Blood Moon Eclips 2025: ಇನ್ನೇನು ಕೆಲವೇ ಕ್ಷಣಗಳಲ್ಲಿ ರಕ್ತ ಚಂದ್ರಗ್ರಹಣ, ನಾಳೆ ಏನು ಮಾಡಬೇಕು ?

Blood Moon Eclips 2025:ಇನ್ನೇನು ಕೆಲವೇ ಕ್ಷಣಗಳಲ್ಲಿ ಅಪರೂಪದ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. ಈ ಬಾರಿಯ ಚಂದ್ರಗ್ರಹಣ ಮಿಸ್ ಮಾಡಿಕೊಂಡರೆ ನೀವು ಮುಂದಿನ ಬಾರಿ 2028ರಲ್ಲಿ ಚಂದ್ರಗ್ರಹಣ ನೋಡಬಹುದು. ಈ ಬಾರಿಯ ಚಂದ್ರಗ್ರಹಣವು ಹಲವು ಕಾರಣಗಳಿಗೆ ವಿಶೇಷವಾಗಿದೆ. ಭಾನುವಾರದ ರಾತ್ರಿ ಚಂದ್ರಗ್ರಹಣ ಗೋಚರಿಸಲಿದೆ. ಅದರ ಸಮಯ ಹಾಗೂ ನಾಳೆ (ಸೆಪ್ಟೆಂಬರ್ 08ರ ಸೋಮವಾರ) ನೀವು ಏನು ಮಾಡಬೇಕು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಚಂದ್ರಗ್ರಹಣ ಇನ್ನು ಕೆಲವೇ ಕ್ಷಣಗಳಲ್ಲಿ ಸಂಭವಿಸಲಿದೆ. ಸುದೀರ್ಘ ಅವಧಿಯ ಚಂದ್ರಗ್ರಹಣ ಇದಾಗಿದೆ. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಅವಧಿ ಪೂರ್ವವೇ ದೇಶದ ವಿವಿಧ ದೇವಾಲಯಗಳನ್ನು ಮುಚ್ಚಲಾಗಿತ್ತು. ಸೋಮವಾರ ದೇವಾಲಯಗಳ ಶುದ್ಧೀಕರಣ ಪ್ರಕ್ರಿಯೆ ನಡೆಯಲಿದೆ. ಅಲ್ಲದೇ ಸೋಮವಾರ ಹಲವು ವಿಶೇಷ ಪೂಜೆಗಳು ಸಹ ದೇವಾಲಯಗಳಲ್ಲಿ ನಡೆಯಲಿವೆ. ಇನ್ನು ಮೂರು ವರ್ಷದ ನಂತರ ಈ ರೀತಿಯ ಚಂದ್ರಗ್ರಹಣ ಸಂಭವಿಸಲಿದೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಇಂದು ರಾತ್ರಿಯ ಚಂದ್ರಗ್ರಹಣ ನೋಡುವುದಕ್ಕಾಗಿ ಜನ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಎಷ್ಟು ನಿಮಿಷಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ ಅಂತಾ ಮುಂದೆ ನೋಡೋಣ.

Blood Moon Eclipse Tonight What You Should Do Sep 08

ಸುದೀರ್ಘ ಅವಧಿಯ ಮತ್ತು ಅಪರೂಪದ ಚಂದ್ರಗ್ರಹಣ ಭಾರತದಾದ್ಯಂತ ಕಾಣಸಿಗಲಿದೆ. ಇನ್ನು ಸೆಪ್ಟೆಂಬರ್ 07 ಮತ್ತು ಸೆಪ್ಟೆಂಬರ್ 8ರಂದು ಈ ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆ. ಸೆಪ್ಟೆಂಬರ್ 7ರ ರಾತ್ರಿ 9.56ರ ರಾತ್ರಿ ಸ್ಪರ್ಶಕಾಲ ಮತ್ತು ಸೆಪ್ಟೆಂಬರ್‌ 8ರ ಮಧ್ಯರಾತ್ರಿ 1.26ಕ್ಕೆ ಮೋಕ್ಷಕಾಲದಲ್ಲಿ ಸಂಭವಿಸಲಿದೆ.

ಚಂದ್ರಗ್ರಹಣದ ಪೂರ್ಣ ಪ್ರಭಾವದ ಆರಂಭ ಮಧ್ಯರಾತ್ರಿ 12.28 ರಿಂದ 1.56ರ ವರೆಗೆ ಇರುತ್ತದೆ. ಇನ್ನು ಈ ಬಾರಿ ಚಂದ್ರಗ್ರಹಣವು ಸುದೀರ್ಘ ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಂಭವಿಸಲಿದೆ. ಭಾರತದಲ್ಲಿ ಎಲ್ಲಾ ಭಾಗದಲ್ಲೂ ಚಂದ್ರಗ್ರಹಣ ಕಾಣಿಸಿಕೊಳ್ಳಲಿರುವುದು ಈ ಬಾರಿಯ ವಿಶೇಷವಾಗಿದೆ.

ಈ ಬಾರಿ ರಕ್ತವರ್ಣದಲ್ಲಿ ಚಂದಿರ ಕಾಣಿಸಿಕೊಳ್ಳಲಿದೆ. ಚಂದ್ರನು ಸಂಪೂರ್ಣವಾಗಿ ಕೆಂಪುಬಣ್ಣಕ್ಕೆ ತಿರುಗುವುದು ಕಾಣಿಸಲಿದೆ. ಸೂರ್ಯ, ಭೂಮಿ ಹಾಗೂ ಚಂದ್ರ ಒಂದೇ ಸರಳರೇಖೆಯಲ್ಲಿ ಬರುವ ಸಂದರ್ಭದಲ್ಲಿ ಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣವಾಗಿ ಬಿದ್ದಾಗ ಅಥವಾ ಬೀಳುವಾಗ ಚಂದ್ರಗ್ರಹಣ ಸಂಭವಿಸಲಿದೆ.

ಈ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಕೆಂಪು ತರಂಗಾಂತರಗಳು ಭೂಮಿಯ ವಾತಾವರಣದ ಮೂಲಕ ಹಾದುಹೋಗಿ ಚಂದ್ರನ ಮೇಲೆ ವಕ್ರೀಭವನಗೊಳ್ಳಲಿವೆ. ಇದರಿಂದ ಚಂದ್ರ ಕೆಂಪುಬಣ್ಣದಲ್ಲಿ ಕಾಣಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಚಂದ್ರಗ್ರಹಣ 2025ರ ಸಮಯ ವಿವರ ಸೆಪ್ಟೆಂಬರ್ 07 ರಾತ್ರಿ (ಭಾರತೀಯ ಕಾಲಮಾನ)

8:58: ಅರೆ ಅಥವಾ ಭಾಗಶಃ ಚಂದ್ರಗ್ರಹಣ ಪ್ರಾರಂಭವಾಗುತ್ತದೆ

9:57: ಭಾಗಶಃ ಗ್ರಹಣ ಪ್ರಾರಂಭವಾಗುತ್ತದೆ

11 ಪೂರ್ಣ ಪ್ರಮಾಣದ ಗ್ರಹಣ ಪ್ರಾರಂಭವಾಗುತ್ತದೆ

11:41 ಗರಿಷ್ಠ ಚಂದ್ರ ಗ್ರಹಣ

12:22 ಒಟ್ಟಾರೆ ಚಂದ್ರ ಗ್ರಹಣ ಕೊನೆಗೊಳ್ಳುತ್ತದೆ

1:26 ಭಾಗಶಃ ಗ್ರಹಣ ಕೊನೆಗೊಳ್ಳುತ್ತದೆ

2:25 ಅರೆನೆರಳಿನ ಗ್ರಹಣ ಕೊನೆಗೊಳ್ಳುತ್ತದೆ

ಚಂದ್ರ ಗ್ರಹಣದ ಸಮಯದಲ್ಲಿ ಯಾವುದೇ ಅಡೆತಡೆ ಇಲ್ಲದೆ ಚಂದ್ರಗ್ರಹಣವನ್ನು ಕಣ್ತುಂಬಿಕೊಳ್ಳಬಹುದು. ನಿಮಗೆ ಯಾವುದೇ ವಿಶೇಷ ಕನ್ನಡಕದ ಅಗತ್ಯವಿಲ್ಲ. ಮೋಡ ಕವಿದ ವಾತಾವರಣ ಇಲ್ಲದೆ ಇದ್ದರೆ ನೀವು ಚಂದ್ರಗ್ರಹಣವನ್ನು ಪೂರ್ಣವಾಗಿ ನೋಡಲು ಸಾಧ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+