ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಎಂದು ಹೇಳಿದ್ದು ಪಾರ್ಥೇನಿಯಂ ಗಿಡಕ್ಕೆ, ಪಕ್ಷಕ್ಕಲ್ಲ!: ಸಚಿವರ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 4: ಕೊಳ್ಳೇಗಾಲದಲ್ಲಿ 'ಸ್ವಚ್ಛ ಭಾರತ' ಯೋಜನೆ ಕಾರ್ಯಕ್ರಮದಲ್ಲಿ 'ಕಾಂಗ್ರೆಸ್ ಗಿಡ ಅಪಾಯಕಾರಿ, ಅದನ್ನು ಕಿತ್ತು ಸ್ವಚ್ಛತೆಗೆ ಚಾಲನೆ ನೀಡಿದ್ದೇನೆ' ಎಂದಿದ್ದ ಸಚಿವ ಎನ್. ಮಹೇಶ್, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಹಳ್ಳಿ ಕಡೆ ಪಾರ್ಥೇನಿಯಂ ಕಳೆ ಗಿಡಕ್ಕೆ ಕಾಂಗ್ರೆಸ್ ಎಂದು ಹೇಳುತ್ತಾರೆ. ಅಂದು ತಾವು ಕಾಂಗ್ರೆಸ್ ಗಿಡ ಎಂದು ಹೇಳುವಾಗ ಕಾಂಗ್ರೆಸ್ ಪಕ್ಷ ತಲೆಯಲ್ಲಿ ಇರಲಿಲ್ಲ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಬಿಎಸ್‌ಪಿಯ ಎನ್.ಮಹೇಶ್? ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಬಿಎಸ್‌ಪಿಯ ಎನ್.ಮಹೇಶ್?

ಕಾಂಗ್ರೆಸ್ ಗಿಡ ಕಿತ್ತಿದ್ದೇನೆ ಎಂಬ ಹೇಳಿಕೆಗೆ ಚಾಮರಾಜನಗರದ ಶಾಸಕ, ಸಚಿವ ಸಿ. ಪುಟ್ಟರಂಗಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು. ಮೊದಲ ಬಾರಿಗೆ ಜೆಡಿಎಸ್ ಬೆಂಬಲದೊಂದಿಗೆ ಬಿಎಸ್‌ಪಿಯ ಎನ್. ಮಹೇಶ್ ಜಯಗಳಿಸಿದ್ದರು. ಹೀಗಾಗಿ ಕಾಂಗ್ರೆಸ್ ಗಿಡದ ಹೇಳಿಕೆಯನ್ನು ಪಕ್ಷದ ಕುರಿತು ನೀಡಿದ ಹೇಳಿಕೆ ಎಂದೇ ವ್ಯಾಖ್ಯಾನಿಸಲಾಗಿತ್ತು.

bsp minister N Mahesh clarification on Congress parthenium statement

ಲೋಕಸಭೆಗೆ ಸಿದ್ಧತೆ:
'ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಎಲ್ಲ 28 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ಉದ್ದೇಶಿಸಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಬಳಿ ಚರ್ಚಿಸಿಲ್ಲ.

'ಕಾಂಗ್ರೆಸ್ ಕಳೆ' ವಿವಾದ: ಇಬ್ಬರು ಸಚಿವರ ಬಹಿರಂಗ ಕಿತ್ತಾಟ 'ಕಾಂಗ್ರೆಸ್ ಕಳೆ' ವಿವಾದ: ಇಬ್ಬರು ಸಚಿವರ ಬಹಿರಂಗ ಕಿತ್ತಾಟ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗಿನ ಮೈತ್ರಿ ಕಡಿತಕ್ಕೂ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದಕ್ಕೂ ಸಂಬಂಧವಿಲ್ಲ. ಮೈತ್ರಿ ಸರ್ಕಾರದಿಂದಲೇ ಸಚಿವನಾಗಿದ್ದೇನೆ. ಮಾಯಾವತಿ ಆದೇಶಿಸುವವರೆಗೂ ಸಚಿವ ಸ್ಥಾನದಲ್ಲಿ ಮುಂದುವರಿಯುತ್ತೇನೆ ಎಂದು ಮಹೇಶ್ ಹೇಳಿದ್ದಾರೆ.

ಚಾಮರಾಜನಗರದ ಸಚಿವದ್ವಯರ ಮುಸುಕಿನ ಗುದ್ದಾಟ ಬೀದಿಗೆ ಬಂತು!ಚಾಮರಾಜನಗರದ ಸಚಿವದ್ವಯರ ಮುಸುಕಿನ ಗುದ್ದಾಟ ಬೀದಿಗೆ ಬಂತು!

ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಸುವುದಿಲ್ಲ ಎಂಬ ಮಾಯಾವತಿ ನಡೆ, ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿರುವ ಬಿಎಸ್‌ಪಿಯ ಏಕೈಕ ಸಚಿವ ಎನ್. ಮಹೇಶ್ ಅವರ ಸ್ಥಾನಕ್ಕೂ ಕುತ್ತು ತರಲಿದೆ ಎಂದು ಹೇಳಲಾಗುತ್ತಿದೆ.

ಕುಮಾರಸ್ವಾಮಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ ಕುಮಾರಸ್ವಾಮಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಹೇಶ್ ಅವರನ್ನು ಸಂಪುಟ ವಿಸ್ತರಣೆ ವೇಳೆ ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಅದರ ಬೆನ್ನಲ್ಲೇ ಮಹೇಶ್ ಈ ಸ್ಪಷ್ಟನೆ ಕೊಟ್ಟಿದ್ದಾರೆ.

English summary
Minister from BSP N Mahesh has clarified his statement on Congress removing, as he was refering to Parthenium plant, not party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X