ಮುಂದಿನ ವಾರದಿಂದ ಆಯ್ದ ಸ್ಥಳಗಳಿಗೆ ಬಸ್ ಸೇವೆ ಆರಂಭ?

ಬೆಂಗಳೂರು, ಮೇ 13: ನಿರ್ದಿಷ್ಟ ಸ್ಥಳಗಳಿಗೆ ಪ್ರಯಾಣಿಕರ ರೈಲು ಸಂಚಾರ ಆರಂಭಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಆಯ್ದ ಸ್ಥಳಗಳಿಗೆ ಬಸ್ ಸಂಚಾರ ಪುನರಾರಂಭಿಸಲು ರಾಜ್ಯ ರಸ್ತೆ ನಿಗಮಗಳು ಸಿದ್ಧತೆಯಲ್ಲಿ ತೊಡಗಿವೆ. ಸೋಮವಾರದ ವೇಳೆಗೆ ಬಸ್ ಸೇವೆ ಆರಂಭವಾಗುವ ಸಾಧ್ಯತೆ ಇದೆ.

Recommended Video

      ದೇಶದ ಜನರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿ ದೊಡ್ಡ ಸಂದೇಶ ಕೊಟ್ಟ ಮೋದಿ | Narendra Modi

      ಶೀಘ್ರದಲ್ಲೇ ಹೊರರಾಜ್ಯಗಳಿಗೆ ಬಸ್ ಸಂಚಾರ ಆರಂಭವಾಗುವ ದಿನಾಂಕ ಪ್ರಕಟಿಸಲಿದೆ. ಈ ನಡುವೆ ರಾಜ್ಯದ ಆಯ್ದ ಭಾಗಗಳಿಗೆ ಬಸ್ ಕಾರ್ಯಚರಣೆಗೊಳಿಸಲು ಸಿದ್ಧತೆಯಲ್ಲಿ ತೊಡಗಿದೆ.

      ಪ್ರಸ್ತುತ ಅಗತ್ಯ ಹಾಗೂ ತುರ್ತು ಸೇವಾ ಸಿಬ್ಬಂದಿಗೆ ಬಸ್ ಕಾರ್ಯಾಚರಣೆ ಮಾಡುತ್ತಿರುವ ಬಿಎಂಟಿಸಿ, ಸಾರ್ವಜನಿಕರಿಗಾಗಿ ಬಸ್ ಕಾರ್ಯಾಚರಣೆ ಮಾಡಲು ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

      Bus Service To Selected Destinations Starting From Next Week

      ಈಗಾಗಲೇ ಕೆಎಸ್‌ಆರ್‌ಟಿಸಿ ರಾಜ್ಯದ ಹಸಿರುವಲಯದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯೊಳಗೆ ಸೀಮಿತವಾಗಿ ಬಸ್ ಸಂಚಾರ ಆರಂಭಿಸಿದೆ. ಇನ್ನು ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ಇ-ಪಾಸ್ ಪಡೆದವರು ಹೊರ ರಾಜ್ಯಗಳಿಗೆ ತೆರಳಲು ಬಸ್ ಸೇವೆ ಆರಂಭಿಸುವುದಾಗಿ ಕೆಎಸ್‌ಆರ್‌ಟಿಸಿ ತಿಳಿಸಿದೆ.

      ಹೀಗಾಗಿ ಬೇರೆ ಊರುಗಳಿಂದ ನೌಕರರು ರಾಜಧಾನಿಯತ್ತ ಭಾರಿ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣಪತ್ರ ಹಾಜರುಪಡಿಸುವಂತೆ ಸೂಚಿಸಿರುವುದರಿಂದ ತಪಾಸಣೆಗಾಗಿ ನೌಕರರು ಮುಗಿಬೀಳುವಂತಾಗಿದೆ.

      ಮೇ 18ರೊಳಗೆ ಲಾಕ್‌ಡೌನ್ 4.0 ಕುರಿತ ಮಾರ್ಗಸೂಚಿಗಳು ಪ್ರಕಟವಾಗಲಿದ್ದು, ಬಸ್‌ ಓಡಾಟ, ಓಲಾ, ಊಬರ್ ಟ್ಯಾಕ್ಸಿ, ಆಟೋರಿಕ್ಷಾ ಓಡಾಟಗಳಿಗೆ ಒಪ್ಪಿಗೆ ದೊರೆಯಲಿವೆಯೇ ಎಂದು ಕಾದು ನೋಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+