ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟ ಯಡಿಯೂರಪ್ಪ
ಬೆಂಗಳೂರು, ಫೆಬ್ರವರಿ 04:'ನಂಬರ್ ಒನ್ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಸುಸ್ವಾಗತ' ಎಂದು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯನವರಿಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಅವರು ಟ್ವಿಟ್ಟರ್ ಮೂಲಕವೇ ತಿರುಗೇಟು ನೀಡಿದ್ದಾರೆ.
ಪ್ರಧಾನಿಗೆ ಸ್ವಾಗತ ಕೋರಿದ್ದಕ್ಕೆ ಧನ್ಯವಾದಗಳು ಸಿಎಂ ಸಿದ್ದರಾಮಯ್ಯನವರೇ ಹೌದು, ಕರ್ನಾಟಕ ಮೊದಲ ಸ್ಥಾನದಲ್ಲಿದೆ ಯಾವುದರಲ್ಲಿ ಎಂದರೆ ಭ್ರಷ್ಟಾಚಾರದಲ್ಲಿ ಎಂದು ಕಾಲೆಳೆದಿದ್ದಾರೆ.

'ರಾಜ್ಯದಲ್ಲಿ 3,500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಅಧಿಕಾರಿಗಳು ನಿಗೂಢವಾಗಿ ಮೃತಪಡುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗುತ್ತಿದೆ' ಎಂದು ಬಿಎಸ್ವೈ ಕಿಡಿಕಾರಿದ್ದಾರೆ.
Thanks for the welcome CM @siddaramaiah avare! Yes. Karnataka indeed has scripted several firsts - No.1 Corrupt State, 3,500+ farmer suicides, collapse of law & order, mysterious deaths of officers, transfers of honest officials, crumbling infra of Bengaluru. #KarnatakaTrustsModi https://t.co/TXrdge4hDx
— B.S. Yeddyurappa (@BSYBJP) February 4, 2018
ಇದಕ್ಕೂ ಮುಂಚೆ ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, 'ನಮ್ಮ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ. ಹಲವು ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕ ಅಭಿವೃದ್ಧಿ, ಹೂಡಿಕೆ, ಆವಿಷ್ಕಾರದಲ್ಲಿ ದೇಶಕ್ಕೆ ಮಾದರಿಯಾಗಿದೆ' ಎಂದು ಪ್ರಧಾನಿ ಮೋದಿ ಕಾಲೆಳೆದಿದ್ದರು.
Today I will address a rally in Bengaluru. I am delighted to have this opportunity to interact with the wonderful people of Karnataka. You can watch the speech live here. https://t.co/aGxemoOQY4
— Narendra Modi (@narendramodi) February 4, 2018
ನಮ್ಮ ರಾಜ್ಯದ ಯಶಸ್ಸು ದೇಶವನ್ನೇ ಹೆಮ್ಮೆ ಪಡುವಂತೆ ಮಾಡುತ್ತದೆ. ನಮ್ಮ ಜನರ ನೀರಿನ ಬವಣೆಯನ್ನು ನೀಗಿಸಲು ಸಮಯ ಕೊಡಿ ಹಾಗೂ ಮಹಾದಾಯಿ ವಿವಾದವನ್ನು ಬಗೆಹರಿಸುವಂತೆ ನಮ್ಮ ಜನರ ಪರವಾಗಿ ನಿಮ್ಮಲ್ಲಿ ಕೇಳಿಕೊಳ್ಳತ್ತೇನೆಂದು ಟ್ವೀಟ್ಟಿಸಿದ್ದರು.












Click it and Unblock the Notifications