Shivamogga: ಈದ್ ಮಿಲಾದ್ ವೇಳೆ ಗಲಾಟೆ: ಬಿವೈ ವಿಜಯೇಂದ್ರ ಕಿಡಿ
ಶಿವಮೊಗ್ಗ, ಅಕ್ಟೋಬರ್ 02: ಜಿಲ್ಲೆಯ ಶಾಂತಿನಗರ ರಾಗಿಗುಡ್ಡದಲ್ಲಿ ಈದ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಡೆದಿದೆ. ಯುವಕರ ಗುಂಪು ಪೊಲೀಸರು ಮೇಲೆ ಕಲ್ಲು ತೂರಿದ್ದಕ್ಕೆ ಅಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಈ ಘಟನೆ ಮತ್ತು ಉದ್ವಿಗ್ನ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಶಾಂತಿನಗರ ಪ್ರದೇಶದಲ್ಲಿ ಭಾನುವಾರ ಈದ್ ಮಿಲಾದ್ ಮೆರವಣಿಗೆ ನಡೆದಿತ್ತು. ಈ ವೇಳೆ ಸಾವಿವರಾರು ಜನರು ಪಾಲ್ಗೊಂಡಿದ್ದರು. ಈ ವೇಳೆ ಕಟೌಟ್ ವಿಚಾರದಲ್ಲಿ ಉಂಟಾದ ವಾಗ್ವಾದ ತೀವ್ರ ಗಲಾಟೆಗೆ ತಿರುಗಿತ್ತು. ಮುಂಜಾಗೃತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಜಿಲ್ಲೆಯಲ್ಲಿಯೇ ಮೊನ್ನೆ ನಡೆದ ಗಣೇಶ ವಿಸರ್ಜನೆ ವೇಳೆ 'ನಭೂತೋ ನಭವಿಷ್ಯತಿ'ಎಂಬಂತೆ ಗಣಪತಿ ಉತ್ಸವ ಯಾವ ಗಲಭೆ ಆದಂತೆ ಇಡಿ ಭಕ್ತ ಸಾಗರವು ಏಕತೆ ಸಾರಿದೆ. ಹೀಗಿದ್ದರೂ ಸಹ ಬದಲಾದ ರಾಜ್ಯದ ಸರ್ಕಾರದ ವ್ಯವಸ್ಥೆಯ ಲಾಭಪಡೆದು, ಮತಾಂಧತೆ ಪುಚೋದಿಸುವ ಪೈಕ್ ಗಳನ್ನು ಅಳವಡಿಸಿ ಇಂದು ಈದ್ ಮೆರವಣಿಗೆಯಲ್ಲಿ ಕೋಮು ದಳ್ಳುರಿ ಹೊತ್ತಿಸಲಾಗಿದೆ. ಕಲ್ಲು ತೂರಾಟ ನಡೆಸಲಾಗಿದೆ.
ಗಲಾಟೆಗಳಿಗೆ ಕಾರಣವಾದ ದುಷ್ಕರ್ಮಿಗಳನ್ನು ಸದೆ ಬಡಿಯಬೇಕು ಶಿವಮೊಗ್ಗದ ಶಾಂತಿ ಕದಡಿರುವ ದುಷ್ಪ ಶಕ್ತಿಗಳನ್ನು ನಿಗ್ರಹಿಸಿ ಶಾಂತಿ ಕಾಪಾಡದೇ ಹೊದರೆ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯ ಹಾಗೂ ಸಮಾಜ ಘಾತುಕ ಶಕ್ತಿಗಳ ಪೋಷಕ ಸರ್ಕಾರ ಎಂದು ಭಾವಿಸಬೇಕಾಗುತ್ತದೆ ಎಂದು ಅವರು ಕಿಡಿ ಕಾರಿದ್ದಾರೆ.
ಘಟನೆ ಹಿನ್ನೆಲೆ ಏನು?
ಮಲೆನಾಡಿನ ಶಿವಮೊಗ್ಗದ ಶಾಂತಿನಗರ-ರಾಗಿಗುಡ್ಡದಲ್ಲಿ ಭಾನುವಾರ ಈದ್ ಮಿಲಾದ್ ಮೆರವಣಿಗೆ ನಡೆದಿತ್ತು. ಈ ವೇಳೆ ಕಟೌಟ್ ವಿಚಾರದಲ್ಲಿ ಯುವರ ಮಧ್ಯೆ ವಾಗ್ವಾದ ನಡೆಯಿತು ಎನ್ನಲಾಗಿದೆ. ಹೆಣ್ಣು ಮತ್ತು ಗಂಡು ಸೇರಿದಂತೆ ಸಾವಿರಾರು ಮಂದಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವಾಗ್ವಾದ ಹಿಂಸೆಗೆ ತಿರುಗಿ ಪುಂಡರು ಕಲ್ಲು ತೂರಾಟ ನಡೆದರು. ಪೊಲೀಸರು ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಸಂಬಂಧ ರಾಗಿಗುಡ್ಡದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಈ ಸಂಬಂಧ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರು ವಿಶೇಷ ಸಿಬ್ಬಂದಿ ನಿಯೋಜಿಸಲಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ. ಮನೆ ಮನೆ ತಡಕಾಡಿ ಸುಮಾರು 10 ಮಂದಿ ಗಲಭೆಗೆ ಕಾರಣವಾದವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications