7,280 ಕೋಟಿ ರೂ. ವೆಚ್ಚದ ಯೋಜನೆಗೆ ಕೇಂದ್ರದ ಅನುಮೋದನೆ; ಏನಿದು ಯೋಜನೆ?
ನವದೆಹಲಿ, ನವೆಂಬರ್ 27: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು 7 ,280 ಕೋಟಿ ರೂ. ಆರ್ಥಿಕ ವೆಚ್ಚದಲ್ಲಿ ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತಗಳು (ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ ) ತಯಾರಿಕೆಯನ್ನು ಉತ್ತೇಜಿಸುವ ಯೋಜನೆ'ಗೆ ಅನುಮೋದನೆ ನೀಡಿದೆ.
2047ಕ್ಕೆ ವಿಕಸಿತ ಭಾರತ ಸಾಕಾರ ಮಾಡಲೇಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದ ಭಾಗವಾಗಿ ಸಿಂಟೆರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್ (REPM) ಉತ್ಪಾದನೆ ಉತ್ತೇಜಿಸಲು ₹7,280 ಕೋಟಿ ಮೊತ್ತದ ಅತ್ಯಂತ ಮಹತ್ವದ ಬೃಹತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಆರ್ ಇಪಿಎಂ ಪೂರಕ ವ್ಯವಸ್ಥೆಯನ್ನುರಾಷ್ಟ್ರದ ಉದ್ದಗಲಕ್ಕೂ ಉತ್ತೇಜಿಸಲು, ಈ ಕ್ಷೇತ್ರದಲ್ಲಿ ಸದೃಢವಾದ ಸ್ವಾವಲಂಬನೆ ಸಾಧಿಸಲು ಮತ್ತು ಜಾಗತಿಕ ಆರ್ ಇಪಿಎಂ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರವನ್ನಾಗಿ ಕೇಂದ್ರ ಸರ್ಕಾರವು ದಿಟ್ಟ ಇರಿಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಸಂಪುಟ ನಿರ್ಧಾರದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿ ಪ್ರಧಾನಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು, ಈ ಯೋಜನೆ 6,000 ಎಂಟಿಪಿಎ ಸಿಂಟೆರ್ಡ್ ಆರ್ ಇಪಿಎಂನ ಸ್ವದೇಶಿ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆಟೋಮೊಬೈಲ್, ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರಗಳಿಗೆ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಬಹುದೊಡ್ಡ ಶಕ್ತಿಯನ್ನು ತುಂಬುತ್ತದೆ. ಜತೆಗೆ 2070ರ ವೇಳೆಗೆ ಭಾರತದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತರುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಭಾರತದ ಅಭಿವೃದ್ಧಿ ಪರ್ವದಲ್ಲಿ ಇಂದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಳೆದ ಜೂನ್ 17, 2025ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಡೆದ ನಿರ್ಣಾಯಕ ಅಂತರ ಸಚಿವಾಲಯಗಳ ಸಭೆ ನಡೆಸಿ ಸಿಂಟೆರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್ (REPM) ಮಹತ್ವದ ಬಗ್ಗೆ ಚರ್ಚೆ ನಡೆಸಿದ್ದರು.
ಅಂದು ಪರಮಾಣು ಶಕ್ತಿ ಇಲಾಖೆ, ಬೃಹತ್ ಕೈಗಾರಿಕೆ ಸಚಿವಾಲಯ, ಗಣಿ ಸಚಿವಾಲಯ, ವಿದೇಶಾಂಗ ಸಚಿವಾಲಯ, ಉಕ್ಕು ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮತ್ತು ಇತರ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ಧ ಆ ಸಭೆಯಲ್ಲಿ ಸ್ವದೇಶಿಯವಾಗಿ ಅಪರೂಪದದ ಖನಿಜಗಳನ್ನು ಶೋಧಿಸಿ ಬಳಕೆ ಮಾಡಿಕೊಳ್ಳುವ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯತಂತ್ರದ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರಲ್ಲದೆ, ಇದು ರಾಷ್ಟ್ರೀಯ ತುರ್ತು ಅಗತ್ಯ ಎಂದು ಪ್ರತಿಪಾದಿಸಿದ್ದರು.
ಆಧುನಿಕ ಉನ್ನತ ಮಟ್ಟದ ತಂತ್ರಜ್ಞಾನ ಬಳಕೆಯ ಕೈಗಾರಿಕೆಗಳಲ್ಲಿ ಬಳಸಲಾಗುವ ಪ್ರಬಲ ಮತ್ತು ಅತ್ಯಂತ ನಿರ್ಣಾಯಕ ಮ್ಯಾಗ್ನೆಟ್ (ಆಯಸ್ಕಾಂತ) ಗಳಾದ ಅಪರೂಪದ ಭೂಮಿಯಲ್ಲಿನ ಶಾಶ್ವತ ಆಯಸ್ಕಾಂತಗಳಿಗೆ ಸಂಪೂರ್ಣ ಸಂಯೋಜಿತ, ಸ್ಥಳೀಯ ಪೂರಕ ಸರಪಳಿ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ರಾಷ್ಟ್ರದ ಇತಿಹಾಸದಲ್ಲಿಯೇ ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ಮೊತ್ತ ಮೊದಲ ಉಪಕ್ರಮ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಈ ನಿರ್ಧಾರವನ್ನು ಭಾರತೀಯ ಕೈಗಾರಿಕೆ ಪ್ರಗತಿಯ ದಿಕ್ಕಿನಲ್ಲಿ ಪರಿವರ್ತನಾತ್ಮಕ ಹಾಗೂ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿರುವ ಕುಮಾರಸ್ವಾಮಿ ಅವರು, "2047ರ ಹೊತ್ತಿಗೆ ಭಾರತ ವಿಕಸಿತ ಭಾರತವಾಗಿ ಅವತರಿಸಬೇಕು. ಈ ನಿಟ್ಟಿನಲ್ಲಿ ಭಾರತದ ವೇಗದ ಪಯಣಕ್ಕೆ ಪ್ರೇರಕ ಶಕ್ತಿಯಾಗಿ ಈ ನಿರ್ಧಾರಕ್ಕೆ ಕಾರಣೀಭೂತರಾಗಿದ್ದಾರೆ ಎಂದು ಬೃಹತ್ ಕೈಗಾರಿಕೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೊದಲ ಬಾರಿಗೆ, ನಾವು ಸಿಂಟರ್ಡ್ ನಿಯೋಡೈಮಿಯಮ್ ಐರನ್ ಬೋರಾನ್ ಎಂಬ ಅಪರೂಪದ, ಭೂಮಿಯಲ್ಲಿನ ಶಾಶ್ವತ ಆಯಸ್ಕಾಂತಗಳನ್ನು ಹೊರತೆಗೆದು ಬಳಕೆ ಮಾಡಲು ಆರಂಭದಿಂದ ಅಂತ್ಯದವರೆಗೂ ಸಂಪೂರ್ಣವಾಗಿ ಸ್ವದೇಶಿ ಪೂರಕ ವ್ಯವಸ್ಥೆಯನ್ನು ನಿರ್ಮಿಸಲು ₹7,280 ಕೋಟಿ ವೆಚ್ಚದೊಂದಿಗೆ ಸಮರ್ಪಿತ, ಮಿಷನ್ ಆಧರಿತ ಯೋಜನೆಯನ್ನು ನಾವು ಪ್ರಾರಂಭಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಭೂಮಿಯ ಅಪರೂಪದ ಶಾಶ್ವತ ಆಯಸ್ಕಾಂತಗಳು, ವಿಶೇಷವಾಗಿ ಸಿಂಟರ್ಡ್ ನಿಯೋಡೈಮಿಯಮ್ ಐರನ್ ಬೋರಾನ್ (NdFeB) ಆಯಸ್ಕಾಂತಗಳು ವಿದ್ಯುತ್ ಚಲನಶೀಲತೆ, ನವೀಕರಿಸಬಹುದಾದ ಶಕ್ತಿ, ರಕ್ಷಣಾ ವ್ಯವಸ್ಥೆಗಳು, ಏರೋಸ್ಪೇಸ್, ರೊಬೊಟಿಕ್ಸ್, ಕೈಗಾರಿಕಾ ಎಲೆಕ್ಟ್ರಾನಿಕ್ಸ್ ಮತ್ತು ಉದಯೋನ್ಮುಖ ಕ್ಲೀನ್ ಟೆಕ್ ನಾವೀನ್ಯತೆಗಳಿಗೆ ಅನಿವಾರ್ಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಏನು ಯೋಜನೆ? ಎಷ್ಟು ವೆಚ್ಚ?
* ಯೋಜನೆ ಅಡಿಯಲ್ಲಿ ಒಟ್ಟು ₹7,280 ಕೋಟಿ ವೆಚ್ಚ
* ₹750 ಕೋಟಿ ಬಂಡವಾಳ ಸಬ್ಸಿಡಿ
* ₹6,450 ಕೋಟಿ ಮೊತ್ತದಷ್ಟು ಮಾರಾಟ ಸಂಬಂಧಿತ ಉತ್ತೇಜನ (5 ವರ್ಷಗಳವರೆಗೆ ₹2,150/ಕೆಜಿಗೆ ಮಿತಿ)
* ಆಡಳಿತ, ನಿರ್ವಹಣೆಗಾಗಿ ₹80 ಕೋಟಿ
* ಯೋಜನೆಯ ಅವಧಿ 7 ವರ್ಷ; ವ್ಯವಸ್ಥೆ ಮಾಡಿಕೊಳ್ಳಲು 2 ವರ್ಷ, ಹಾಗೂ ಪ್ರೋತ್ಸಾಹಕ ವಿತರಣೆಗೆ 5 ವರ್ಷ
* ರಾಷ್ಟ್ರೀಯ ಸಾಮರ್ಥ್ಯದ ಗುರಿ: NdFeB ಆಯಸ್ಕಾಂತಗಳ 6,000 MTPA
* ಫಲಾನುಭವಿಗಳು: ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಆಯ್ಕೆಯಾದ ಐದು ಜಾಗತಿಕ ಕಂಪನಿಗಳು
ಈ ಯೋಜನೆಯು NdPr ಆಕ್ಸೈಡ್‌ನಿಂದ ಸಿಂಟರ್ಡ್ ಮ್ಯಾಗ್ನೆಟ್ ತಯಾರಿಕೆಯವರೆಗೆ ಸಂಪೂರ್ಣ ಮೌಲಿಕ ಸರಪಳಿಯನ್ನು ವಿಸ್ತರಣೆ ಮಾಡುತ್ತದೆ. ಇದು ಭಾರತವು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಗಣಿಯಿಂದ ಮ್ಯಾಗ್ನೆಟ್‌ಗೆ ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಖಚಿತಪಡಿಸುತ್ತದೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications