Get Updates
Get notified of breaking news, exclusive insights, and must-see stories!

Burn Victims: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟ ಸಂತ್ರಸ್ತರಿಗೆ ಪರಿಹಾರ ಸಿಗುತ್ತಿಲ್ಲ: ಕಾರಣ ತಿಳಿಯಿರಿ!

ಬೆಂಗಳೂರು, ಜೂನ್‌ 07: ವಿಕ್ಟೋರಿಯಾ ಆಸ್ಪತ್ರೆಯು ವಾರ್ಷಿಕವಾಗಿ ನೂರಾರು ಕೌಟುಂಬಿಕ ಹಿಂಸೆ ಹಾಗೂ ಸುಟ್ಟ ಸಂತ್ರಸ್ತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅವರಲ್ಲಿ ಯಾರೂ ಸಹ ಸರ್ಕಾರದ ಸಂತ್ರಸ್ತ ಪರಿಹಾರ ಯೋಜನೆಯಿಂದ ಪರಿಹಾರವನ್ನು ಪಡೆಯುತ್ತಿಲ್ಲ.

ಸರ್ಕಾರದ ಸಂತ್ರಸ್ತ ಪರಿಹಾರ ಯೋಜನೆಯ ಪರಿಹಾರವನ್ನ ಪಡೆಯದೇ ಇರಲು ಪ್ರಮುಖ ಕಾರಣ ಎಂದರೇ, ಸಂತ್ರಸ್ತರು ಭಯ ಅಥವಾ ಸಾಮಾಜಿಕ ಒತ್ತಡದಿಂದ ಪೊಲೀಸ್ ಕೇಸುಗಳನ್ನು ದಾಖಲಿಸಲು ನಿರಾಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Burn Victims At Victoria Hospital

ಸುಟ್ಟ ಸಂಗತಿಗಳಾದರೂ ನಡೆದಾಗ ಘಟನೆಯ ನಂತರ ಹೆಚ್ಚಿನ ಮಹಿಳೆಯರು ತಮ್ಮ ಗಂಡನನ್ನು ಬಿಟ್ಟು ಹೋಗುತ್ತಾರೆ. ಆದರೆ, ಯಾವುದೇ ಆರ್ಥಿಕ ಬೆಂಬಲವಿಲ್ಲದೆ ತಮ್ಮನ್ನು ತಾವು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಇನ್ನೂ ಗಾಯದ ತೀವ್ರತೆಗೆ ಅನುಗುಣವಾಗಿ ಸುಟ್ಟ ಸಂತ್ರಸ್ತರು ಪರಿಹಾರ ಯೋಜನೆಯಡಿ 2 ರಿಂದ 8 ಲಕ್ಷ ರೂಪಾಯಿಗಳವರೆಗೆ ಪರಿಹಾರವನ್ನು ಪಡೆಯಬಹುದು.

ಇನ್ನೂ ಜನವರಿ 2020 ಮತ್ತು ಏಪ್ರಿಲ್ 2023 ರ ನಡುವೆ, ವಿಕ್ಟೋರಿಯಾ ಆಸ್ಪತ್ರೆಯು ಕೌಟುಂಬಿಕ ಹಿಂಸೆಗೆ ಒಳಗಾದ ಸುಮಾರು 600 ಸುಟ್ಟ ರೋಗಿಗಳನ್ನು ದಾಖಲಿಸಿದೆ ಎಂದು ಸಂತ್ರಸ್ತರನ್ನು ಬೆಂಬಲಿಸಲು ಆಸ್ಪತ್ರೆಯೊಂದಿಗೆ ಕೆಲಸ ಮಾಡುವ ಎನ್‌ಜಿಒ ಅವೇಕ್ಷಾದ ಸತ್ಯ ದೇವಿ ಹೇಳಿದ್ದಾರೆ. ಪತಿ ತನ್ನ ಹೆಂಡತಿಯನ್ನ ಸುಟ್ಟುಹಾಕಿದ ಪ್ರಕರಣಗಳು ಅಥವಾ ನಿರಂತರ ಕಿರುಕುಳದಿಂದಾಗಿ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಗಳು ಇದರಲ್ಲಿ ಸೇರಿವೆ ಎಂದು ಹೇಳಿದ್ದಾರೆ.

ಸುಟ್ಟ ಸಂತ್ರಸ್ತರು ಪರಿಹಾರ ಪಡೆಯಲು ಮೊದಲು ಎಫ್‌ಐಆರ್ ದಾಖಲಿಸಬೇಕು. ಆದರೆ 33 ಪ್ರಕರಣಗಳಲ್ಲಿ ಮಾತ್ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅದರಲ್ಲಿ 28 ಸುಟ್ಟಗಾಯಗಳು, ವರದಕ್ಷಿಣೆ ಸಂಬಂಧಿತ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆಯಿಂದ ಉಂಟಾದ ಸಾವುಗಳಾಗಿವೆ. ಉಳಿದ ಐವರು ಬದುಕುಳಿದವರು ಎಂದು ತಿಳಿದು ಬಂದಿದೆ.

ಇನ್ನೂ ಸಂತ್ರಸ್ತರು ನ್ಯಾಯಾಲಯದ ವಿಚಾರಣೆಯ ನಂತರ ಪರಿಹಾರವನ್ನು ಪಡೆಯಬಹುದು, ಆದರೆ ಮಧ್ಯಂತರ ಪರಿಹಾರಕ್ಕಾಗಿ, ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವನ್ನು (KSLSA) ಸಂಪರ್ಕಿಸಬಹುದು. ಇಲ್ಲಿಯವರೆಗೆ ಕೇವಲ ಇಬ್ಬರು ಮಾತ್ರ ಪ್ರಾಧಿಕಾರಕ್ಕೆ ಬಂದಿದ್ದಾರೆ ಎಂದು ದೇವಿ ಹೇಳಿದರು. ಸಂತ್ರಸ್ತರು 1.5 ಲಕ್ಷ ರೂ.ಗಳ ಮಧ್ಯಂತರ ಪರಿಹಾರವನ್ನು ಪಡೆದರು.

ಸಂತ್ರಸ್ತರು ಸಾಮಾನ್ಯವಾಗಿ ಸುಟ್ಟಗಾಯಗಳ ನಿಜವಾದ ಕಾರಣವನ್ನು ವೈದ್ಯರಿಗೆ ಅಥವಾ ಪೊಲೀಸರಿಗೆ ಬಹಿರಂಗಪಡಿಸುವುದಿಲ್ಲ ಎಂದು ದೇವಿ ಹೇಳಿದರು. ಅಲ್ಲದೇ ಚಿಕಿತ್ಸೆಯು ಸಾಮಾನ್ಯವಾಗಿ ಆರರಿಂದ ಏಳು ತಿಂಗಳವರೆಗೆ ಇರುತ್ತದೆ ಆದ್ದರಿಂದ, ಸುಟ್ಟ ಸಂತ್ರಸ್ತರು ಆಸ್ಪತ್ರೆಯ ವಾಸ್ತವ್ಯ ಮತ್ತು ಅನುಸರಣಾ ಭೇಟಿಗಳಿಗಾಗಿ ತಮ್ಮ ಗಂಡನ ಮೇಲೆ ಅವಲಂಬಿತರಾಗಿದ್ದಾರೆ. ಆದ್ದರಿಂದ, ಅವರು ಘಟನೆಯನ್ನು ಅಪಘಾತ ಎಂದು ಹೇಳಿತ್ತಾರೆ ಎನ್ನಲಾಗಿದೆ.

ಸುಟ್ಟ ಸಂತ್ರಸ್ತರು ಹೇಳಿಕೊಂಡಂತೆ, ಸುಟ್ಟಗಾಯಗಳು ಅಡುಗೆ ಮನೆಯ ಅಪಘಾತಗಳಿಂದ ಅಲ್ಲ ಎಂಬುದು ಸ್ಪಷ್ಟವಾಗಿದ್ದರೂ ಸಹ ಪೊಲೀಸರು ಪ್ರಕರಣಗಳನ್ನು ತನಿಖೆ ಮಾಡುವುದಿಲ್ಲ. ಸುಟ್ಟ ಗಾಯಗಳಿಂದ ಅವರ ಆರೋಗ್ಯ ಸಮಸ್ಯೆಗಳಿಂದ, ಅವರು ಯೋಗ್ಯವಾದ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ಬಾಡಿಗೆ, ಆಹಾರ ಮತ್ತು ಮಕ್ಕಳ ಶಿಕ್ಷಣ ಎಲ್ಲವೂ ತೊಂದರೆಯಾಗುತ್ತದೆ ಎಂದು ದೇವಿ ಹೇಳಿದರು.

ಇನ್ನೂ KSLSA ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಪೊಲೀಸರು ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ತನಿಖೆ ಮಾಡಲು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಲು ಒಲವು ತೋರುತ್ತಿಲ್ಲ. ಪರಿಹಾರ ನೀಡುವ ಬಗ್ಗೆ ಅರಿವಿನ ಕೊರತೆ ಮತ್ತೊಂದು ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+