2024 ರ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ದೇಶದಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿ
ಬೆಂಗಳೂರು,ಡಿಸೆಂಬರ್ 21: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಾಖಲೆಯ ಬಹುಮತದೊಂದಿಗೆ ಮಗದೊಮ್ಮೆ ವಿರಾಜಮಾನರಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುವುದು ಶತಸಿದ್ಧ. ಕಮಲ ಅರಳಲಿದೆ, ಕಾಂಗ್ರೆಸ್ ಮುಳಗಲಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಭವಿಷ್ಯ ನುಡಿದಿದೆ.
2024 ರ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ದೇಶದಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿ :
— BJP Karnataka (@BJP4Karnataka) December 21, 2023
▪️ಹೀನಾಯ ಸೋಲಿಗೆ ಮಲ್ಲಿಕಾರ್ಜುನ್ ಖರ್ಗೆ ಹೊಣೆ
▪️ರಾಹುಲ್ ಗಾಂಧಿ ಗೌಪ್ಯವಾಗಿ ಥೈಲ್ಯಾಂಡ್ ಪ್ರವಾಸ
▪️ಸೋನಿಯಾ ಗಾಂಧಿ ವೃದ್ಧಾಪ್ಯ ಕಳೆಯಲು ಇಟಲಿಗೆ
▪️ಪ್ರಿಯಾಂಕಾ ವಾದ್ರಾ ಪತಿ ಜತೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ
▪️ದೇಶಾದ್ಯಂತ ಕಾಂಗ್ರೆಸ್ ಪಕ್ಷದ…
2024 ರ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ಸಿನ ಪರಿಸ್ಥಿತಿ
▪️ಹೀನಾಯ ಸೋಲಿಗೆ ಮಲ್ಲಿಕಾರ್ಜುನ್ ಖರ್ಗೆ ಹೊಣೆ
▪️ರಾಹುಲ್ ಗಾಂಧಿ ಗೌಪ್ಯವಾಗಿ ಥೈಲ್ಯಾಂಡ್ ಪ್ರವಾಸ
▪️ಸೋನಿಯಾ ಗಾಂಧಿ ವೃದ್ಧಾಪ್ಯ ಕಳೆಯಲು ಇಟಲಿಗೆ
▪️ಪ್ರಿಯಾಂಕಾ ವಾದ್ರಾ ಪತಿ ಜತೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ
▪️ದೇಶಾದ್ಯಂತ ಕಾಂಗ್ರೆಸ್ ಪಕ್ಷದ ವಿಸರ್ಜನೆ

ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ರಾಜ್ಯದ ಅಭಿವೃದ್ಧಿಯನ್ನೇ ಯೋಚಿಸದೆ ಅರಾಜಕತೆ ಸೃಷ್ಟಿಸಿ ಸಮಸ್ಯೆಗಳ ಸಾಗರವನ್ನೇ ಹುಟ್ಟು ಹಾಕಿ ಎಲ್ಲಾ ವರ್ಗದ ಜನರಿಂದ ಜನಾಕ್ರೋಶ ಎದುರಿಸುತ್ತಿದೆ. ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಸಿದ್ದರಾಮಯ್ಯರವರಿಗೆ ತಮ್ಮ ದುರಾಡಳಿತದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತವಾಗುತ್ತಿದ್ದಂತೆಯೇ ದೆಹಲಿಗೆ ಓಡಿ ಹೋಗಿ ಸಮಸ್ಯೆಗಳನ್ನು ಬದಿಗೊತ್ತಿ ಈಗ ವಿಷಯಾಂತರಕ್ಕೆ ಕೈ ಹಾಕಿರುವುದು ಮತಿಗೇಡಿತನ. ಸಿದ್ದರಾಮಯ್ಯರವರೇ, ತಾವು ಎಷ್ಟೇ ಸುಳ್ಳಿನ ಸರಪಳಿಯನ್ನು ಸೃಷ್ಟಿಸಿದರೂ ನಾಡಿನ ಜನ ನಂಬುವುದಿಲ್ಲ ಎಂದು ಬಿಜೆಪಿ ಹೇಳಿದೆ.












Click it and Unblock the Notifications