Breaking: SC- ST ಮೀಸಲಾತಿ ಹೆಚ್ಚಳ: ಶೀಘ್ರವೇ ಗೆಜೆಟ್ ಅಧಿಸೂಚನೆ: ಸಿಎಂ ಬೊಮ್ಮಾಯಿ
ಬೆಂಗಳೂರ, ಅ.8: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC ST) ಮೀಸಲಾತಿ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೇ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಹಳ ವರ್ಷಗಳ ನ್ಯಾಯಸಮ್ಮತವಾದ ಬೇಡಿಕೆ, ಸಂವಿಧಾನದಲ್ಲಿ ಹೇಳಿರುವಂತೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯಂತೆ ಪರಿಶಿಷ್ಟ ಜಾತಿಗೆ ಶೇ 15 ರಷ್ಟಿದ್ದ ಮೀಸಲಾತಿಯನ್ನು ಶೇ. 17% ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 3 ರಿಂದ ಶೇ.7% ಕ್ಕೆ ಮೀಸಲಾತಿ ಹೆಚ್ಚಿಸಲು ಒಮ್ಮತದ ತೀರ್ಮಾನಕ್ಕೆ ಸಂಪುಟ ಸಭೆಯೂ ಅನುಮೋದನೆ ನೀಡಿದೆ. ಇದನ್ನು ಕೂಡಲೇ ರಾಜ್ಯಪತ್ರದಲ್ಲಿ (ಗೆಜೆಟ್ ನೋಟಿಫಿಕೇಶನ್ )ಪ್ರಕಟಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಅಲೆಮಾರಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಲುವಾಗಿ ನಿಗಮ ಮಾಡಲು ನಾಗಮೋಹನ್ ದಾಸ್ ಹೇಳಿದ್ದರು. ಅದನ್ನೂ ಸಹ ಮಾಡಲು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ನಿರ್ಣಯಕ್ಕೆ ಕಾನೂನಿನ ರಕ್ಷಣೆ ಕಾರಣದಿಂದ ಶೆಡೂಲ್ ೯ರಲ್ಲಿ ಸೇರಿಸಲು ಏನೆಲ್ಲಾ ವಿಧಿ ವಿಧಾನ ಇವೆ ಎಂಬುದನ್ನು ಕಾನೂನು ಸಚಿವರು, ಕಾನೂನು ತಜ್ಞರು, ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಶೇ 50ರಷ್ಟು ದಾಟಿದೆ. ಈಗ ಮೀಸಲಾತಿ ಹೆಚ್ಚಳಕ್ಕೆ ಅನುಮೋದನೆ ಸಿಗುತ್ತದೆಯೋ ಇಲ್ಲವೇ ಎಂಬ ಅನುಮಾನ ಕೆಲವರಲ್ಲಿ ಇದೆ. ಪರಿಶಿಷ್ಟ ಜನರು ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದು ಅವರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಂದ ದೂರ ಇದ್ದಾಗ ಅದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೀಸಲಾತಿ ಹೆಚ್ಚಿಸಬಹುದು ಎಂದು ಇದೆ.
ಡೂಲ್ ಟ್ರೈಬ್- ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಂದ ದೂರ ಇದ್ದವರಿಗೆ ವಿಶೇಷ ಪ್ರಕರಣವೊಂದು ಪರಿಗಣಿಸಿ ಕೊಡಬಹುದು ಎಂದು ಇದೆ. ಒಂದು ಬೇಸಿಕ್ ಪಾಪುಲೆಷನ್ ಇರಬೇಕು ಮತ್ತು ಶೈಕ್ಷಣೀಕವಾಗಿ ಹಾಗೂ ಸಾಮಾಜಿಕವಾಗಿ ಅಂಕಿ ಅಂಶ ಸಮೇತ ಇವರು ಮುಖ್ಯವಾಹಿನಿಯಿಂದ ದೂರ ಇದ್ದಾರೆ. ಹೀಗಾಗಿ ಇದನ್ನು ವಿಶೇಷ ಪ್ರಕರಣವೆಂದು ಮಾಡಲು ಸಾಧ್ಯತೆ ಇದೆ. ನ್ಯಾಯ ಕೊಡಿಸುವ ಸಲುವಾಗಿ ಮೂಲಭೂತ ಹಕ್ಕು ಎಂದು ಪರಿಗಣಿಸಿ ಅನುಸೂಚಿ 9ನ್ನು ತರಲಾಯಿತು. ಕೇವಲ ಮೀಸಲಾತಿಗೆ ಮಾತ್ರವಲ್ಲ ಹಲವಾರು ವಿಚಾರಗಳು ಇದರಲ್ಲಿ ಬರುತ್ತದೆ. 1994 ರಿಂದ ಈವರೆಗೆ ವಿನಾಯಿತಿ ದೊರೆತಿದೆ. ಈಗಲೂ ಕೂಡ ಅದರ ಬಗ್ಗೆ ತೀರ್ಪು ಹೊರಬಂದಿಲ್ಲ. ಈಗಾಗಲೇ ತಮಿಳುನಾಡು, ಒಡಿಶಾ ಸಹಿತ ಹಲವು ರಾಜ್ಯಗಳಲ್ಲಿ ಮೀಸಲಾತಿ ಹೆಚ್ಚಿಸಲಾಗಿದೆ. ಆದರೆ, ನ್ಯಾಯಾಲಯಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ರಾಜ್ಯದಲ್ಲಿಯೂ ಸಹ ಕಾನೂನು ಸಚಿವರು, ಕಾನೂನು ತಜ್ಞರು, ಅಡ್ವೊಕೇಟ್ ಜನರಲ್ ಈ ಸಂಬಂಧ ಚರ್ಚಿಸಿ ಸೂಕ್ತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.












Click it and Unblock the Notifications