‌ಗಳು ಸಭೆ ಸೇರಿದ್ದರು. ಟ್ರಾಯ್ ನ ಹೊಸ ನೀತಿ ಮತ್ತು ದರ ಪದ್ಧತಿ ವಿರುದ್ಧ ಸಾಮೂಹಿಕವಾಗಿ ಪ್ರತಿಭಟನೆ ಮಾಡಲು ಅವರು ನಿರ್ಧರಿಸಿದ್ದಾರೆ.

ಜನವರಿ 24 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕದಲ್ಲಿ ಕೇಬಲ್ ಬಂದ್ ಆಗಲಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಕೇಬಲ್ ಟಿವಿ ಬಂದ್ ಆಗಲಿದೆ.
ಟ್ರಾಯ್ ನೀತಿಗಳ ವಿರುದ್ಧ ಕೇಬಲ್ ಆಪರೇಟರ್‌ಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ ಆದರೆ ಅಲ್ಲಿಯೂ ಅವರಿಗೆ ಹಿನ್ನಡೆ ಆಗಿದೆ. ಆದರೆ ಸುಪ್ರಿಂ ತೀರ್ಪನ್ನು ಮರುಪರಿಶೀಲನೆಗೆ ಅರ್ಜಿ ಹಾಕಿ ಕಾನೂನು ಹೋರಾಟ ಮುಂದುವರೆಸಿದ್ದಾರೆ.












Click it and Unblock the Notifications