ಸಿ-ಫೋರ್ ಸಮೀಕ್ಷೆ: 126 ಸ್ಥಾನಗಳಲ್ಲಿ ಕಾಂಗ್ರೆಸಿಗೆ ಗೆಲುವು

ಬೆಂಗಳೂರು, ಮಾರ್ಚ್ 26: ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಮಾತ್ರವಲ್ಲ 2013ರಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಹೀಗಂಥ 'ಸಿ-ಫೋರ್' ಸಂಸ್ಥೆ ನಡೆಸಿದ ಹೊಸ ಸಮೀಕ್ಷೆ ಹೇಳಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷೆಯ ಬಗ್ಗೆ ವಿವರ ನೀಡಿದೆ.
ಸಿ-ಫೋರ್ ಸಮೀಕ್ಷೆ : ಕಾಂಗ್ರೆಸ್ ಆಡಳಿತದ ಬಗ್ಗೆ ಜನರು ಹೇಳುವುದೇನು?
326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದ್ದು, ಶೇಕಡಾ 1ರಷ್ಟು ಇದು ತಪ್ಪುಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ.

ಕಾಂಗ್ರೆಸ್ ಗೆ ಶೇಕಡಾ 46 ಮತ
2013ರಲ್ಲಿ ಸಮೀಕ್ಷೆ ಬಿಡುಗಡೆ ಮಾಡಿದ್ದ ಸಿ-ಫೋರ್ ಕಾಂಗ್ರೆಸ್ 119 ರಿಂದ 120 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ 36.6 ಶೇಕಡಾ ಮತಗಳನ್ನು ಪಡೆದು 122 ಸೀಟುಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು.
ಇದೀಗ ಕಾಂಗ್ರೆಸ್ ತನ್ನ ಮತಗಳಿಕೆಯನ್ನು ಶೇಕಡಾ 9ರಷ್ಟು ಹೆಚ್ಚಿಸಿಕೊಂಡು ಶೇಕಡಾ 46 ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ ಶೇಕಡಾ 31 ಮತ್ತು ಶೇಕಡಾ 16 ಮತಗಳನ್ನು ಪಡೆಯಲಿದೆ ಎಂದು ಈ ಸರ್ವೆಯಲ್ಲಿ ತಿಳಿದು ಬಂದಿದೆ.
ಅಂದಹಾಗೆ 2013ರ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 19.9 ಮತ್ತು ಜೆಡಿಎಸ್ ಶೇಕಡಾ 20.2 ಮತಗಳನ್ನು ಪಡೆದಿತ್ತು.
ಸಮೀಕ್ಷೆ: ಸಿಎಂ ಹುದ್ದೆಗೆ ಕನ್ನಡಿಗರ ನಂ. 1 ಆಯ್ಕೆ ಸಿದ್ದರಾಮಯ್ಯ

ಕಾಂಗ್ರೆಸ್ ಗೆ 126 ಸ್ಥಾನ!
2013ರಲ್ಲಿ 122 ಸ್ಥಾನ ಗೆದ್ದಿದ್ದ ಕಾಂಗ್ರಸ್ ಈ ಬಾರಿ ತನ್ನ ಸ್ಥಾನಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿರುವ ಸಮೀಕ್ಷೆ 126 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜು ಮಾಡಿದೆ. ಬಿಜೆಪಿಯೂ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ, ಆದರೆ ಜಾತ್ಯಾತೀತ ಜನತಾದಳಕ್ಕೆ ಸ್ಥಾನಗಳು ಕಡಿಮೆಯಾಗಲಿದೆ ಎಂಬುದು ಸಮೀಕ್ಷೆಯ ಸಾರಾಂಶ.
2013ರಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು, ಈ ಬಾರಿ ಇದು 70ಕ್ಕೆ ಏರಿಕೆಯಾಗಬಹುದು ಎಂದು ಸಮೀಕ್ಷೆ ಹೇಳಿದೆ. ಜೆಡಿಎಸ್ ಸ್ಥಾನಗಳು 27 - 40ರ ಒಳಗೆ ನಿಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇತರರು ಶೇಕಡಾ 7 ಮತಗಳನ್ನು ಪಡೆದು 1 ಸ್ಥಾನದಲ್ಲಷ್ಟೇ ಗೆಲುವು ಸಾಧಿಸಬಹುದು ಎಂದು ಸರ್ವೆ ಮಾಹಿತಿ ನೀಡಿದೆ.
ಒನ್ ಇಂಡಿಯಾ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರಕ್ಕೆ ಜನರು ಕೊಟ್ಟ ಅಂಕವೆಷ್ಟು?

ಮಹಿಳಾ ಮತದಾರರ ಫೇವರಿಟ್ ಕಾಂಗ್ರೆಸ್
ಸಮೀಕ್ಷೆ ನಡೆಸಿದಾಗ ಮಹಿಳಾ ಮತದಾರರಲ್ಲಿ ಹೆಚ್ಚಿನವರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿರುವುದು ಕಂಡು ಬಂದಿದೆ.
ಪುರುಷರಲ್ಲಿ ಶೇಕಡಾ 44 ಜನರು ಕಾಂಗ್ರೆಸ್ ಗೆ ಮತ ಹಾಕುತ್ತೇವೆ ಎಂದು ಹೇಳಿದ್ದಾರೆ. ಶೇಕಡಾ 33ರಷ್ಟು ಜನರು ತಾವು ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದರೆ, ಶೇಕಡಾ 17 ಗಂಡಸರು ಜೆಡಿಎಸ್ ಗೆ ಒಲವು ತೋರಿದ್ದಾರೆ. ಇನ್ನುಳಿದ ಶೇಕಡಾ 6 ಜನರು ಇತರರಿಗೆ ಮತ ಹಾಕುವುದಾಗಿ ತಿಳಿಸಿದ್ದಾರೆ.
ಇನ್ನು ಮಹಿಳೆಯರ ವಿಚಾರಕ್ಕೆ ಬಂದಾಗ ಶೇಕಡಾ 48 ಜನರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿಗೆ ಕೇವಲ ಶೇಕಡಾ 29 ಮಹಿಳೆಯರು ಮಾತ್ರ ಮತ ಹಾಕುವುದಾಗಿ ಹೇಳಿದ್ದಾರೆ. ಜೆಡಿಎಸ್ ಬೆಂಬಲಿಸಿರುವ ಮಹಿಳೆಯರ ಸಂಖ್ಯೆ ಶೇಕಡಾ 14. ಶೇಕಡಾ 8 ಮಹಿಳೆಯರು ಇತರರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ನಿಮ್ಮ ಕನಸಿನ ಕರ್ನಾಟಕ ಸಚಿವ ಸಂಪುಟ ರಚಿಸಿ

ಎಲ್ಲಾ ವಯಸ್ಕರಿಗೂ ಕಾಂಗ್ರೆಸ್ ಫೇವರಿಟ್
ಎಲ್ಲಾ ವಯಸ್ಸಿನ ಮತದಾರರೂ ತಮಗೆ ಕಾಂಗ್ರೆಸ್ ಅತ್ಯುತ್ತಮ ಎಂಬ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
18 - 25 ವರ್ಷ ಒಳಗಿನ ಶೇಕಡಾ 46 ಯುವ ಮತದಾರರು ಕಾಂಗ್ರೆಸಿಗೆ ಬೆಂಬಲ ಸೂಚಿಸಿದ್ದಾರೆ. 26 - 35 ವರ್ಷದೊಳಗಿನ ಮತದಾರರಲ್ಲಿ ಶೇಕಡಾ 47 ಜನರು ನಮಗೆ ಕಾಂಗ್ರೆಸ್ಸೇ ಉತ್ತಮ, ಕಾಂಗ್ರೆಸಿಗೆಯೇ ನಮ್ಮ ಬೆಂಬಲ ಎಂದಿದ್ದಾರೆ.
36 - 50 ವರ್ಷದೊಳಗಿನ ಮತದಾರರಲ್ಲಿ ಶೇಕಡಾ 43 ಜನರು ಕಾಂಗ್ರೆಸ್ ಪಕ್ಷವನ್ನು ಸಪೋರ್ಟ್ ಮಾಡಿದ್ದಾರೆ. 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ಮತದಾರರು ಕಾಂಗ್ರೆಸನ್ನು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸಿದ್ದಾರೆ. ಈ ವಯಸ್ಸಿನವರಲ್ಲಿ ಶೇಕಡಾ 50ರಷ್ಟು ಜನರಿಗೆ ಕಾಂಗ್ರೆಸ್ ಬಗ್ಗೆ ಒಲವಿದೆ.