ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023: ದೇಶದ ಆರ್ಥಿಕತೆಯ ಬೆಳವಣಿಗೆ, ಹೊಸ ಮನ್ವಂತರದ ದಿಕ್ಸೂಚಿ-ಬಿಜೆಪಿ

ಸಂಸತ್​​ನಲ್ಲಿ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ದೇಶದ ಆರ್ಥಿಕತೆಯ ಬೆಳವಣಿಗೆ ಹೊಸ ಮನ್ವಂತರದ ದಿಕ್ಸೂಚಿ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 1: ಸಂಸತ್​​ನಲ್ಲಿ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ ಸತತ 5ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣ ಬಜೆಟ್‌ ಇದಾಗಿದೆ.

ಕೇಂದ್ರ ಬಜೆಟ್‌ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಭರವಸೆ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಸಮಗ್ರ ಅಭಿವೃದ್ಧಿಯ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಯಶಸ್ಸಿನ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ದೇಶದ ಆರ್ಥಿಕತೆಯ ಕಿರುನೋಟದಲ್ಲಿ ಕೈಗಾರಿಕೆಗಳ ಬೆಳವಣಿಗೆ, ಜಿಡಿಪಿ, ಕೃಷಿ ಕ್ಷೇತ್ರದಲ್ಲಿ ಆದ ಮಹತ್ತರ ಬದಲಾವಣೆಗಳು ಹೊಸ ಮನ್ವಂತರದ ದಿಕ್ಸೂಚಿಗಳಾಗಿವೆ ಎಂದು ಬಿಜೆಪಿ ತಿಳಿಸಿದೆ.

ಕೃಷಿ‌ ವಲಯಕ್ಕೆ ಯುಪಿಎ ಸರ್ಕಾರ ₹7.3 ಲಕ್ಷ‌ ಕೋಟಿ ಸಾಲ ನೀಡಿದ್ದರೆ ನರೇಂದ್ರ ಮೋದಿ ಅವರ ಸರ್ಕಾರ ₹18.5 ಲಕ್ಷ ಕೋಟಿ‌ ಸಾಲ ರೈತರಿಗೆ ನೀಡಿದೆ. ಯುಪಿಎ‌ ಸರ್ಕಾರ ರೈತರ‌ 65,000 ಕೋಟಿ ಸಾಲ‌ ಮನ್ನಾ ಮಾಡಿ ಬೀಗಿತ್ತು. ಆದರೆ ನಮ್ಮ ಸರ್ಕಾರ 11.4 ಕೋಟಿ ರೈತರ ಖಾತೆಗಳಿಗೆ ₹2.16 ಲಕ್ಷ ಕೋಟಿ ನೇರ ನಗದು ವರ್ಗಾಯಿಸಿದೆ.

Budget 2023 Reactions : Karnataka BJP Reaction About Union Budget 2023-24

ದೇಶದ ಅತಿಮುಖ್ಯ ಸಂಪತ್ತು ಸರ್ಕಾರದ ಖಜಾನೆಯಲ್ಲಿರುವ ಹಣವಲ್ಲ, ಬದಲಾಗಿ ಜನಸಾಮಾನ್ಯರ ಕೈಯಲ್ಲಿರುವ ಹಣ. 2014ರಲ್ಲಿ ₹99 ಲಕ್ಷ ಕೋಟಿ ಇದ್ದ ಜನಸಾಮಾನ್ಯರ ಬ್ಯಾಂಕ್‌ ಠೇವಣಿ ಇದೀಗ ₹176.7 ಲಕ್ಷ ಕೋಟಿಗಳಿಗೆ ತಲುಪಿದ್ದು ಸಧೃಡ ಪ್ರಗತಿಯ ಸಂಕೇತ ಎಂದು ಬಿಜೆಪಿ ಖುಷಿ ಹಂಚಿಕೊಂಡಿದೆ.

2014ರಲ್ಲಿ 71,118 ಇದ್ದ ಸರಾಸರಿ ತಲಾದಾಯವನ್ನು 2022ರ ವೇಳೆಗೆ 1,50,007ಕ್ಕೆ ಹೆಚ್ಚಳ ಮಾಡಿದ್ದು ಪ್ರಧಾನಿ ಮೋದಿ ಅವರ ಅಭಿವೃದ್ಧಿ ಪರ ಆಡಳಿತ. ಪರಿಣಾಮವಾಗಿ ಇಂದು ಜಿಡಿಪಿ ಬೆಳೆದು ಇಂಗ್ಲೆಂಡನ್ನೇ ಹಿಂದಿಕ್ಕಿ, ಭಾರತ ಐದನೇ ಸ್ಥಾನಕ್ಕೆ ಏರಿದೆ ಎಂದು ರಾಜ್ಯ ಬಿಜೆಪಿ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

English summary
Budget 2023 Reactions :Karnataka BJP tweet about Union Budget 2023-24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X