ಯಾರಿಗೆ ಸೋಲು-ಗೆಲುವು : ಬ್ರಹ್ಮಾಂಡ ಗುರೂಜಿ ಭವಿಷ್ಯ

ಮನೆಮನೆಗೆ ಗರಿಗರಿ ಕಾಟನ್ ಪೈಜಾಮಾ ಜುಬ್ಬಾ ಅಥವಾ ಕಾಟನ್ ಸೀರೆ ಧರಿಸಿ ಕೈಮುಗಿಯುತ್ತ ಮತಯಾಚನೆಗಿಳಿದಿರುವ ಅಭ್ಯರ್ಥಿಗಳ ಭವಿಷ್ಯ ರಾಜ್ಯದ ಮತದಾರರ ಕೈಯಲ್ಲಿ ಇದೆಯಾದರೂ, ಯಾರು ಜಯಭೇರಿ ಬಾರಿಸಲಿದ್ದಾರೆ, ಯಾರು ಮುಗ್ಗರಿಸಲಿದ್ದಾರೆ ಎಂಬ ಕುರಿತು ತಮ್ಮದೇ ಲೆಕ್ಕಾಚಾರದಲ್ಲಿ ಭವಿಷ್ಯ ನುಡಿಯುವ ಭವಿಷ್ಯಕಾರರ ಅಥವಾ ಜ್ಯೋತಿಷಿಗಳ ಮಾತುಗಳಿಗೆ ಹೆಚ್ಚಿನ ಬೆಲೆ ಇದ್ದೇ ಇರುತ್ತದೆ.

ಭವಿಷ್ಯ ಹೇಳುವುದರಲ್ಲಿ ಹೆಸರುವಾಸಿಯಾಗಿರುವ ಜನಪ್ರಿಯ ಜ್ಯೋತಿಷಿ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಮತ್ತು ರವಿಶಂಕರ್ ಗುರೂಜಿ ಅವರು ಪಬ್ಲಿಕ್ ಟಿವಿಯಲ್ಲಿ, ಕರ್ನಾಟಕದ ಲೋಕಸಭೆ ಚುನಾವಣೆಯಲ್ಲಿ, ಪ್ರಮುಖ ಕ್ಷೇತ್ರಗಳಲ್ಲಿ ಯಾರು ಜಯಭೇರಿ ಬಾರಿಸಿ ಸಂಸತ್ ಪ್ರವೇಶಿಸಲಿದ್ದಾರೆ, ಯಾರು ಸೋಲನುಭವಿಸಲಿದ್ದಾರೆ ಎಂಬ ಕುರಿತು ಭವಿಷ್ಯ ನುಡಿದಿದ್ದಾರೆ. ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ. (ರಾಜ್ಯದ 28 ಕ್ಷೇತ್ರದ ಅಭ್ಯರ್ಥಿಗಳ ಪೂರ್ಣ ಪಟ್ಟಿ)

ಏನೇ ಆಗಲಿ, ಏಪ್ರಿಲ್ 17ರಂದು ಗುರುವಾರ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ, ಬೂತ್ ಗಳಲ್ಲಿ ತೆರಳಿ ತಪ್ಪದೆ ಮತ ಹಾಕಲು ಮರೆಯಬೇಡಿ. ಜ್ಯೋತಿಷಿಗಳು ಏನೇ ಹೇಳಿಕೊಳ್ಳಲಿ, ನೀವು ಮಾತ್ರ ಸಮರ್ಥವಾಗಿ ನಿಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿಗೆ ಮತ ಹಾಕಿರಿ. ಭವ್ಯ ಭಾರತಕ್ಕಾಗಿ ನಿಮ್ಮ ಮತ ಅಮೂಲ್ಯವಾದುದು.

ಅಭ್ಯರ್ಥಿಗಳ ಸೋಲು/ಗೆಲುವಿಗೆ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳಿಬ್ಬರು ನೀಡಿದ ಕಾರಣದ in depth ಹೋಗದೇ, ಇವರು ನೀಡಿದ 'ಫಲಿತಾಂಶದ ಭವಿಷ್ಯ'ವನ್ನು ಮಾತ್ರ ಸ್ಲೈಡಿನಲ್ಲಿ ನೀಡಲಾಗಿದೆ. 28 ಕ್ಷೇತ್ರಗಳ ಪೈಕಿ 18 ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಸ್ಲೈಡಿನಲ್ಲಿ ನೋಡಿ..

ಹಾವೇರಿ, ದಾವಣಗೆರೆಯಲ್ಲಿ?

ಹಾವೇರಿ, ದಾವಣಗೆರೆಯಲ್ಲಿ?

ಹಾವೇರಿಯಲ್ಲಿ ಬಿಜೆಪಿಯ ಶಿವಕುಮಾರ್ ಉದಾಸಿಗೆ ಗೆಲುವು, ಕಾಂಗ್ರೆಸ್ಸಿನ ಸಲೀಂ ಅಹಮದ್ ಅವರಿಗೆ ಸೋಲು.

ದಾವಣಗೆರೆಯಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ಪೈಪೋಟಿಯಲ್ಲಿ ಬಿಜೆಪಿಯ ಜಿ ಎಂ ಸಿದ್ದೇಶಿಗೆ ಗೆಲುವು, ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಸೋಲು.

ಪ್ರಹ್ಲಾದ್ ಜೋಷಿ ಕಥೆ ಏನು?

ಪ್ರಹ್ಲಾದ್ ಜೋಷಿ ಕಥೆ ಏನು?

ಹುಬ್ಬಳ್ಳಿ ಧಾರವಾಡದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿಗೆ ಗೆಲುವು, ಕಾಂಗ್ರೆಸ್ಸಿನ ವಿನಯ್ ಕುಲ್ಕರ್ಣಿಗೆ ಸೋಲು.

ಬೆಳಗಾವಿಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಮತ್ತು ಕಾಂಗ್ರೆಸ್ಸಿನ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ತೀವ್ರ ಪೈಪೋಟಿ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ಜಯ ಸಾಧ್ಯತೆ.

ಕರಾವಳಿಯಲ್ಲಿ ಯಾರು?

ಕರಾವಳಿಯಲ್ಲಿ ಯಾರು?

ಜ್ಯೋತಿಷಿಗಳ ಪ್ರಕಾರ ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಮುಗ್ಗರಿಸಲಿದ್ದಾರೆ. ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆ ವಿಜಯದ ನಗು ಬೀರಲಿದ್ದಾರೆ.

ದಕ್ಷಿಣಕನ್ನಡ ಕ್ಷೇತ್ರದಲ್ಲಿ ಹಿರಿಯ ರಾಜಕರಾಣಿ, ಮಹಾನ್ ದೈವಭಕ್ತ ಜನಾರ್ಧನ ಪೂಜಾರಿ ಜಯಭೇರಿ ಭಾರಿಸಲಿದ್ದಾರೆ. ನಳಿನ್ ಕುಮಾರ್ ಕಟೀಲ್ ಇಲ್ಲಿ ಕ್ಲೋಸ್ ಫಿನಿಷ್ ನಲ್ಲಿ ಸೋಲಲಿದ್ದಾರೆ.

ಗುಲ್ಬರ್ಗ, ಬೀದರ್

ಗುಲ್ಬರ್ಗ, ಬೀದರ್

ಗುಲ್ಬರ್ಗದಲ್ಲಿ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿಯ ರೇವೂ ನಾಯಕ್ ಬೆಳಮಗಿ ವಿರುದ್ದ ಕೂದಲೆಳೆಯ ಜಯ.

ಬೀದರ್ ನಲ್ಲಿ ಬಿಜೆಪಿಯ ಭಗವಂತ ಖೂಬಗೆ ಗೆಲುವು, ಕಾಂಗ್ರೆಸ್ಸಿನ ಧರಂಸಿಂಗ್ ಗೆ ಸೋಲು.

ಬಳ್ಳಾರಿಯಲ್ಲಿ ಶ್ರೀರಾಮುಲು ಕಥೆ?

ಬಳ್ಳಾರಿಯಲ್ಲಿ ಶ್ರೀರಾಮುಲು ಕಥೆ?

ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಎನ್ ವೈ ಹನುಮಂತಪ್ಪಗೆ ಬಿಜೆಪಿಯ ಶ್ರೀರಾಮುಲು ವಿರುದ್ದ ಗೆಲುವು.

ಕೋಲಾರದಲ್ಲಿ ಕಾಂಗ್ರೆಸ್ಸಿನ ಮುನಿಯಪ್ಪ ಮೂರನೇ ಸ್ಥಾನಕ್ಕೆ. ಬಿಜೆಪಿಯ ಎಂ ನಾರಾಯಣಸ್ವಾಮಿಗೆ ಜೆಡಿಎಸ್ ಅಭ್ಯರ್ಥಿ ವಿರುದ್ದ ಗೆಲುವು.

ಮಂಡ್ಯ, ಚಿಕ್ಕಬಳ್ಳಾಪುರ

ಮಂಡ್ಯ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ. ಬಿಜೆಪಿಯ ಬಚ್ಚೇಗೌಡ ಅವರಿಗೆ ಕಾಂಗ್ರೆಸ್ಸಿನ ವೀರಪ್ಪ ಮೊಯ್ಲಿ ವಿರುದ್ದ ಗೆಲುವು.

ಮಂಡ್ಯದಲ್ಲಿ ಕಾಂಗ್ರೆಸ್ಸಿನ ರಮ್ಯಾಗೆ ಜೆಡಿಎಸ್ ಪಕ್ಷದ ಪುಟ್ಟರಾಜು ವಿರುದ್ದ ಅತಿ ಪ್ರಯಾಸದ ಗೆಲುವು.

ಶಿವಮೊಗ್ಗದಲ್ಲಿ ಬಿಎಸ್ವೈ ಭವಿಷ್ಯ?

ಶಿವಮೊಗ್ಗದಲ್ಲಿ ಬಿಎಸ್ವೈ ಭವಿಷ್ಯ?

ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರಿಗೆ ಜೆಡಿಎಸ್ ಪಕ್ಷದ ಗೀತಾ ಶಿವರಾಜ್ ಕುಮಾರ್ ವಿರುದ್ದ ಗೆಲುವು.

ತುಮಕೂರಿನಲ್ಲಿ ಬಿಜೆಪಿಯ ಬಸವರಾಜ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕೃಷ್ಣಪ್ಪ ವಿರುದ್ದ ಗೆಲುವು. ಕಾಂಗ್ರೆಸ್ಸಿನ ಮುದ್ದು ಹನುಮೇಗೌಡ ಮೂರನೇ ಸ್ಥಾನದಲ್ಲಿ.

ಮೈಸೂರು ಮತ್ತು ಹಾಸನ

ಮೈಸೂರು ಮತ್ತು ಹಾಸನ

ಹಾಸನದಲ್ಲಿ ಜೆಡಿಎಸ್ ಪಕ್ಷದ ದೇವೇಗೌಡ ಅವರಿಗೆ ಕಾಂಗ್ರೆಸ್ಸಿನ ಮಂಜು ವಿರುದ್ದ ಸುಲಭದ ಗೆಲುವು.

ಮೈಸೂರಿನಲ್ಲಿ ಕಾಂಗ್ರೆಸ್ಸಿನ ಎಚ್ ವಿಶ್ವನಾಥ್ ಅವರಿಗೆ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ದ ನಿರಾಯಾಸ ಗೆಲುವು.

ಬೆಂಗಳೂರು ದಕ್ಷಿಣ, ಉತ್ತರ

ಬೆಂಗಳೂರು ದಕ್ಷಿಣ, ಉತ್ತರ

ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ಸಿನ ನಂದನ್ ನಿಲೇಕಣಿಗೆ ಬಿಜೆಪಿಯ ಅನಂತ್ ಕುಮಾರ್ ವಿರುದ್ದ ಪ್ರಯಾಸದ ಗೆಲುವು.

ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಸದಾನಂದ ಗೌಡ ಅವರಿಗೆ ಕಾಂಗ್ರೆಸ್ಸಿನ ನಾರಾಯಣಸ್ವಾಮಿ ವಿರುದ್ದ ಗೆಲುವು.

ಯಾರಿಗೆ ಎಷ್ಟು ಸ್ಥಾನ?

ಯಾರಿಗೆ ಎಷ್ಟು ಸ್ಥಾನ?

ಬಿಜೆಪಿ - 12 ರಿಂದ 15
ಕಾಂಗ್ರೆಸ್ - 9 ರಿಂದ 13
ಜೆಡಿಎಸ್ - 2 ರಿಂದ 3

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+