ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕ್ಸಿಟ್ ಪೋಲ್‌: ಉಪಚುನಾವಣೆಯಲ್ಲಿ ಮೈತ್ರಿಯೇ ಬಾಸ್‌, ಬಿಜೆಪಿಗೆ ಹಿನ್ನಡೆ

|
Google Oneindia Kannada News

ಬೆಂಗಳೂರು, ನವೆಂಬರ್ 03: ಐದು ಕ್ಷೇತ್ರಗಳ ಉಪಚುನಾವಣೆ ಮತದಾನ ಮುಗಿದಿದ್ದು, ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿವೆ.

ದೀಪಾವಳಿ ವಿಶೇಷ ಪುರವಣಿ

ಪಬ್ಲಿಕ್ ಟಿವಿಯು ಐದು ಕ್ಷೇತ್ರಗಳ ಎಕ್ಸಿಟ್‌ ಪೋಲ್‌ (ಮತದಾನೋತ್ತರ ಸಮೀಕ್ಷೆ) ಮಾಡಿದ್ದು, ಅದರ ಪ್ರಕಾರ 5 ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಜೆಡಿಎಸ್-ಕಾಂಗ್ರೆಸ್‌ ಮೈತ್ರಿ ಪಕ್ಷಗಳ ಅಭ್ಯರ್ಥಿ ಗೆದ್ದರೆ ಒಂದರಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ.

ಆದರೆ ಬಳ್ಳಾರಿ ಹಾಗೂ ಜಮಖಂಡಿ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳ ಮಧ್ಯೆ ಹತ್ತಿರದ ಸ್ಪರ್ಧೆ ಇದ್ದು, ಮತ ಎಣಿಕೆಯ ದಿನ ಸಮೀಕ್ಷೆಯ ವರದಿಗಿಂತಲೂ ಭಿನ್ನವಾದ ಫಲಿತಾಂಶವನ್ನು ನಿರೀಕ್ಷಿಸಲು ಬಹುದಾಗಿದೆ.

ಉಪಚುನಾವಣೆ 2018 ಮತದಾನ ಅಂತ್ಯ: ಇಲ್ಲಿದೆ ಹೈಲೈಟ್ಸ್‌ಉಪಚುನಾವಣೆ 2018 ಮತದಾನ ಅಂತ್ಯ: ಇಲ್ಲಿದೆ ಹೈಲೈಟ್ಸ್‌

ಮತದಾನ ಮಾಡಿ ಬಂದ ಮತದಾರರನ್ನು ಮಾತನಾಡಿಸಿ ಅವರ ಅಭಿಪ್ರಾಯ ಸಂಗ್ರಹಿಸಿ ಮಾಡುವ ಸಮೀಕ್ಷೆ ಇದಾಗಿದ್ದು, ಮತದಾನೋತ್ತರ ಸಮೀಕ್ಷೆಗಳು ಫಲಿತಾಂಶಕ್ಕೆ ಹತ್ತಿರ ಇರುತ್ತವೆ ಎಂದು ನಂಬಲಾಗುತ್ತದೆ.

ಬಳ್ಳಾರಿಯಲ್ಲಿ ಕಾಂಗ್ರೆಸ್‌ಗೆ ಅಲ್ಪ ಮುನ್ನಡೆ

ಬಳ್ಳಾರಿಯಲ್ಲಿ ಕಾಂಗ್ರೆಸ್‌ಗೆ ಅಲ್ಪ ಮುನ್ನಡೆ

ಎಕ್ಸಿಟ್ ಪೋಲ್‌ ಪ್ರಕಾರ ಬಿಜೆಪಿ ಭದ್ರಕೋಟೆ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಗಿಂತಲೂ ಅಲ್ಪ ಮುನ್ನಡೆ ಸಾಧಿಸಲಿದೆ. ಬಿಜೆಪಿಗೆ 40% ಮತಚಲಾವಣೆ ಆಗಿದ್ದರೆ ಕಾಂಗ್ರೆಸ್‌ಗೆ 42% ಮತಚಲಾವಣೆ ಆಗಿದೆ ಎನ್ನುತ್ತಿದೆ ಸಮೀಕ್ಷೆ. ಆದರೆ 18% ಮತದಾರರು ತಾವು ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದೇವೆ ಎಂದು ಹೇಳುವುದಿಲ್ಲ ಎಂದಿದ್ದಾರೆ. ಈ ಮತದಾರರು ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಕಾರಣವಾಗಲಿದ್ದಾರೆ.

ಕರ್ನಾಟಕ ಉಪಚುನಾವಣೆ: ಜಮಖಂಡಿಯಲ್ಲಿ ಹುರುಪು, ಮಂಡ್ಯದಲ್ಲಿ ನಿದ್ದೆ ಕರ್ನಾಟಕ ಉಪಚುನಾವಣೆ: ಜಮಖಂಡಿಯಲ್ಲಿ ಹುರುಪು, ಮಂಡ್ಯದಲ್ಲಿ ನಿದ್ದೆ

ಶಿವಮೊಗ್ಗದಲ್ಲಿ ಬಿಜೆಪಿಯೇ ಬಾಸ್‌

ಶಿವಮೊಗ್ಗದಲ್ಲಿ ಬಿಜೆಪಿಯೇ ಬಾಸ್‌

ಶಿವಮೊಗ್ಗ ಲೋಕಸಭೆ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಗೆಲ್ಲಲಿದೆ ಎನ್ನುತ್ತಿದೆ ಪಬ್ಲಿಕ್ ಟಿವಿ ಮತದಾನೋತ್ತರ ಸಮೀಕ್ಷೆ. ಸಮೀಕ್ಷೆ ಪ್ರಕಾರ ಶಿವಮೊಗ್ಗದಲ್ಲ ಬಿಜೆಪಿ ಯ ರಾಘವೇಂದ್ರ ಅವರಿಗೆ 46% ಮತ ಬಿದ್ದಿದ್ದರೆ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಮಧು ಬಂಗಾರಪ್ಪಗೆ 38% ಮತ ಬಿದ್ದಿವೆಯಂತೆ. 16% ಮತದಾರರು ಯಾವುದಕ್ಕೆ ಮತ ಹಾಕಿದ್ದೇವೆ ಎಂದು ಹೇಳಲು ನಿರಾಕರಿಸಿದ್ದಾರೆ.

ರಾಮನಗರ ಬಿಜೆಪಿಗೆ ಮತ್ತೆ ಶಾಕ್ ಕೊಟ್ಟ ಪಲಾಯನ ಅಭ್ಯರ್ಥಿ ಚಂದ್ರಶೇಖರ್ ರಾಮನಗರ ಬಿಜೆಪಿಗೆ ಮತ್ತೆ ಶಾಕ್ ಕೊಟ್ಟ ಪಲಾಯನ ಅಭ್ಯರ್ಥಿ ಚಂದ್ರಶೇಖರ್

ಮಂಡ್ಯ ಜಿಲ್ಲೆಯಲ್ಲಿ ಮೈತ್ರಿಯೇ ಮುಂದೆ

ಮಂಡ್ಯ ಜಿಲ್ಲೆಯಲ್ಲಿ ಮೈತ್ರಿಯೇ ಮುಂದೆ

ಮಂಡ್ಯ ಲೋಕಸಭೆ ಉಪಚುನಾವಣೆ ಕಣದಲ್ಲಿ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಗೆಲ್ಲಲಿದ್ದಾರೆ ಎನ್ನುತ್ತಿದೆ ಪಬ್ಲಿಕ್ ಟಿವಿ ಸಮೀಕ್ಷೆ. ಮಂಡ್ಯದಲ್ಲಿ ಆಗಿರುವ ಅಲ್ಪ ಮತದಾನದಲ್ಲಿಯೇ ಹೆಚ್ಚು ಮತದಾನ ಮೈತ್ರಿ ಅಭ್ಯರ್ಥಿಗೆ ಆಗಿದೆ. ಜೆಡಿಎಸ್‌ ಪರವಾಗಿ 62% ಮತ ಚಲಾವಣೆ ಆಗಿದ್ದರೆ. ಬಿಜೆಪಿ ಪರ ಕೇವಲ 15% ಮತಗಳು, ಮತದಾನ ಮಾಹಿತಿ ನೀಡವುದಿಲ್ಲ ಎಂದು 23% ಮಂದಿ ಹೇಳಿದ್ದಾರೆ. ಚುನಾವಣಾ ಆಯೋಗದ ಪ್ರಕಾರ ಮಂಡ್ಯದಲ್ಲಿ ಅತಿ ಕಡಿಮೆ 53.93% ಮತದಾನ ಆಗಿದೆ.

ರಾಮನಗರದಲ್ಲಿ ಜೆಡಿಎಸ್‌ ಏಕಮೇತ್ವ

ರಾಮನಗರದಲ್ಲಿ ಜೆಡಿಎಸ್‌ ಏಕಮೇತ್ವ

ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರು ಗೆಲ್ಲುವುದು ಬಹುತೇಕ ಖಚಿತ ಎನ್ನುತ್ತಿದೆ ಎಕ್ಸಿಟ್‌ ಪೋಲ್‌. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ಕಾರಣ ಅನಿತಾ ಅವರಿಗೆ ಎದುರಾಳಿಯೇ ಇರಲಿಲ್ಲ ಹಾಗಾಗಿ ಅವರ ಪರ 80% ಮತಗಳು ಬಿದ್ದರೆ ಬಿಜೆಪಿ ಪರ 10% ಮತಗಳು ಮಾತ್ರವೇ ಚಲಾವಣೆ ಆಗಿವೆ. ಯಾರಿಗೆ ಮತ ಚಲಾಯಿಸಿದ್ದೇವೆ ಎಂದು ಹೇಳುವುದಿಲ್ಲವೆಂದು 10% ಜನ ಹೇಳಿದ್ದಾರೆ. ರಾಮನಗರದಲ್ಲಿ ಒಟ್ಟು 73.71% ಮತದಾನ ಆಗಿದೆ.

ಜಮಖಂಡಿ ಕ್ಷೇತ್ರದಲ್ಲಿ ಸನಿಹದ ಪೈಟ್‌

ಜಮಖಂಡಿ ಕ್ಷೇತ್ರದಲ್ಲಿ ಸನಿಹದ ಪೈಟ್‌

ಭಾರಿ ಹತ್ತಿರದ ಜಿದ್ದಾ-ಜಿದ್ದಿ ಇರುವ ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಲ್ಪ ಮತಗಳಿಂದ ಮುನ್ನಡೆಯಲ್ಲಿರಲಿದೆ ಎನ್ನುತ್ತಿದೆ ಪಬ್ಲಿಕ್ ಟಿವಿಯ ಎಕ್ಸಿಟ್ ಪೋಲ್‌. ಇಲ್ಲಿ ಬಿಜೆಪಿಗೆ 45% ಮತ ಬಿದ್ದಿದ್ದರೆ, ಕಾಂಗ್ರೆಸ್‌ ಪರವಾಗಿ 46% ಮತಗಳು ಚಲಾವಣೆ ಆಗಿವೆಯಂತೆ. ಯಾವುದಕ್ಕೆ ಮತ ಚಲಾಯಿಸಿದ್ದೇವೆ ಎಂದು ಹೇಳದವರು 9% ಇವರೇ ಫಲಿತಾಂಶವನ್ನು ನಿರ್ಧಾರ ಮಾಡಲಿದ್ದಾರೆ. ಜಮಖಂಡಿಯಲ್ಲಿ 81.58% ಮತದಾನ ಆಗಿದೆ.

English summary
By election 2018 for five constituency end today. Public tv did exit polls on voting day. As per the survey BJP is winng only one lok Sabha by constiuency in Shimoga. two lok Sabha and two assembly constitueny will going to congress hand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X