ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಿಂದೂ ಅಲ್ಲ: ವೀರಶೈವ ಮಹಾಸಭಾ

ತುಮಕೂರು, ನವೆಂಬರ್‌ 11: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದೂ ಅಲ್ಲ, ಅವರು ವೀರಶೈವ ಲಿಂಗಾಯತರು ಎಂದು ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ಹೇಳಿಕೆ ನೀಡಿದ್ದಾರೆ.

ವೀರಶೈವ - ಲಿಂಗಾಯತ ಮಹಾಸಭಾ ಸಮಾವೇಶದ ಪೂರ್ವ ತಯಾರಿ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರೇ ಆಗಿದ್ದರೆ, ಅವರು ಹಿಂದೂ ಆಗಲು ಸಾಧ್ಯವಿಲ್ಲ. ತಾವು ಹಿಂದೂ ಅಲ್ಲ ಎಂದು ಹೇಳಿಕೊಳ್ಳುವುದು, ಬಿಡುವುದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.

ವೀರಶೈವ ಲಿಂಗಾಯುತರು ನಾವು ಪ್ರತ್ಯೇಕ ಧರ್ಮ ಕೇಳುತ್ತಿದ್ದೇವೆ. ಜೈನರು ಹೇಗೆ ಹಿಂದೂ ಅಲ್ಲವೂ, ಬೌದ್ಧರು ಹೇಗೆ ಹಿಂದೂ ಅಲ್ಲವೋ, ಸಿಖ್‌ ಹೇಗೇ ಹಿಂದೂ ಅಲ್ಲವೋ ಹಾಗೆ ನಮ್ಮ ಧರ್ಮಕ್ಕೆ ನಾವು ಕೇಳುತ್ತಿದ್ದೇವೆ. ಹೋರಾಟ ಮಾಡುತ್ತಿದ್ದೇವೆ. ವೀರಶೈವರಲ್ಲಿ 105 ಉಪಪಂಗಡಗಳಿವೆ. ನಮ್ಮ ಬೈಲಾವನ್ನಲ್ಲಿ ಒಪ್ಪಿಕೊಂಡು ಬರುವವರಿಗೆ ಸ್ವಾಗತ. ಇದರಲ್ಲಿ ಜಾತಿ ಬೇಧ ಇಲ್ಲ. ಕಟ್ಟುಪಾಡುಗಳಿಲ್ಲ. ಇಂದಿನಿಂದ ಲಿಂಗ ಧರಿಸಿ ಬೈಲಾವನ್ನು ಒಪ್ಪಿಕೊಂಡು ಬರುವವರಿಗೆ ಸ್ವಾಗತ ಎಂದು ಹೇಳಿದ್ದಾರೆ.

BS Yediyurappa Not A Hindu He Is Veerashaiva Lingayat Said By Sagaranahalli Nataraj

ಇನ್ನು ವೀರಶೈವ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮ. ಹಿಂದೂ ಧರ್ಮಕ್ಕೂ, ನಮ್ಮ ಆಚರಣೆಗೂ ಕೆಲವು ವ್ಯತ್ಯಾಸಗಳಿವೆ. ನಮ್ಮದೇ ಪ್ರತ್ಯೇಕ ಧರ್ಮವಾಗಿದೆ. ಬೌದ್ಧ ಧರ್ಮ, ಸಿಖ್ ಧರ್ಮಗಳಂತೆ ಪ್ರತ್ಯೇಕ ಮಾಡಿದ್ದೀರೋ ಹಾಗೇ ನಮಗೂ ಪ್ರತ್ಯೇಕ ಧರ್ಮ ಕೊಡಬೇಕು ಎಂದು ಮೊದಲಿನಿಂದಲೂ ಕೇಳುತ್ತಿದ್ದೇವೆ. ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ಪ್ರತ್ಯೇಕ ಧರ್ಮ ಹೋರಾಟ ಸರಿಯಿದೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವೀರಶೈವ ಲಿಂಗಾಯತರಾಗಿರುವ ನಮ್ಮಲ್ಲೂ ಆಚರಣೆಗಳು ವಿಭಿನ್ನವಾಗಿವೆ. ಕೆಲವರಿಗೆ ವಿಭೂತಿಧಾರಣೆ ಇಷ್ಟ ಇಲ್ಲದೇ ಇರಬಹುದು. ಇನ್ನೂ ಕೆಲವರಿಗೆ ರುದ್ರಾಕ್ಷಿ ಧಾರಣೆ ಇಷ್ಟ ಇಲ್ಲದಿರಬಹುದು. ಆದರೆ, ಈ ಎಲ್ಲರನ್ನೊಳಗೊಂಡು ವೀರಶೈವ ಲಿಂಗಾಯತ ಧರ್ಮವಿದೆ. ನಾವು ಸಹ ಹಿಂದೂ ಧರ್ಮದ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ಆದರೆ ನಮ್ಮ ಆಚರಣೆ, ಶಾಸ್ತ್ರ, ಸಂಸ್ಕೃತಿ ಬೇರೆ ಎಂದರು.

ಇನ್ನು ನವೆಂಬರ್ ‌12 ಮತ್ತು 13 ರಂದು ಸಿದ್ದಗಂಗಾ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಸಮಾವೇಶದ ನಡೆಯಲಿದ್ದು, ಈ ಬಗ್ಗೆ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+