ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ: RSS ನೀಡಿದ ಗುಪ್ತ ಮಾಹಿತಿಯಲ್ಲಿ ಬಿಜೆಪಿಗೆ ಶಾಕ್?

|
Google Oneindia Kannada News

ಬೆಳಗಾವಿ ಲೋಕಸಭಾ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಇನ್ನೆರಡು ದಿನದಲ್ಲಿ ಮುಗಿಯಲಿದೆ. ಇದೇ ಶನಿವಾರ (ಏ 17) ಚುನಾವಣೆ ನಡೆಯಲಿದ್ದು, ಮೇ ಎರಡರಂದು ಫಲಿತಾಂಶ ಹೊರಬೀಳಲಿದೆ.

ಆಪರೇಶನ್ ಕಮಲದ ಮೂಲಕ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ನಂತರ ಈಗಾಗಲೇ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದಿದ್ದು, ಇದರಲ್ಲಿ ಬಿಜೆಪಿ ಹದಿಮೂರರಲ್ಲಿ ಗೆಲುವು ಸಾಧಿಸಿದೆ.

 ಬೆಳಗಾವಿ ಉಪ ಚುನಾವಣೆಗೆ ಒಂದೇ ವಾರ: ಏನಾಗುತ್ತಿದೆ ಕಾಂಗ್ರೆಸ್ ನಲ್ಲಿ, ಯಾಕೀ ಗೊಂದಲ? ಬೆಳಗಾವಿ ಉಪ ಚುನಾವಣೆಗೆ ಒಂದೇ ವಾರ: ಏನಾಗುತ್ತಿದೆ ಕಾಂಗ್ರೆಸ್ ನಲ್ಲಿ, ಯಾಕೀ ಗೊಂದಲ?

ಆಡಳಿತ ಪಕ್ಷವಾಗಿರುವ ಕಾರಣ ಸಹಜವಾಗಿಯೇ ಬಿಜೆಪಿ ಸದ್ಯದ ಮಟ್ಟಿಗೆ ಡ್ರೈವರ್ ಸೀಟ್ ನಲ್ಲಿದೆ. ಆದರೂ, ಕಳೆದ ಉಪ ಚುನಾವಣೆಗೂ, ಈಗ ನಡೆಯುತ್ತಿರುವ ಚುನಾವಣೆಯ ಚಿತ್ರಣ ಬದಲಾಗಿರುವುದರಿಂದ ಬಿಜೆಪಿಗೆ ಕಠಿಣ ಸ್ಪರ್ಧೆ ಇದೆ ಎನ್ನುವುದು ಸದ್ಯದ ಗ್ರೌಂಡ್ ರಿಪೋರ್ಟ್.

ಬಿಜೆಪಿ ಗೆಲುವಿನಲ್ಲಿ ಸದಾ ಪ್ರಮುಖ ಪಾತ್ರವನ್ನು ವಹಿಸುವ ಪಕ್ಷದ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ, ಮೂರು ಕ್ಷೇತ್ರಗಳ ಜನರ ಮೂಡ್ ಹೇಗಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಸಿಎಂ ಬಿಎಸ್ವೈಗೆ ಮತ್ತು ವರಿಷ್ಠರಿಗೆ ನೀಡಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

 ಆರ್‌ಎಸ್‌ಎಸ್‌ ಅನ್ನು ಇನ್ಮುಂದೆ ಸಂಘ ಪರಿವಾರ ಎಂದು ಕರೆಯುವುದಿಲ್ಲ; ರಾಹುಲ್ ಆರ್‌ಎಸ್‌ಎಸ್‌ ಅನ್ನು ಇನ್ಮುಂದೆ ಸಂಘ ಪರಿವಾರ ಎಂದು ಕರೆಯುವುದಿಲ್ಲ; ರಾಹುಲ್

 ದಿವಂಗತ ಸುರೇಶ್ ಅಂಗಡಿಯವರಿಗೆ ಇದ್ದ ವರ್ಚಸ್ಸು

ದಿವಂಗತ ಸುರೇಶ್ ಅಂಗಡಿಯವರಿಗೆ ಇದ್ದ ವರ್ಚಸ್ಸು

ಬೆಳಗಾವಿಯಲ್ಲಿ ಜಾರಕಿಹೊಳಿ ಸಿಡಿ ಪ್ರಕರಣ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಕಮ್ಮಿ. ಮತದಾರ ಸ್ಥಳೀಯ ವಿಚಾರದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಿರುವುದರಿಂದ, ಜೊತೆಗೆ, ಬೆಲೆ ಏರಿಕೆಯೂ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿಲ್ಲದಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ, ಕ್ಷೇತ್ರದಲ್ಲಿ ದಿವಂಗತ ಸುರೇಶ್ ಅಂಗಡಿಯವರಿಗೆ ಇದ್ದ ವರ್ಚಸ್ಸು ಮತ್ತು ಅವರ ಪತ್ನಿಯೇ ಕಣದಲ್ಲಿ ಇರುವುದರಿಂದ ಅನುಕಂಪದ ಅಲೆಯೂ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ.

 ಬೆಳಗಾವಿಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗೆಸ್ಸಿಗೆ ಸಾಧ್ಯವಿಲ್ಲ

ಬೆಳಗಾವಿಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗೆಸ್ಸಿಗೆ ಸಾಧ್ಯವಿಲ್ಲ

ಸದ್ಯದ ಮಟ್ಟಿಗೆ ಬೆಳಗಾವಿಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗೆಸ್ಸಿಗೆ ಸಾಧ್ಯವಿಲ್ಲ ಎನ್ನುವ ವಾತಾವರಣವಿದೆ. ಚುನಾವಣೆಗೆ ಇನ್ನೂ ಮೂರ್ನಾಲ್ಕು ದಿನಗಳು ಇರುವುದರಿಂದ, ಇದೇ ಲಯದಲ್ಲಿ ಪ್ರಚಾರ ವೇಗವನ್ನು ಪಡೆದುಕೊಳ್ಳಬೇಕು ಎನ್ನುವ ಸೂಚನೆಯನ್ನು ಸಂಘ ಪರಿವಾರ ಬಿಜೆಪಿ ವರಿಷ್ಠರಿಗೆ ನೀಡಿದೆ ಎನ್ನುವ ಸುದ್ದಿಯಿದೆ. ಆದರೆ, ಅಸೆಂಬ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಪರಿಸ್ಥಿತಿ ತುಸು ಗಂಭೀರವಾಗಿದೆ.

 ಬಸವಕಲ್ಯಾಣದಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಕಣದಲ್ಲಿ

ಬಸವಕಲ್ಯಾಣದಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಕಣದಲ್ಲಿ

ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಪರಿಸ್ಥಿತಿ ಬಿಜೆಪಿಗೆ ಅಷ್ಟಾಗಿ ಪೂರಕವಾಗಿಲ್ಲ. ಬಸವಕಲ್ಯಾಣದಲ್ಲಿ ದಿವಂಗತ ಶಾಸಕರ ಪತ್ನಿ ಮತ್ತು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಕಣದಲ್ಲಿ ಇರುವುದರಿಂದ ಬಿಜೆಪಿ ಇಲ್ಲಿ ಬೆವರಿಳಿಸಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕಿದೆ. ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

Recommended Video

ಲಾಕ್ ಡೌನ್ ಪರಿಹಾರವಲ್ಲ.. ಜನರೆ ಜನತಾ ಕರ್ಪ್ಯೂ ವಿಧಿಸಿಕೊಳ್ಳಿ'- ಆರೋಗ್ಯ ಸಚಿವ ಡಾ.ಕೆ.ಸುಧಾಕರ್ | Oneindia Kannada
 ಮಸ್ಕಿ ಗೆಲುವು ಬಿಎಸ್ವೈಗೆ ಇನ್ನೂ ಪ್ರಮುಖ, ಕಾರಣ ವಿಜಯೇಂದ್ರ ಅಲ್ಲಿನ ಉಸ್ತುವಾರಿ

ಮಸ್ಕಿ ಗೆಲುವು ಬಿಎಸ್ವೈಗೆ ಇನ್ನೂ ಪ್ರಮುಖ, ಕಾರಣ ವಿಜಯೇಂದ್ರ ಅಲ್ಲಿನ ಉಸ್ತುವಾರಿ

ಮಸ್ಕಿಯಲ್ಲಿ 25ಸಾವಿರ ಮತಗಳ ಅಂತರದಿಂದ ನಾವು ಗೆಲುವು ಸಾಧಿಸುತ್ತೇವೆ ಎನ್ನುವ ವಿಶ್ವಾಸದ ಮಾತನ್ನು ಯಡಿಯೂರಪ್ಪ ಆಡಿದ್ದಾರೆ. ಆದರೆ, ಅಲ್ಲಿ ಗೆಲುವು ಅಷ್ಟೇನೂ ಸುಲಭವಿಲ್ಲ. ಮಸ್ಕಿಯಲ್ಲಿನ ಗೆಲುವು ಬಿಎಸ್ವೈಗೆ ಇನ್ನೂ ಪ್ರಮುಖವಾಗಿರಲು ಕಾರಣ ಅವರ ಪುತ್ರ ವಿಜಯೇಂದ್ರ ಅಲ್ಲಿನ ಉಸ್ತುವಾರಿ. ಒಟ್ಟಿನಲ್ಲಿ RSS ನೀಡಿದ ಗುಪ್ತ ಮಾಹಿತಿಯ ಪ್ರಕಾರ, ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಫಲಿತಾಂಶ ಹೇಗೂ ತಿರುಗಬಹುದು.

English summary
By Elections 2021 In Karnataka: RSS Has Given Crucial Input To BJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X