ಬುಲ್ಲಿ ಬಾಯ್ ಆ್ಯಪ್ ಮೂಲಕ ಯುವತಿಯರ ಅಶ್ಲೀಲ ಚಿತ್ರ ಪ್ರಕಟ

ಬೆಂಗಳೂರು, ಜ. 05: ಮುಸ್ಲಿಂ ಸಮುದಾಯದ ಯುವತಿಯರನ್ನು ಬುಲ್ಲಿಬಾಯ್ ಆಪ್ ಮೂಲಕ ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ಮೂಲದ ಇಂಜಿನಿಯರಿಂಗ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ ಮನೆ ಮೇಲೆ ಮುಂಬೈ ಪೊಲೀಸರು ದಾಳಿ ನಡೆಸಿದ್ದಾರೆ.

ಬುಲ್ಲಿಬಾಯ್ ಆಪ್ ಮೂಲಕ ಮುಸ್ಲಿಂ ಯುವತಿಯರನ್ನು ಅಶ್ಲೀಲವಾಗಿ ಚಿತ್ರಿಸಿ ನಕಲಿ ಟ್ವಿಟ್ಟರ್ ಖಾತೆ ಮೂಲಕ ಪ್ರಕಟಿಸಿ ತೇಜೋವಧೆ ಮಾಡುತ್ತಿದ್ದ ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಮುಂಬಯಿ ಪೊಲೀಸರು ಎರಡು ದಿನದ ಹಿಂದೆ ಬಂಧಿಸಿದ್ದರು. ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದ ವಿಶಾಲ್ ಕುಮಾರ್ ಝಾ ಬಂಧಿತ ಆರೋಪಿ. ಈತ ನೀಡಿದ ಮಾಹಿತಿ ಮೇರೆಗೆ ಉತ್ತರಾಖಂಡ್ ಮೂಲದ ಸ್ವಾತಿಸಿಂಗ್ ಎಂಬ 19 ವರ್ಷದ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿನಿಯನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ವಿಶಾಲ್ ಕುಮಾರ್ ನನ್ನು ಮುಂಬಯಿ ನ್ಯಾಯಾಲಯದಲ್ಲಿ ಹಾಜರುಪಡಿಸಿ ಜ.10ರ ವರೆಗೂ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ವಿಶಾಲ್ ನೆಲೆಸಿದ್ದ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆ ಮನೆ ಮೇಲೆ ಬುಧವಾರ ದಾಳಿ ನಡೆಸಿ ಪೊಲೀಸರು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಶ್ವೇತಾ ಸಿಂಗ್‌ಳನ್ನ ಉತ್ತರಾಖಂಡ್ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿ ನಾಲ್ಕು ದಿನಗಳ ಪೊಲೀಸ್ ವಶಕ್ಕೆ ಪಡೆದಿದ್ದಾರೆ.

Bulli bai app scam: Mumbai police search engineering student house

ಶ್ವೇತಾ ಸಿಂಗ್ ಮತ್ತು ವಿಶಾಲ್ ಕುಮಾರ್ ಝಾ ಪರಸ್ಪರ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಶ್ವೇತಾ ಸಿಂಗ್ ಮಾರ್ಫಿಂಗ್ ಪೋಟೋಗಳನ್ನ ತಯಾರಿಸಿ ನಕಲಿ ಟ್ವಿಟ್ಟರ್ ಖಾತೆಗಳಲ್ಲಿಪೋಸ್ಟ್ ಮಾಡುವ ಮೂಲಕ ಪ್ರಧಾನ ಪಾತ್ರ ವಹಿಸುತ್ತಿದ್ದಳು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇಬ್ಬರು ಆರೋಪಿಗಳನ್ನು ಸದ್ಯಕ್ಕೆ ವಿಚಾರಣೆಗೆ ಒಳಪಡಿಸಿದ್ದು, ಇದರ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳೆಯರ ಪೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಪಡೆದು ಅವನ್ನು ಬುಲ್ಲಿ ಬಾಯ್ ಆಪ್ ಮೂಲಕ ಎಡಿಟ್ ಮಾಡಿ ಅಶ್ಲೀಲವಾಗಿ ಚಿತ್ರಿಸುತ್ತಿದ್ದರು. ಅಸಲಿ ಚಿತ್ರ ಇರುವ ಹಾಗೆ ಎಡಿಟ್ ಮಾಡಿ ಅವನ್ನು ನಕಲಿ ಟ್ವಿಟ್ಟರ್ ಖಾತೆ ಮೂಲಕ ಪ್ರಕಟಿಸುತ್ತಿದ್ದರು. ಇದು ಮುಂಬಯಿ ಪೊಲೀಸರ ನಿದ್ದೆಗೆಡಿಸಿತ್ತು. ಬುಲ್ಲಿ ಬಾಯ್ ಆಪ್ ಹಾಗೂ ನಕಲಿ ಸಾಮಾಜಿಕ ಜಾಲ ತಾಣಗಳ ಬೆನ್ನು ಬಿದ್ದ ಪೊಲೀಸರು ಎರಡು ದಿನದ ಹಿಂದೆ ಬೆಂಗಳೂರಿನಲ್ಲಿ ವಿಶಾಲ್ ಕುಮಾರ್ ಝಾ ನನ್ನು ಬಂಧಿಸಿದ್ದಾರೆ. ಆತ ನೀಡಿದ ಮಾಹಿತಿ ಮೇರೆಗೆ ಉತ್ತರಖಾಂಡ ಮೂಲದ ಶ್ವೇತಾ ಸಿಂಗ್ ಳನ್ನು ಬಂಧಿಸಿದ್ದಾರೆ. ಇದು ಮೇಲ್ನೋಟಕ್ಕೆ ದೊಡ್ಡ ಜಾಲದಂತೆ ಕಾಣಿಸುತ್ತಿದ್ದು, ಶಾಮೀಲಾಗಿರುವ ಇತರೆ ಆರೋಪಿಗಳಿಗಾಗಿ ಮುಂಬಯಿ ಪೊಲೀಸರು ಬಲೆ ಬೀಸಿದ್ದಾರೆ.

Bulli bai app scam: Mumbai police search engineering student house

ಸರಣಿ ದೂರುಗಳು:

ಬುಲ್ಲಿಬಾಯ್ ಆಪ್ ನಲ್ಲಿ ಒಂದು ಸಮುದಾಯಕ್ಕೆ ಸೇರಿದ ಮಹಿಳೆ ಹಾಗೂ ಯುವತಿಯರ ಚಿತ್ರಗಳನ್ನು ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿದ್ದು ದೇಶದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ದೆಹಲಿ, ಮುಂಬಯಿ, ಹೈದರಾಬಾದ್ ಸೇರಿದಂತೆ ಅನೇಕ ಕಡೆ ಬುಲ್ಲಿ ಬಾಯ್ ಹೆಸರಿನಲ್ಲಿ ಅಶ್ಲೀಲ ಭಾವಚಿತ್ರ ಪ್ರಕಟಿಸಿದ್ದರು. ಈ ಕುರಿತು ಸರಣಿ ದೂರುಗಳು ದಾಖಲಾಗಿದ್ದವು. ಇದರ ಬೆನ್ನಲ್ಲೇ ಮುಂಬಯಿ ಪೊಲೀಸರು ಈ ಜಾಲವನ್ನು ಪತ್ತೆ ಮಾಡಿದ್ದು, ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಉತ್ತರಾಖಂಡ ಮೂಲದ ಯುವತಿ ಬಂಧನಕ್ಕೆ ಒಳಗಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+